ಭಾರತ ಬೆಸುಗೆ

Author : ಬಿ.ಎಸ್. ಜಯಪ್ರಕಾಶ ನಾರಾಯಣ

Pages 544

₹ 395.00




Year of Publication: 2016
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್
Address: # 745, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010
Phone: 9945939436

Synopsys

ಭಾರತ ಬೆಸುಗೆ ಎಂಬ ಪ್ರಮುಖ ಶೀರ್ಷಿಕೆಯಡಿ ಲೇಖಕ ಸ್ಯಾಮ್ ಪಿತ್ರೊಡ ಅವರು ಸಂಪರ್ಕ ಕ್ರಾಂತಿಯ ಹೃದಯಸ್ಪರ್ಶಿ ಕಥೆಯನ್ನು ದಾಖಲಿಸಿದ ಕೃತಿ. ಲೇಖಕ-ಅನುವಾದಕ ಬಿ.ಎಸ್. ಜಯಪ್ರಕಾಶ ನಾರಾಯಣ ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತದಲ್ಲಿ ಮಾತ್ರ ಸ್ಯಾಮ್ ಪಿತ್ರೊಡನ ಕಾರ್ಯಯೋಜನೆಗಳಿಂದ ದೂರವಾಣಿ ಸಂಪರ್ಕ ತೀವ್ರತೆ ಪಡೆದುಕೊಂಡಿತು. ಅಂದಿನ ಪ್ರಧಾನಿ ರಾಜೀವಗಾಂಧಿ ಅವರು ಸ್ಯಾಮ್ ಪಿತ್ರೊಡ್ ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದರ ಫಲವಾಗಿ ಇಡೀ ದೇಶದ ತುಂಬಾ ಸಂಪರ್ಕ ಜಾಲ ವಿಸ್ತರಿಸಿಕೊಂಡು ವೇಗ ಪಡೆದಿತ್ತು. ಕ್ರಾಂತಿ ಸದೃಶ್ಯವಾದ ಸಂಪರ್ಕ ಜಾಲದ ಕಥೆಯನ್ನು ವಿವರಿಸಿದ್ದಾರೆ.

About the Author

ಬಿ.ಎಸ್. ಜಯಪ್ರಕಾಶ ನಾರಾಯಣ

ಪತ್ರಕರ್ತ ಬಿ.ಎಸ್. ಜಯಪ್ರಕಾಶ್‌ ನಾರಾಯಣ ಅವರು ಉತ್ತಮ ಅನುವಾದಕ ಕೂಡ. ಪ್ರಜಾವಾಣಿ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಉಪಸಂಪಾದಕ/ ವರದಿಗಾರರಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಟಿ.ಜೆ.ಎಸ್‌. ಜಾರ್ಜ್‌ ಅವರ ಎಂ.ಎಸ್., ಯು.ಆರ್‌. ಅನಂತಮೂರ್ತಿ ಅವರ ’ನನ್ನ ಸಾಹಿತ್ಯದ ಐದು ದಶಕಗಳು’, ’ನಾನು ಮಲಾಲ’ ಕೃತಿಗಳನ್ನು ಅನುವಾದಿಸಿದ್ದಾರೆ. ಛಾಯಾಗ್ರಾಹಕ ಕೆ.ಜಿ. ಸೋಮಶೇಖರ ಅವರ ಆತ್ಮಕತೆ ’ನನ್ನ ಬದುಕು ನನ್ನ ಫೋಟೊಗ್ರಫಿ’ ಕೃತಿಯನ್ನು ನಿರೂಪಿಸಿದ್ದಾರೆ. ...

READ MORE

Related Books