ಭಾವ ಶುದ್ಧಿಯಿಲ್ಲದವರಲಿ...

Author : ವೆಂಕಟೇಶ ಕೆ. ಜನಾದ್ರಿ

Pages 100

₹ 90.00




Year of Publication: 2021
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಮುಖ್ಯರಸ್ತೆ, ಸರಸ್ವತಿ ಗೋದಾಮು, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕ ವೆಂಕಟೇಶ್ ಜನಾದ್ರಿ ಅವರು ರಚಿಸಿದ ಕೃತಿ-‘ಭಾವ ಶುದ್ದವಿಲ್ಲದವರಲಿ ...’ ನಾ ಮಾಡಿದೆನೆಂಬುದು ಭ್ರಮೆ, ಆಸೆಯೆಂಬುದು ಭವದ ಬೀಜ, ಕಲ್ಲುದೇವರಾದರೆ ನನ್ನ ದೇವರಾರು,ಬಡಮನೆಯ ಗಣ ಮನ ನೋಡಾ, ಭಾವ ಶುದ್ಧವಿದ್ದಲ್ಲಿ ಪದಾರ್ಥ ಪ್ರಸಾದವಯ್ಯ,ಸೇರಿದಂತೆ 13 ಕ್ಕೂ ಹೆಚ್ಚು ಲೇಖನಗಳು ಈ ಕೃತಿಯಲ್ಲಿವೆ. 12ನೇ ಶತಮಾನದಲ್ಲಿ ಸಮಾಜೋ-ಧಾರ್ಮಿಕ ಸಮಾನತೆಗಾಗಿ ಹೋರಾಡಿದ ಶರಣರ ವ್ಯಕ್ತಿತ್ವವನ್ನು ಅನುಭವದ ಅಧ್ಯಾತ್ಮಿಕತೆ, ಸಾಮಾಜಿಕ ನೆಲೆಗಟ್ಟಿನಲ್ಲಿ ಇರುವುದನ್ನು ಕಾಣುತ್ತೇವೆ. ಅನೇಕರು ಅನೇಕ ರೀತಿಯಲ್ಲಿ ನಿರ್ವಚಿಸಲು ಪ್ರಯತ್ನಿಸಿದ್ದಾರೆ.ಇನ್ನೂ ಕೆಲವರು ಹೊಸ ವ್ಯಾಖ್ಯಾನಗಳನ್ನು ಮಾಡುತ್ತಲೇ ಇದ್ದಾರೆ. ಯಾಕೆಂದರೆ ವಚನ ಸಾಹಿತ್ಯವು ಅದು ನೆಲದ ಸಂಪತ್ತು. ಬಗೆದಷ್ಟೂ ಅದು ಹೊಸ ಹೊಸ ಹೊಸ ಪರಿಕಲ್ಪನೆಗಳಲ್ಲಿ ಮೊಗೆದು ನೀಡುತ್ತದೆ. ಹೀಗಾಗಿ, ಇಲ್ಲಿಯ ಲೇಖನಗಳು ಸಹ ಅರ್ಥಪೂರ್ಣವಾಗಿವೆ.

About the Author

ವೆಂಕಟೇಶ ಕೆ. ಜನಾದ್ರಿ
(04 January 1968)

ಲೇಖಕ ವೆಂಕಟೇಶ ಕೆ. ಜನಾದ್ರಿ ಅವರು ಮೂಲತಃ ಕಲಬುರಗಿಯವರು. ತಂದೆ ಕೃಷ್ಣಪ್ಪ ಜನಾದ್ರಿ ತಾಯಿ ಸರಸ್ವತಿ. ಸ್ನಾತಕೋತ್ತರ ವಾಣಿಜ್ಯ ಪದವೀಧರರು. ಪ್ರಸ್ತುತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಕೃತಿಗಳು: ವಚನಗಳ ಬೆಳಕಲ್ಲಿ ಸಕಾರಾತ್ಮಕ ಧೋರಣೆ, ಆಂತರ್ಯದ ಬಯಲು, ಅಂತರಂಗದೊಳಗಣ ಬಹಿರಂಗ, ನಡೆಯೊಳಗಣ ನುಡಿ, ಸತ್ಪಾತ್ರಕ್ಕೆ ಸಲ್ಲಿಸಯ್ಯ, ಒಡಲುಗೊಂಡವರಳಲು, ನಡೆದರೆ ಲಿಂಗಮೆಚ್ಚಿ, ಕೊರಡು ಕೊನರಿದಾಗ, ಎನ್ನಲ್ಲಿ ಏನುಂಟೆಂದು, ಕಥಾ ಸಂಕಲನಗಳು: ಹನಿಗಳ ನರ್ತನ,  ಮೌನದೊಳಗಣ ಕಥೆಗಳು, ಹೊರಮನದ ಒಳಬೇಗುದಿಗಳು.  ಪ್ರಶಸ್ತಿ-ಪುರಸ್ಕಾರಗಳು: ಫ.ಗು.ಹಳಕಟ್ಟಿ ಪ್ರಶಸ್ತಿ, ಕರ್ನಾಟಕ ರಾಜ್ಯಪಾಲರ ಪ್ರಶಸ್ತಿ, ಬಸವ ಸಮಿತಿ ಪ್ರಶಸ್ತಿ, ಲಕ್ಷ್ಮೀ ಬಾಯಿ ಜಾಜಿ ಸ್ಮಾರಕ ...

READ MORE

Related Books