ಭಾರತೀಯ ತತ್ವಶಾಸ್ತ್ರದಲ್ಲಿ ಕಾಳು ಮತ್ತು ಜೊಳ್ಳು

Author : ಜಿ. ರಾಮಕೃಷ್ಣ

Pages 472

₹ 250.00




Year of Publication: 2019
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ, ಮಲ್ಲತ್ತಹಳ್ಳಿ ಬೆಂಗಳೂರು –560056

Synopsys

ಇಪತ್ತನೆಯ ಶತಮಾನದ ಭಾರತೀಯ ಚಿಂತಕರಲ್ಲಿ ಅಗ್ರಗಣ್ಯರಾದ ಶ್ರೀ ದೇವಿಪ್ರಸಾದ ಚಟ್ಟೋಪಾಧ್ಯಾಯ ಅವರ ಕೃತಿಗಳು ಇಂಗ್ಲಿಷ್ ಹಾಗೂ ಭಾರತೀಯ ಭಾಷೆಗಳೇ ಅಲ್ಲದೆ, ಜಪಾನ್, ಚೀನಿ ಹಾಗೂ ರಷಿಯನ್ ಭಾಷೆಗಳ ಪ್ರಕಟವಾಗಿವೆ. ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಗೌರವ ಪ್ರಾಧ್ಯಾಪಕರಾಗಿದ್ದ ಇವರು ಭಾರತೀಯ ತತ್ವಶಾಸ್ತ್ರ ಪರಂಪರೆಯಲ್ಲಿ ವಾಸ್ತವವೆಂದೇ ಭಾವಿಸಿದ್ದ ತತ್ವಗಳಿಂದ ಮಿಥ್ಯೆಯನ್ನು ಬೇರ್ಪಡಿಸುವ ಕೆಲಸವನ್ನು ಮಾಡಿದರು. ಪ್ರಾಚೀನ ಹಾಗೂ ಮಧ್ಯಕಾಲೀನ ತತ್ವಶಾಸ್ತ್ರಜ್ಞರ ಆಲೋಚನೆಗಳ ಬಗ್ಗೆ ವಿಮರ್ಶಾತ್ಮಕವಾದ ದೃಷ್ಟಿಕೋನವನ್ನು ಬೆಳೆಸುವುದು ಇಂದಿನ ಅಗತ್ಯ ಎಂದು ಭಾವಿಸಿದ್ದ ಚಟ್ಟೋಪಾಧ್ಯಾಯ ಅವರು ಜನವಿರೋಧಿಯಾದ ಪಾರಂಪರಿಕ ಮೌಲ್ಯಗಳ ರಕ್ಷಕರ ವಿಚಾರಗಳನ್ನು ಸೋದಾಹರಣವಾಗಿ ವಿರೋಧಿಸಿ ಇಲ್ಲವೇ ಅಲ್ಲಗಳೆದು ತಮ್ಮ ಜನಪರವಾದವನ್ನು ಮುನ್ನೆಲೆಗೆ ತರುತ್ತಾರೆ. ಭಾರತೀಯ ತತ್ವಜ್ಞಾನದಲ್ಲಿ ಹಲವಾರು ಪರಂಪರೆಗಳಿವೆ.

