ಭೀಮಜ್ಜನ ಭೂತ

Author : ಶಕುಂತಲಾ ಪಿ ಹಿರೇಮಠ

Pages 100

₹ 120.00




Year of Publication: 2022
Published by: ಅಕ್ಷರ ಮಂಟಪ ಪ್ರಕಾಶನ
Address: #1667, 6ನೇ ಸಿ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಹಂಪಿನಗರ, ಬೆಂಗಳೂರು-560104
Phone: 9448603689

Synopsys

ಕನ್ನಡ ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಇಟ್ಟುಕೊಂಡು ಒಂದಿಷ್ಟು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿರುವ ಅನುಭವಿ, ಉತ್ತಮ ಅಧ್ಯಾಪಕಿಯಾಗಿ ಮಕ್ಕಳ ಮನಸ್ಸು ಗೆದ್ದಿರುವ, ಶಕುಂತಲಾ ಪಿ ಹಿರೇಮಠ ಇವರು ಈಗ ಮಕ್ಕಳ ನಾಟಕಗಳ ಮೂಲಕ ಮಕ್ಕಳ ರಂಗಭೂಮಿ ವಲಯಕ್ಕೆ ಕೊಡುಗೆ ನೀಡಲು ಮುಂದಾಗಿರುವುದು ಶ್ಲಾಘನೀಯ. ಮಕ್ಕಳ ಸಾಹಿತ್ಯ ವಲಯಕ್ಕೆ ಶಿಕ್ಷಕರ ಕೊಡುಗೆ ಅಪಾರವಾದದ್ದು. ಅಧ್ಯಾಪಕಿ ಶಕುಂತಲಾ ಪಿ ಹಿರೇಮಠ ಅವರ "ನಿಯತ್ತಿನ ಹುಡುಗಿ", ಭೀಮಜ್ಜನಭೂತ, ದೆವ್ವ ಓಡಿಹೋಯಿತು, ನಾಟಕಗಳು ಮಕ್ಕಳ ಅರಿವು, ಕುತೂಹಲ ಹೆಚ್ಚಿಸುವ ಕಥಾಹಂದರವನ್ನು ಹೊಂದಿವೆ. ರಂಗ ಆಸಕ್ತರಿಂದ ಈ ನಾಟಕಗಳು ಪ್ರಯೋಗಗೊಂಡು ಮಕ್ಕಳ ಮನಮುಟ್ಟುವಲ್ಲಿ ಯಶಸ್ವಿಯಾಗಬಲ್ಲ ರಂಗಪಠ್ಯ ಹೊಂದಿವೆ. ಕನ್ನಡ ಸಾಹಿತ್ಯ ಪೋಷಕರು ಪ್ರೋತ್ಸಾಹಿಸಿದರೆ ಇವರಿಂದ ಇನ್ನಷ್ಟು ಮಕ್ಕಳ ಸಾಹಿತ್ಯ ಕೃಷಿ ನಿರೀಕ್ಷಿಸಬಹುದು. ಅವರಿಂದ ಮತ್ತಷ್ಟು ಉತ್ತಮ ಕೃತಿಗಳನ್ನು ನಿರೀಕ್ಷಿಸುತ್ತಾ ಶುಭಹಾರೈಸಿ ಅಭಿನಂದಿಸುವೆ ಎಂದು ಬೆನ್ನುಡಿಯಲ್ಲಿ ರವಿರಾಜ್ ಸಾಗರ್ ತಿಳಿಸಿದ್ದಾರೆ.

About the Author

ಶಕುಂತಲಾ ಪಿ ಹಿರೇಮಠ
(01 July 1958)

ಶಕುಂತಲಾ ಪಿ ಹಿರೇಮಠ .ರಾಮದುರ್ಗದವರು. ವಿಶ್ರಾಂತ ಉಪನ್ಯಾಸಕರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಕಟಿತ ಕೃತಿಗಳು ಸಮರಸವೇ ಜೀವನ -ಕವನ ಸಂಕಲನ, ರೆಕ್ಕೆ ಬಲಿತ ಹಕ್ಕಿ - ಕಥಾ ಸಂಕಲನ, ವಿಚಾರ ಮಂಥನ -ವೈಚಾರಿಕ ಲೇಖನಗಳು, ಹೊಸ ಚಿಗುರು ಹಳೆ ಬೇರು- ಮಕ್ಕಳ ನೀತಿ ಕಥಾ ಸಂಕಲನ, ಸರಸಕ್ಕನ ಸವಾರಿ - ಕಿರು ಕಾದಂಬರಿ, ಸಂತೋಷದ ಬದುಕಿಗೆ ಸಪ್ತ ಸ್ವರಗಳು -ವೈಚಾರಿಕ ಲೇಖನಗಳು, ಭಾವಯಾನ-ಕವನ ಸಂಕಲನ, ಕಥೆಯಲ್ಲ ಜೀವನ-.ಮಿನಿ ಕಥೆಗಳು, ಭೀಮಜ್ಜನ ಭೂತ ಹಾಗೂ ಇತರ ಮಕ್ಕಳ ನಾಟಕಗಳು,ಚಿನ್ನರ ಅಂಗಳ-ಮಕ್ಕಳ ಕವನ ಸಂಕಲನ ಕನ್ನಡ ರತ್ನ ...

READ MORE

Related Books