ಭಾರತೀಯರ ವೇದ ವಿದ್ಯಾಪರಂಪರೆ

Author : ಗೋಪಾಲಕೃಷ್ಣ ಎನ್‌.ಭಟ್

Pages 184

₹ 230.00




Year of Publication: 2022
Published by: ತೇಜು ಪಬ್ಲಿಕೇಷನ್ಸ್‌

Synopsys

ಧರ್ಮವೆಂದರೆ, ಯಜ್ಞ ದಾನ, ತಪಸ್ಸು ಎನ್ನುತ್ತದೆ: ಬೃಹದಾರಣ್ಯಕ ಭಾರತೀಯ ವೇದವಿದ್ಯಾ ಪರಂಪರೆಯಲ್ಲಿ ಒಂದೊಂದು ಪದವೂ ಮಹತ್ತರವಾದ ಅರ್ಥಗಳನ್ನು ಹೊಂದಿರುತ್ತದೆ. ಯಜ್ಞವೆಂದರೆ, ಸಮಿತ್ತುಗಳನ್ನು ಅಗ್ನಿಗೆ ಅರ್ಪಿಸುವುದಷ್ಟೇ ಅಲ್ಲ; ''ಜ್ಞಾನಂ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಿಯಾ ಶ್ರಮದಿಂದ ಮುಗ್ಧತೆಯನ್ನು ಮುಗುಳಿ ಸಿದ್ಧತೆಯನ್ನು ಸ್ಥಾಪಿಸುವುದೂ ಯಜ್ಞವೇ ದಾನವೆಂದರೆ ಬರಿದೇ ಹಣವನ್ನು ನೀಡುವುದಲ್ಲ. ಜೀವನಶೈರಿಯನ್ನು, ಮನೋವಿಕಾಸವಿದವನ್ನು, ಉತ್ತರೋತ್ತರ ಅಭಿವೃದ್ಧಿಯನ್ನು ಸೂಚಿಸುವ ನುಡಿ, ನಡೆಗಳೂ, ದಾನಗಳ ತಪಸ್ಟೆಂದರೆ ಕೇವಲ ಒಂದೆಡೆ ಕುಳತು ಮಂತ್ರವರಣದಲ್ಲಿ ತೊಡಗುವುದಲ್ಲ. ಅದೊಂದು ಗೋಯಪೂರಕ ಕ್ರಿಯೆ, ಮನವನ್ನು ಅವಿಚರಿತಗೊಳಿಸಲು ಅವಶ್ಯವಾದ ತರಬೇತಿ, ಕಸರತ್ತು. ಪ್ರಾಚೀನ ಕಾಲದ ಗುರುಪರಂಪರೆಯು ಹೊಟ್ಟಿಪಾಡಿನಲ್ಲದೆ ವಿಶ್ವಶಾಂತಿಯ, ವಿಶ್ವ ಪ್ರಗತಿಯ ಸಾಧನೆಗೆ ಪೂರಕವಾದ ವಿದ್ಯೆಯನ್ನು ನೀಡುವುದೆ ವೇದ ಎಂಬ ಆಧಾರದ ಮೇಲೆ ಜೀವ ಪರಮಾತ್ಮ ,ಪ್ರಕೃತಿ, ಧರ್ಮ, ಜೀವನಕ್ರಮ ಮುಂತಾದ ಹದಿನಾಲ್ಕು ಜ್ಞಾನ ಪ್ರಕಾರಗಳೊಡನೆ ಆರ್ಯುವೇದ,ಧರ್ನುವೇದ,ಗಾಂಧರ್ವವೇದ ಮತ್ತು ಅರ್ಥಶಾಸ್ತ್ರಗಳನ್ನು ಬೋದಿಸುತ್ತಿದ್ದ ಆ ಪರಂಪರೆಯ ಪಕ್ಷಿನೋಟವನ್ನು ಜಿ.ಎನ್‌ ಭಟ್ಟ್‌ ಅವರು ಸಮೀಚವಾಗಿ ಕಟ್ಟಿಕೊಟ್ಟಿದ್ದಾರೆ.

About the Author

ಗೋಪಾಲಕೃಷ್ಣ ಎನ್‌.ಭಟ್

ಗೋಪಾಲಕೃಷ್ಣ ಎನ್‌.ಭಟ್ (ಡಾ ಜಿ.ಎನ್.ಭಟ್ಟ) ಅವರು ಮಂಗಳೂರು ಕೆನರಾ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥ .ಅಂತ‌ರ್‌ ವಿಷಯ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸ್ಥಾಪಕ ನಿರ್ದೇಶಕ, ಪ್ರಾಂಶುಪಾಲರಾಗಿ ನಿವೃತ್ತಿಹೊಂದಿದ್ದಾರೆ.  ಹಲವಾರು ಸಂಘಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. 16 ಪಿಹೆಚ್ ಡಿ ಸಂಶೋಧಕರಿಗೆ ಯಶಸ್ವಿ ಮಾರ್ಗದರ್ಶಕರಾಗಿ, ಮಂಗಳೂರು ವಿ.ವಿ. ನಿನ್ನನ ಸ್ನಾತಕೋತ್ತರ ಅಧ್ಯಯನ ಮಂಡಳಿ ಅಧ್ಯಕ್ಷ, ಸದಸ್ಯರಾಗಿ, ಪ್ರಸ್ತುತ ತತ್ವಶಾಸ್ತ್ರ  ಅಧ್ಯಯನ ಮಂಡಳಿಯ ಪರಿಣತ ಬಾಹ್ಯ ಸದಸ್ಯರು ಹಾಗೂ ಸಂಸ್ಕೃತ ಸಂಶೋಧನ ಸಂಘಟನೆ ಅಧ್ಯಕ್ಷರಾಗಿದ್ದಾರೆ.  ಕೃತಿಗಳು : ತತ್ವ ದರ್ಶನ ಮತ್ತು ಆಧುನಿಕ ಆನ್ವಯಿಕತೆ,  ಪ್ರಧಾನ ಉಪನಿಷತ್ತುಗಳ ತತ್ವವಿವೇಚನೆ, ...

READ MORE

Related Books