ಭಾರತದ ಭಾಷಿಕ ಸನ್ನಿವೇಶ : ಅಂಬೇಡ್ಕರ್ ಚಿಂತನೆಗಳು

Author : ಮೇಟಿ ಮಲ್ಲಿಕಾರ್ಜುನ

Pages 132

₹ 90.00




Year of Publication: 2022
Published by: ನಿರ್ದೇಶಕರು,ಪ್ರಸಾರಾಂಗ
Address: ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ - 577451

Synopsys

ಲೇಖಕ ಮೇಟಿ ಮಲ್ಲಿಕಾರ್ಜುನ ಅವರ ಕೃತಿ ‘ಭಾರತದ ಭಾಷಿಕ ಸನ್ನಿವೇಶ : ಅಂಬೇಡ್ಕರ್ ಚಿಂತನೆಗಳು’. ಭಾರತದ ಭಾಷಿಕ ಸನ್ನಿವೇಶವನ್ನು ಪರಿಶೀಲಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಭಾಷಾವಾರು ಪ್ರಾಂತ್ಯಗಳ ಮರುವಿಂಗಡನೆಯ ಬಗೆಗಿನ ಬರಹಗಳನ್ನು ನೆಲೆಯಾಗಿಸಿಕೊಂಡ ವಿಶ್ಲೇಷಣೆ ಈ ಕೃತಿಯಲ್ಲಿದೆ. ಆಧುನಿಕ ಭಾರತದ ನಿರ್ಮಾಣದಲ್ಲಿ ಅಂಬೇಡ್ಕರ್ ಅವರ ಪಾತ್ರ ಮಹತ್ವದ್ದಾಗಿದೆ. ಹಾಗಾಗಿ ಅವರ ಭಾಷಿಕ ಚಿಂತನೆಗಳನ್ನು ಆಧರಿಸಿಕೊಂಡು ಪ್ರಸ್ತುತ ಭಾರತದ ಭಾಷಿಕ ಸನ್ನಿವೇಶವನ್ನು ಮರುಪರಿಶೀಲಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

About the Author

ಮೇಟಿ ಮಲ್ಲಿಕಾರ್ಜುನ
(15 August 1970)

ಶಿವಮೊಗ್ಗಾದ ಸಹ್ಯಾದ್ರಿ ಆರ್ಟ್ಸ್ ಕಾಲೇಜಿನ ಭಾಷಾಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಮೇಟಿ ಮಲ್ಲಿಕಾರ್ಜುನ ಅವರು ನುಡಿ ಚಿಂತಕರೆನಿಸಿಕೊಂಡಿದ್ದಾರೆ. ಮೂಲತಃ ಬಾಗಲಕೋಟೆಯವರಾದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತೆಂಕಣದ ನುಡಿಗಳು ಮತ್ತು ಇಂಗ್ಲಿಶ್, ಕರ್ನಾಟಕ ಸಬಾಲ್ಟ್ರನ್ ಓದು ಸಂಪುಟಗಳು, ಕೆವೈಎನ್ ನಾಟಕಗಳ ಓದು ‘ಆಟ-ನೋಟ’ ಅವರ ಸಂಪಾದಿತ ಕೃತಿಗಳು. ...

READ MORE

Related Books