ಇವುಗಳಲ್ಲಿ ಅಮೂಲ್ಯವಾದವುಗಳನ್ನು ಹೆಕ್ಕಿ ತೆಗೆದುಕೊಳ್ಳುವುದು ಮುಖ್ಯವಾಗಿರುವಂತೆ ಅವುಗಳನ್ನು ಉಳಿಸಿ ಬೆಳೆಸುವುದು ಅಷ್ಟೇ ಮುಖ್ಯವಾದದ್ದು. ಏಕೆಂದರೆ ಗತಕಾಲದ ದಾರ್ಶನಿಕ ತತ್ವಗಳು, ಪಾರಂಪರಿಕ ಮೌಲ್ಯಗಳು ನಮ್ಮ ಭವಿಷ್ಯವನ್ನು ನಿರ್ಮಾಣ ಮಾಡುವುದಕ್ಕೆ ಸಹಾಯ ಮಾಡುವಂತಿರಬೇಕು. ಇಂತಹ ಜ್ಞಾನಪರಂಪರೆಯನ್ನು ನಮ್ಮ ಭಾರತೀಯ ತತ್ವಶಾಸ್ತ್ರದಲ್ಲಿ ಹುಡುಕಿತೆಗೆಯಬೇಕಾಗುತ್ತದೆ. ದೇವಿಪ್ರಸಾದ ಚಟ್ಟೋಪಾಧ್ಯಾಯ ಪ್ರಸ್ತುತ ಕೃತಿಯಲ್ಲಿ ಭಾರತೀಯ ತತ್ವಶಾಸ್ತ್ರದಲ್ಲಿ ಜೀವಂತವಾಗಿರುವ ಚಿಂತನೆಗಳು ಮತ್ತು ನಿರುಪಯುಕ್ತವಾಗಿರುವ ಚಿಂತನೆಗಳ ಬಗ್ಗೆ ವಿಮರ್ಶಾತ್ಮಕವಾಗಿ ಚರ್ಚಿಸಿದ್ದಾರೆ. ಇಂದಿನ ಸಂದರ್ಭಕ್ಕೆ ಈ ಕೃತಿ ಹೆಚ್ಚು ಪ್ರಸ್ತುತವಾಗಿದೆ. ಇಂತಹ ಕೃತಿಯನ್ನು ಕನ್ನಡದ ಪ್ರಸಿದ್ಧ ಚಿಂತಕರೂ, ಸಾಹಿತ್ಯ ವಿಮರ್ಶಕರೂ ಆದ ಡಾ. ಜಿ. ರಾಮಕೃಷ್ಣ ಅವರು ಇಂಗ್ಲಿಷ್‌ನಿಂದ ಅನುವಾದಿಸಿ ಪ್ರಕಟಣೆಗೆ ಸಿದ್ದ ಪಡಿಸಿ ಪ್ರಕಟಿಸಿದ್ದಾರೆ. 

About the Author

ಜಿ. ರಾಮಕೃಷ್ಣ

ಜಿ. ರಾಮಕೃಷ್ಣ ಸಂಸ್ಕೃತದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಮತ್ತು ಪಿಎಚ್.ಡಿ. ಪದವಿಗಳನ್ನೂ, ಪುಣೆ ಹಾಗೂ ವೇಲ್ ವಿಶ್ವವಿದ್ಯಾನಿಲಯಗಳಿಂದ ಇಂಗ್ಲಿಷ್‌ನಲ್ಲಿ ಎಂ.ಎ. ಪದವಿಗಳನ್ನೂ ಪಡೆದಿದ್ದಾರೆ. ಮಹಾಡಿನ ಡಾ.ಅಂಬೇಡ್ಕರ್ ಕಾಲೇಜು ಮತ್ತು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸುಮಾರು ಮೂವತ್ತು ವರ್ಷ ಕೆಲಸ ಮಾಡಿದ್ದಾರೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದುಕೊಂಡು “ಭಾರತೀಯ ವಿಜ್ಞಾನದ ಹಾದಿ” ಎಂಬ ಮೌಲಿಕ ಕೃತಿಯನ್ನು ರಚಿಸಿದ್ದಾರೆ. ಇವರ “ಮುನ್ನೋಟ' ಹಾಗೂ 'ಆಯತನ' ಗ್ರಂಥಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭ್ಯವಾಗಿದೆ. ಮಾರ್ಕ್ಸ್‌ವಾದಿ ಅಧ್ಯಯನಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಭಗತ್‌ಸಿಂಗ್, ಚೆ ಗೆವಾರಾ, ...

READ MORE

Related Books