ಭಾವನೆಗಳಿಲ್ಲದವಳ ತೀರ ಯಾನ

Author : ಅಮೃತಾ ಎಂ.ಡಿ

Pages 88

₹ 100.00




Year of Publication: 2021
Published by: ನೇರಿಕಾ ಪ್ರಕಾಶನ
Address: ಕಡೂರು, ಚಿತ್ರದುರ್ಗ ಜಿಲ್ಲೆ

Synopsys

ಅಮೃತ ಎಂ.ಡಿ.ಅವರ ಗಜಲ್ ಗಳ ಸಂಕಲನ ‘ಭಾವನೆಗಳಿಲ್ಲದವಳ ತೀರ ಯಾನ’. 64 ಗಜಲ್ ಗಳ ಸಂಕಲನ. ಈ ಸಂಕಲನಕ್ಕೆ ಬೆಳಗಾವಿಯ ಚಂದ್ರಶೇಖರ ಯಲ್ಲಪ್ಪ ಪೂಜಾರ ಅವರು ಮುನ್ನುಡಿ ಬರೆದಿದ್ದು, ಈ ಗಜಲ್ ಸಂಕಲನದಲ್ಲಿ ಪ್ರಯೋಗಾತ್ಮಕ ರಚನೆಗಳಿವೆ. ಮಾನವೀಯ ಮೌಲ್ಯಗಳಾದ ಪ್ರೀತಿಸತ್ಯ, ನ್ಯಾಯನೀತಿಯ ಚಿಂತನೆಗಳಿವೆ.ಸಮಾಜದ ಓರೆಕೋರೆಗಳನ್ನು ಬಿಚ್ಚಿಡುತ್ತಲೆ ಸ್ವಾಭಿಮಾನಿಯಾಗಿ ಬದುಕುವ ತುಡಿತಗಳಿವೆ. ಹೆಣ್ಣಿನ ಸೂಕ್ಷ್ಮ ಮನದ ನೋವು ನಲಿವುಗಳ ಹೂರಣವಿದೆ. ಇವು ಬತ್ತಿದ ಎದೆಯಲ್ಲಿ ಭರವಸೆಯ ಬೆಳಕನ್ನು ಎಳೆದು ತರುತ್ತವೆ' ಎಂದಿದ್ದಾರೆ. ಬೆನ್ನುಡಿಯಲ್ಲಿ ನೂರ ಅಹಮದ್ ನಾಗನೂರ ಅವರು, ಇಲ್ಲಿ ಗಜಲ್ಗಾರ್ತಿ ಹೆಣೆದ ತೀರಗಳು ಅನುರಣಿಸುವ, ಅ ಗಾಢವಾಗಿ ವ್ಯಾಪಿಸಿ ಅನುಭವಗಳನ್ನು ಗ್ರಹಿಸುವ ಪಂಕ್ತಿಗಳು ಕಾವ್ಯ ಚಿಂತನೆಯ ಮಗದೊಂದು ಮುಖವನ್ನು ತೆರೆಯುವುದನ್ನು ಕಾಣುತ್ತೇವೆ" ಎಂದಿದ್ದಾರೆ.

About the Author

ಅಮೃತಾ ಎಂ.ಡಿ

ಮಂಡ್ಯ ಜಿಲ್ಲೆಯ ಮಿಕ್ಕೆರೆಯ ನಿವಾಸಿ ಅಮೃತಾ ಎಂ.ಡಿ ಗಣಿತಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿನಿ. ಕವಿತೆ, ಗಜಲ್ ಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಕೃತಿ; ಭಾವನೆಗಳಿಲ್ಲದವಳ ತೀರ ಯಾನ (ಗಜಲ್ ಸಂಕಲನ) ...

READ MORE

Related Books