ಭೀಮಾಬೊಯಿ

Author : ಶ್ರೀಧರ ಪಿಸ್ಸೆ

Pages 85

₹ 25.00




Year of Publication: 2001
Published by: ಸಾಹಿತ್ಯ ಅಕಾಡೆಮಿ
Address: ಸೆಂಟ್ರಲ್ ಕಾಲೇಜ್ ಕ್ಯಾಂಪಸ್, ಬಿ. ಆರ್. ಅಂಬೇಡ್ಕರ್ ವೀಧಿ ಬೆಂಗಳೂರು-560001

Synopsys

`ಭೀಮಾಬೊಯಿ’ ಕೃತಿಯ ಮೂಲ ಲೇಖಕ ಸೀತಾಕಾಂತ ಮಹಾಪಾತ್ರ . ಈ ಕೃತಿಯನ್ನು ಲೇಖಕ ಶ್ರೀಧರ ಪಿಸ್ಸೆ ಅವರು ಕನ್ನಡಕ್ಕೆ  ಅನುವಾದಿಸಿದ್ದಾರೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ನಾಲ್ಕು ವರುಷದ ಚಿಕ್ಕ ಹುಡುಗನಾಗಿದ್ದಾಗ ದೇವರ ಶಂಖಚಕ್ರಗಳನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು ಅಲೆಯುವ ಯೋಗಿಗಳನ್ನು ಕಂಡ ಸಂಗತಿಯ ಬಗ್ಗೆ ಭೀಮಾಬೊಯಿ ಕವಿತೆಗಳು ಉಲ್ಲೇಖಿಸುತ್ತವೆ.. ಭಿಕ್ಷೆ ಬೇಡುತ್ತ ಹಳ್ಳಿಗೆ ಬರುತ್ತಿದ್ದ ಯೋಗಿಗಳು ಅವನ ಬಾಲ್ಯದ ಕಾಣ್ಕೆಗೆ ಕಾರಣವಾಗಿದ್ದಾರೆ. ಆ ಯೋಗಿ ಭೀಮಾನ ಮಹಾಗುರು ಮಹಿಮಾಗೋಸ್ವಾಮಿ ಅಲ್ಲದೆ ಬೇರೆ ಯಾರೂ ಅಲ್ಲ. ಭೀಮಾಬೊಯಿ, ತಾನು ಬರೆದ 'ಭಜನೆ' ಹಾಗೂ 'ಕವಿತೆ'ಗಳಲ್ಲಿ ಒಂದಷ್ಟನ್ನು ತನ್ನ ಗುರುವಿಗೆ ಅರ್ಪಿಸಿದ್ದಾನೆ ಎಂಬುದನ್ನು ಇಲ್ಲಿ ಲೇಖಕ ವಿಶ್ಲೇಷಿಸುತ್ತಾ ಹೋಗುತ್ತಾರೆ. 'ಕಾಣುವಿಕೆ' ಅನ್ನುವ ಪದಬಳಕೆ ರೂಪಾತ್ಮಕವಾದದ್ದೇ ಹೊರತು ವಾಚ್ಯವಲ್ಲ, ಬೇರೆ ಮಾತಲ್ಲಿ ಹೇಳಬೇಕೆಂದರೆ , ಇದು 'ಕಾಣ್ಕೆ' ಮಾತ್ರ. ಅಜ್ಞಾನದ ಮುಸುಕನ್ನು ದೂರ ಸರಿಸುವ ಆಧ್ಯಾತ್ಮಿಕ ಅರಿವಿನ ಒಂದು ಬಗೆಯ ಬೆಳಗು ಎನ್ನಬಹುದು. ಅವನ ಕವಿತೆಗಳಲ್ಲಿ ಭೌತಿಕ ವಿವರಗಳು ಇಲ್ಲವೇ ಇಲ್ಲ ಅನ್ನಬೇಕು. ಇಲ್ಲಿ ಬರುವ ಭೂವಿವರಗಳೆಲ್ಲ ಪ್ರತ್ಯಕ್ಷ ವಾಸ್ತವ ಹಾಗೂ ಕಾಣಲಾರದ ದೀಪಗಳಿಂದ ಕೂಡಿ ಮಿಣುಗುಟ್ಟುವ ಒಳಜಗತ್ತಿನದು. ಈ ಕವಿತೆಗಳು ಧ್ಯಾನಮಗ್ನತೆಯ ಹಾಗೂ ಒಳಅರಿವಿನ ಫಲದಂತೆ ಕಾಣುತ್ತವೆ. ಅದರ ಜೊತೆಗೆ, ಬಾಲ್ಯದ ಮುಗ್ಧತನ, ಹರೆಯಕ್ಕೆ ಕಾಲಿಡುತ್ತಿರುವಂತೆಯೇ ಜೀವನದ ಗುರಿ ಮರೆತು ಪ್ರೇಮ, ಕಾಮ, ಮದುವೆಗಳಲ್ಲಿ ಮುಳುಗಿ ಕೊನೆಗೆ ಒಂದು ದಿನ ಇವುಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವ ಆತ್ಮಾವಲೋಕನ ಇಲ್ಲಿದೆ, ಅಷ್ಟೇ ಅಲ್ಲ,  ಜೀವನದ ಏಳು ಬೀಳುಗಳ ಬಗ್ಗೆ, ಇಂದ್ರಿಯಾನುಭವ ಹಾಗೂ ತೀವ್ರ ಒಳತೋಟಿಯ ಬಗ್ಗೆ, ನಕ್ಕುನಗಿಸುವ ಮಾತುಗಳ ಬಗ್ಗೆ ಮತ್ತು ನಿಷ್ಕಾರಣ ಜ್ಞಾನದ ಬಗೆಗೂ ವಿವರಗಳಿವೆ. ಲೇಖಕ ಬಿ.ಸಿ. ಮುಜುಂದಾರರು ಸರಿಯಾಗಿಯೇ ಅಭಿಪ್ರಾಯ ಪಟ್ಟಿರುವಂತಹ ಆತನ ಜೀವನದ ಹಲವು ಅತಿಮುಖ್ಯ ಅಂಶಗಳ ಹಾಗೂ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವ ಭಾಗವನ್ನು ಇಲ್ಲಿ ನೀಡಲಾಗಿದೆ :

 

About the Author

ಶ್ರೀಧರ ಪಿಸ್ಸೆ

ಶ್ರೀಧರ ಪಿಸ್ಸೆ ಅವರು 1959ರ ಏಪ್ರಿಲ್ 24 ರಂದು ಕನಕಪುರದಲ್ಲಿ ಜನಿಸಿದರು. ‘ಕನ್ನಡ ದಾಸ ಸಾಹಿತ್ಯ ಮತ್ತು ಸಾಂಸ್ಕೃತಿಕ ಪಲ್ಲಟ’ ಅಧ್ಯಯನಕ್ಕೆ ಪಿಎಚ್ ಡಿ. ಲಭಿಸಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಖಾಸಗಿ ವಲಯದಲ್ಲಿ ವೃತ್ತಿ ಆರಂಭಿಸಿದ ಅವರು ಹಂಪಿ ವಿಶ್ವವಿದ್ಯಾಲಯದ ಆಡಳಿತ ವಿಭಾಗದಲ್ಲಿ 21 ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಹಸಿರು ನಿಶಾನೆ’ ಅವರ ಅನುವಾದಿತ ಕಥಾ ಗುಚ್ಛ.  ...

READ MORE

Related Books