ಭಾರತದ ಸ್ವಾತಂತ್ರ್ಯ ಹೋರಾಟ 60 ಅಗ್ರಗಣ್ಯ ನಾಯಕರು

Author : ಜಿ.ಎಂ. ಕೃಷ್ಣಮೂರ್ತಿ

Pages 226

₹ 120.00




Year of Publication: 2015
Published by: ವಸಂತ ಪ್ರಕಾಶನ

Synopsys

ಜಿ.ಎಂ.ಕೃಷ್ಣಮೂರ್ತಿ ಅವರ ಕೃತಿ ಭಾರತದ ಸ್ವಾತಂತ್ರ್ಯ ಹೋರಾಟ 60 ಅಗ್ರಗಣ್ಯ ನಾಯಕರು . ಪರಕೀಯರ ಬಿಗಿ ಮುಷ್ಟಿಯ ಹಿಡಿತಕ್ಕೆ ಸಿಲುಕಿ ನಲುಗಿದ್ದ ನಮ್ಮ ದೇಶ 1947ರ ಆಗಸ್ಟ್ 15 ರಂದು ಸರ್ವ ಸ್ವತಂತ್ರವಾದಾಗ ದೇಶದ ಇಡೀ ಜನತೆ ಸಂಭ್ರಮೋಲ್ಲಾಸಗಳಿಂದ ನಲಿಯಿತು. ಈ ಸ್ವಾತಂತ್ರ್ಯ ಗಳಿಕೆಯ ಹಿಂದೆ ಅಗಣಿತ ಮಂದಿಯ ಅಪಾರ ಪರಿಶ್ರಮದ, ಅಸಾಮಾನ್ಯ ಧೈರ್ಯದ, ಆಳ ದೇಶನಿಷ್ಠೆಯ ಹೋರಾಟವಿದೆ, ಅನೇಕರ ಬಲಿದಾನವಿದೆ. ಈ ಚರಿತ್ರಾರ್ಹ ಹೋರಾಟಕ್ಕೆ ಪ್ರೇರಣೆಯಾಗಿ, ಅದರಲ್ಲಿ ತಾವೂ ಭಾಗಿಯಾಗಿ ದೇಶದ ಕಣ್ಮಣಿಗಳೆನಿಸಿದ ಅನೇಕ ನಾಯಕರ ಯಾದಿಯೇ ನಮ್ಮ ಕಣ್ಣ ಮುಂದಿದೆ. ಹಿರಿಯ ಲೇಖಕ ಜಿ.ಎಂ. ಕೃಷ್ಣಮೂರ್ತಿಯವರು ಅಪಾರ ಶ್ರಮವಹಿಸಿ ರೂಪಿಸಿಕೊಟ್ಟಿರುವ ಈ ಕೃತಿಯು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ೬೦ ಪ್ರಮುಖ ನಾಯಕರ ಚಿತ್ರಣವನ್ನು ಮನದುಂಬುವಂತೆ ಚಿತ್ರಿಸುತ್ತದೆ. ಮಹಾತ್ಮ ಗಾಂಧಿ, ರಾಜೇಂದ್ರ ಪ್ರಸಾದ್, ವಿನೋಬಾ ಭಾವೆ, ವಲ್ಲಭಬಾಯಿ ಪಟೇಲ್, ಜವಾಹರಲಾಲ್ ನೆಹರೂ, ಲಾಲಾ ಲಜಪತ್ರಾಯ್, ಭಗತ್ ಸಿಂಗ್, ಸುಭಾಷ್ಚಂದ್ರ ಬೋಸ್, ರಾಮಮನೋಹರ ಲೋಹಿಯಾ ಮೊದಲಾದವರ ದೇಶಭಕ್ತಿ, ಕಾರ್ಯ ನಿಷ್ಠೆ, ಸಂಘಟನಾ ಚಾತುರ್ಯಗಳನ್ನು ಅರಿಯುವುದೇ ಒಂದು ಚೇತೋಹಾರಿ ಅನುಭವ. ಸರಳ ಶೈಲಿಯ ಈ ಕೃತಿ ಓದುಗರ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಮನ ಒಪ್ಪುವಂತಿದೆ ಎಂಬುದು ನಮ್ಮ ವಿಶ್ವಾಸ.

About the Author

ಜಿ.ಎಂ. ಕೃಷ್ಣಮೂರ್ತಿ

ಜಿ.ಎಂ. ಕೃಷ್ಣಮೂರ್ತಿ ಅವರು ಹಿರಿಯ ಲೇಖಕರು, ಅನುವಾದಕರು ಹಾಗೂ ವಿಮರ್ಶಕರು ಆಗಿದ್ದಾರೆ. ಮಹಾಭಾರತದ ಪ್ರಸಿದ್ಧ ಪಾತ್ರಗಳಾದ, ಪಿತಾಮಹ ಭೀಷ್ಮ, ಬಲ ಭೀಮಸೇನ, ಛಲಗಾರ ದುರ್‍ಯೋಧನ, ವೀರ ಅರ್ಜುನ, ಪಾಂಡವ ಪಟ್ಟಮಹಿಷಿ ದ್ರೌಪದಿ, ದಾನಶೂರ ಕರ್ಣ, ಸೂತ್ರಧಾರ ಶ್ರೀ ಕೃಷ್ಣ, ಶೋಕತಪ್ತ ತಾಯಿಕುಂತಿ, ಕುರುಡುದೊರೆ ಧೃತರಾಷ್ಟ್ರ, ಹಿರಿಯಪಾಂಡವ ಧರ್ಮರಾಯರ ಕುರಿತು ಸಾಹಿತ್ಯವನ್ನು ರಚಿಸಿದ್ದಾರೆ. ವಿಜ್ಞಾನ ವಿಚಾರಗಳ ಕುರಿತು ಲೇಖನಗಳನ್ನು ಬರೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದಾರೆ. ಕೃತಿಗಳು: ಸ್ವಂತ ಉದ್ಯಮ ಆರಂಭಿಸುವುದು ಹೇಗೆ? ಭಗವಾನ ಬುದ್ಧ, ವಿಜ್ಞಾನ ವಿಶ್ವಕೋಶ, ಮಕ್ಕಳ ವಿಶ್ವ ಜ್ಞಾನ ಕೋಶ (ಸರಣಿಗಳು),  ಜನಪದ ಸಂಸ್ಕೃತಿಯ ಮಹಾ ...

READ MORE

Related Books