ಭಾವಭಿತ್ತಿ

Author : ಎಂ.ಎಸ್‌. ಮಣಿ

Pages 220

₹ 180.00




Year of Publication: 2018
Published by: ಎಸ್‌. ರಾಯುಡು ಪ್ರಕಾಶನ
Address: ನಂ. 14 ರಾಯುಡು ನಿಲಯ,3 ಪ್ಲೋರ್‌, 4ತ್‌ ಕ್ರಾಸ್‌, ಜೆ.ಜೆ. ಆರ್‌ ನಗರ , ಬೆಂಗಳೂರು560001
Phone: 26770093

Synopsys

ಲೇಖಕ ಹಾಗೂ ಪತ್ರಕರ್ತ ಎಂ.ಎಸ್.ಮಣಿ ಅವರ 'ಭಾವ ಭಿತ್ತಿ' ವಿಭಿನ್ನ ವೈಚಾರಿಕ ಲೇಖನಗಳ ಸಂಗ್ರಹ. ಇಲ್ಲಿಯ ಪ್ರತಿಯೊಂದು ಲೇಖನವೂ ಸಮಾಜದ ವಿವಿಧ ಸ್ತರಗಳ ಕಾಣದ ಮುಖಗಳನ್ನು ಮುನ್ನೆಲೆಗೆ ತಂದು ನಿಲ್ಲಿಸುತ್ತದೆ. ಸಮಾಜದ ವಿಭಿನ್ನ ಮುಖಗಳ ಅನಾವರಣವೇ ಈ ಪುಸ್ತಕದ ಸಮಗ್ರ ತಿರುಳು, ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ತುಮುಲಗಳನ್ನು ದಾಖಲೆ ಸಮೇತ ಓದುಗರ ಮುಂದಿಡುವ ಪ್ರಯತ್ನಗಳನ್ನು ಎಂ.ಎಸ್‌.ಮಣಿ ಅವರು ಮಾಡಿದ್ದಾರೆ. ಸಮಕಾಲೀನ ಸಮಸ್ಯೆಗಳು, ಸಮಾಜದ ಅಂಕುಡೊಂಕುಗಳು, ರಾಜಕೀಯ, ನ್ಯಾಯಾಂಗ, ಐತಿಹಾಸಿಕ ಪ್ರಮಾದಗಳ ಸುತ್ತ ಸುತ್ತಿಕೊಂಡಿರುವ ವಿವಾದಗಳು- ಹೀಗೆ ಹತ್ತು ಹಲವು ಸಂಗತಿಗಳ ಚರ್ಚೆ, ಸಂವಾದ, ವಾದ-ವಿವಾದ, ಹಿನ್ನೆಲೆ ಮತ್ತಿತರ ಆಸಕ್ತಿದಾಯಕ ಸಂಗತಿಗಳನ್ನು ಅತ್ಯಂತ ಸುಲಲಿತ ಭಾಷೆಯಲ್ಲಿ ಓದುಗರ ಮನಮುಟ್ಟುವಂತೆ ಲೇಖಕರು ಹೇಳಿದ್ದಾರೆ. 

About the Author

ಎಂ.ಎಸ್‌. ಮಣಿ

ಡಾ.ಎಂ.ಎಸ್‌. ಮಣಿ  ಅವರು  ಪತ್ರಿಕಾ ರಂಗದಲ್ಲಿ  ಉಪಸಂಪಾದಕ, ಸುದ್ದಿ ಸಂಪಾದಕರಾಗಿ , ಅಂಕಣಕಾರಾಗಿ 25 ವರ್ಷಗಳ ಅನುಭವ ಹೊಂದಿದ್ದಾರೆ.  ಮಾಧ್ಯಮ  ಅಕಾಡೆಮಿಯಂಥ ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದುಕೊಂಡಿದ್ದು, ಪತ್ರಕರ್ತರ ಸಂಘಟನೆ, ಕಾರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ, ಸಂಸ್ಕೃತಿ, ಸಂಗೀತ ಕ್ಷೇತ್ರಗಳಲ್ಲಿಯೂ ಆಸಕ್ತಿ ಉಳ್ಳವರು. ಚಿಂತಕ ಸಾಧಕ ಹೆಚ್‌ ವಿಶ್ವನಾಥ್, ಕರುನಾಡಿನ ತ್ಯಾಗರಾಜರು, ತಲ್ಲಣ,ಹರಿವು, ಒಡಲಾಗ್ನಿ, ಭಾವಭಿತ್ತಿ, ಕಡಗೋಲು, ಮನುಭಾರತ, ಸುಡುಬಯಲು ಇವು ಮಣಿ ಅವರ ಕೃತಿಗಳು. ...

READ MORE

Related Books