ಭಾರತೀಯ ವಿವಾಹ ಸಂಸ್ಥೆಯ ಇತಿಹಾಸ

Author : ಕುಸುಮಾ ಬಿ. ಪ್ರಕಾಶ

Pages 160

₹ 40.00




Year of Publication: 2007
Published by: ನವಕರ್ನಾಟಕ ಪ್ರಕಾಶನ
Address: # ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು
Phone: 08022161900

Synopsys

ಪ್ರಸಿದ್ಧ ಇತಿಹಾಸಕಾರ ಮರಾಠಿ ಮೂಲದ ವಿ.ಕೆ. ರಾಜವಾಡೆ ಅವರ ಮರಾಠಿ ಕೃತಿಯನ್ನು ಲೇಖಕಿ ಕುಸುಮ ಅವರು ಕನ್ನಡೀಕರಿಸಿದ್ದೇ-ಭಾರತೀಯ ವಿವಾಹ ಸಂಸ್ಥೆಯ ಇತಿಹಾಸ ವಿವಾಹ ಸಂಸ್ಥೆಯು ಅತ್ಯಂತ ಪ್ರಾಚೀನ ಕಾಲದಿಂದಲೂ ವಿಶೇಷವಾಗಿ ಪೌರಾಣಿಕ ಕಾಲದಿಂದಲೂ ಹೇಗೆ ಬೆಳೆದು ಬಂದಿದೆ, ಅದರ ತಿಳಿವಳಿಕೆ, ಮಹತ್ವ, ಅನಿವಾರ್ಯತೆಯನ್ನು ಹೇಗೆ ಪ್ರತಿಪಾದಿಸಲಾಗಿದೆ. .ಋಷಿಗಳಲ್ಲಿ ಪೂರ್ವಜರಾದ ಅಂಗಿರಸ ಎಂಬುವರು ಗುಹೆಯಿಂದ ಅಗ್ನಿಯನ್ನು ಮೈದಾನದಲ್ಲಿನ ಗುಡಿಸಲುಗಳಿಗೆ ತಂದರು. ಅಗ್ನಿ ಬಂದಾಗಿನಿಂದ ಜೀವನ ಯಾತ್ರೆಯ ಸಾಧನಗಳು ಹೆಚ್ಚಿ ಸಹಜವಾಗಿ, ಪ್ರಜಾವೃದ್ಧಿಯೂ ಆಯಿತು. ಇದರಿಂದ ಅಂಗಿರಸನಿಗೆ ಪ್ರಜಾಪತಿ ಎಂಬ ಸಾರ್ಥಕನಾಮವು ಪ್ರಾಪ್ತವಾಯಿತು. ಅಗ್ನಿಸಿದ್ಧಿಯ ಸಂಶೋಧನೆ ಮತ್ತು ಪ್ರಜಾಪತಿ ಸಂಸ್ಥೆಯ ಸ್ಥಾಪನೆ - ಇವೆರಡೂ ಸಮಕಾಲೀನ ಘಟನೆಗಳಾಗಿ, ವಿವಾಹ ಸಂಸ್ಥೆಯ ಮುಂದುವರಿಕೆಯಾಗಿ ಹೇಗೆ ರೂಪು ಪಡೆಯಿತು ಎಂಬ ಬಗ್ಗೆ ಆಳದ ಅಧ್ಯಯನ ಈ ಕೃತಿ ಒಳಗೊಂಡಿದೆ.

About the Author

ಕುಸುಮಾ ಬಿ. ಪ್ರಕಾಶ
(23 August 1965)

ಕತೆಗಾರ್ತಿ ಕುಸುಮಾ ಪ್ರಕಾಶ ಅವರು ಸ್ನಾತಕೋತ್ತರ ಪದವೀಧರೆ. 1965 ಆಗಸ್ಟ್ 23  ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. 2000 ರಲ್ಲಿ ’ಊರುಗೋಲು' ಕಥಾ ಸಂಕಲನ ಪ್ರಕಟವಾಯಿತು. ...

READ MORE

Related Books