ಭಾರತದಲ್ಲಿ ಸೆಕ್ಯೂಲರ್‌ವಾದ ಮತ್ತು ಅದರ ವಿಮರ್ಶೆ

Author : ಎ.ಷಣ್ಮುಖ

Pages 200

₹ 150.00




Year of Publication: 2022
Published by: ವಸಂತ ಪ್ರಕಾಶನ
Address: # 360, 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011.
Phone: 080-40917099 / 7892106719

Synopsys

ಭಾರತದ ರಾಜಕೀಯ ಮತ್ತು ಬೌದ್ಧಿಕ ವಲಯದಲ್ಲಿ ಇಂದು ಅತಿ ಹೆಚ್ಚು ಚರ್ಚೆಗೆ ಒಳಪಡುತ್ತಿರುವ ವಿಚಾರಗಳಲ್ಲಿ ಸೆಕ್ಯುಲರ್‌ವಾದವೂ ಕೂಡ ಒಂದು. ಆದರೆ ಈ ಚರ್ಚೆಗಳು ಒಂದೋ ಸೆಕ್ಯುಲರ್‌ವಾದದ ಹೆಸರಲ್ಲಿ ಪಕ್ಷರಾಜಕೀಯ ವಿವಾದಗಳನ್ನು ಮಾಡಲಾಗಿದೆ. ಇಲ್ಲವೇ ಸೆಕ್ಯುಲರ್‌ವಾದಕ್ಕೆ ಸಂಬಂಧವಿಲ್ಲದ ಜಾತಿ, ಭಾಷೆ, ಪ್ರಾದೇಶಿಕ ತಾರತಮ್ಯ ಇತ್ಯಾದಿ ವಿಚಾರಗಳನ್ನು ಸೆಕ್ಯುಲರ್‌ವಾದದ ಚರ್ಚೆಗಳೆಂಬಂತೆ ಇಟ್ಟುಕೊಂಡು ಪರಸ್ಪರರ ವಿರೋಧಗಳನ್ನು ಮಾಡಲಾಗುತ್ತದೆ. ಇನ್ನು ಬಹಳಷ್ಟು ಚರ್ಚೆಗಳು ಸೆಕ್ಯುಲರ್‌ವಾದ ಎಂದರೇನು ಎನ್ನುವುದರ ಕುರಿತೇ ಸ್ಪಷ್ಟತೆ ಇಲ್ಲದೆ, ಪರಸ್ಪರ ತಮ್ಮದೇ ನಿಜವಾದ ಸೆಕ್ಯುಲರ್‌ವಾದವೆಂದೂ ಮತ್ತೊಬ್ಬರದ್ದು ಸೆಕ್ಯುಲರ್ ವಿರೋಧವೆಂದೂ ಆಪಾದನೆಯಲ್ಲಿ ತೊಡಗುವ ವಾದಗಳಾಗುತ್ತಿರುತ್ತವೆ. ಅಂದರೆ ಸೆಕ್ಯುಲರ್‌ವಾದದ ಕುರಿತು ಮೂಲಭೂತ ಸೈದ್ಧಾಂತಿಕ ತಿಳಿವಳಿಕೆ ಮತ್ತು ಸ್ಪಷ್ಟತೆಯ ಕೊರತೆ ಬಹಳಷ್ಟು ವಿವಾದಗಳಿಗೆ ಕಾರಣವಾಗುತ್ತಿವೆ. ಹಾಗಾಗಿ ಈ ಕೃತಿಯು ರಾಜ್ಯಶಾಸ್ತ್ರದ ಶಿಸ್ತಿನ ಚೌಕಟ್ಟಿನಲ್ಲಿ ಸೆಕ್ಯುಲರ್‌ವಾದದ ಉಗಮ, ಬೆಳವಣಿಗೆ, ಅದರ ಪರ-ವಿರೋಧದ ವಾದಗಳನ್ನು ಸರಳವಾಗಿ ಪ್ರಸ್ತುತಪಡಿಸುವ ಪ್ರಯತ್ನ ಮಾಡುತ್ತದೆ.

About the Author

ಎ.ಷಣ್ಮುಖ

ಎ.ಷಣ್ಮುಖ ಅವರು ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ತರೀಕರೆ ತಾಲ್ಲೂಕಿನ ಮಳಲೀಚೆನ್ನೇನಹಳ್ಳಿಯಲ್ಲಿ. ಶಿವಮೊಗ್ಗೆಯ ಡಿವಿಎಸ್ ಕಾಲೇಜಿನಲ್ಲಿ ಪದವಿ ಪಡೆದು, ಕುವೆಂಪು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಪದವಿಯನ್ನು ಪೂರೈಸಿ ಅಲ್ಲೇ ಪ್ರಾಧ್ಯಾಪಕರಾಗಿ ಹಾಗೂ ವಿಭಾಗಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ಗೌರವ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರೈತರ ಆತ್ಮಹತ್ಯೆ, ಜಾತಿ ಮತ್ತು ದಲಿತರ ಸ್ಥಿತಿಗತಿಗಳು, ಸ್ಟೀರಿಯೊಟೈಪ್ಡ್ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳು, ಅಸ್ಪೃಶ್ಯತೆಯ ಆಚರಣೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಯುಜಿಸಿ ಮತ್ತು ಯುರೋಪಿಯನ್ ಯೂನಿಯನ್ (ಘೆಂಟ್ ವಿಶ್ವವಿದ್ಯಾಲಯದ ಸಹಯೋಗದ) ಪ್ರಾಜೆಕ್ಟ್‌ಗಳಲ್ಲಿ ಸಂಶೋಧಕರಾಗಿ ಕೆಲಸ ...

READ MORE

Related Books