ಭಾರತದ ಅಮೂಲ್ಯ ಪರಂಪರೆ

Author : ಬಿ.ಎಸ್. ರುಕ್ಕಮ್ಮ

Pages 58

₹ 10.00




Year of Publication: 2010

Synopsys

ಲೌಕಿಕ ಕಾನೂನು, ನೀತಿ ಮೊದಲಾದ ವ್ಯವಹಾರಗಳಲ್ಲಿ ಮೇರುಪರ್ವತದಂತಿದ್ದ ನಾನಿ ಫಾಲ್ಕಿವಾಲಾ ಅವರು ಭಾರತದ ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ಎಷ್ಟು ವಿಚಾರಕರಾಗಿದ್ದರು, ವಿಶ್ಲೇಷಣಾಶೀಲರಾಗಿದ್ದರು ಎಂಬುದನ್ನು ಅವರ ಈ ಪುಟ್ಟ ಕೃತಿ ನಮಗೆ ತೋರಿಸುತ್ತದೆ. ಕೇವಲ ಲೌಕಿಕ ಬುದ್ಧಿವಂತಿಕೆ ನಿರರ್ಥಕವೆಂಬುದನ್ನು, ನಾವು ಜಡವೆಂದು ಹೇಳುವ ಜಗತ್ತಿನಲ್ಲಿ ಹೇಗೆ ಚೈತನ್ಯವು ಅದಮ್ಯವಾಗಿ ಮೆರೆಯುತ್ತಿದೆ ಎಂಬುದನ್ನು, ಭಾರತೀಯ ಧರ್ಮ ಮತ್ತು ಸಂಸ್ಕೃತಿ ಎಷ್ಟು ಅಮೂಲ್ಯವಾದುದೆಂಬುದನ್ನೂ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಈ ಕೃತಿಯನ್ನು ಬಿ.ಎಸ್.ರುಕ್ಕುಮ್ಮ ರವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

About the Author

ಬಿ.ಎಸ್. ರುಕ್ಕಮ್ಮ

ರುಕ್ಕಮ್ಮ ಬಿ.ಎಸ್. ಅವರು  ಎಂ.ಎ.(ಕನ್ನಡ) ಸ್ನಾತಕೋತ್ತರ ಪದವೀಧರರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ೨೩-೯-೧೯೩೪ ರಂದು ಮೈಸೂರಿನ  ಬಿ.ಟಿ. ಶ್ರೀನಿವಾಸ ಐಯ್ಯಂಗಾರ್, ಸೀತಮ್ಮ ದಂಪತಿಗಳಿಗೆ ಮಗಳಾಗಿ ಜನಿಸಿದರು. ಇವರ  ಕೃತಿಗಳು : ಶಾಲೆಯ ಮಕ್ಕಳು (ಕಾದಂಬರಿ) ೧೯೫೮. ಅನುವಾದ: ಕೀಟಗಳ ಒಡನಾಡಿ ಫೇಬರ್‌ ಜೀವನ ಮತ್ತು ಕೃತಿ ೧೯೬೦, ಸಮ್ಮುಕ್ತ ಕೌಮುದೀ ಸಂಗ್ರಹ (ಸಂಪಾದಿತ) ೧೯೬೩, ಮೇರಿಕ್ಯೂರಿ ಜೀವನ ಚರಿತ್ರೆ ೧೯೬೮, ಪಾಪು ಅಮ್ಮನಿಗೆ ಹೇಳಿದ ಕಥೆಗಳು (ಮಕ್ಕಳ ಸಾಹಿತ್ಯ) ೧೯೭೧, ಕಚ (ವ್ಯಕ್ತಿಚಿತ್ರ) ೧೯೭೩, ಹರಿಹರ ೧೯೭೩, ವ್ಯಾಪಾರಿ ನುಂಗಣ್ಣ (ಮಕ್ಕಳ ಸಾಹಿತ್ಯ) ...

READ MORE

Related Books