ಭಿನ್ನ ಬಿಂಬ

Author : ಕೆ.ಎನ್. ಗಣೇಶಯ್ಯ

Pages 104

₹ 80.00




Year of Publication: 2018
Published by: ಅಂಕಿತ ಪುಸ್ತಕ
Address: 53, ಶ್ಯಾಮ್ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004 0
Phone: 080 - 2661 7100 / 2661 7755

Synopsys

ಕನ್ನಡ ಸಾಹಿತ್ಯಲೋಕದಲ್ಲಿ ಗಣೇಶಯ್ಯನವರದು ವಿಶಿಷ್ಟ ಹೆಸರು. ತಮ್ಮ ವೈಜ್ಞಾನಿಕ ಐತಿಹಾಸಿಕ ಕಥಾನಕಗಳ ಮೂಲಕ ಹೊಸ ಮಾರ್ಗವನ್ನು ತೆರೆದ ಪ್ರವರ್ತಕರಿವರು. ಇತಿಹಾಸವನ್ನು ವೈಜ್ಞಾನಿಕ ನೆಲೆಯಲ್ಲಿ ಅನ್ವೇಷಿಸುವ, ಹೊಸ ದೃಷ್ಟಿಕೋನದಲ್ಲಿ ನೋಡುವ ಕ್ರಮ ಇವರ ಕಥನದ ಹಿಂದಿದೆ. ಕಥೆಯನ್ನು ಕುತೂಹಲಕಾರಿಯಾಗಿ ಹೇಳುವ ಶೈಲಿ ಇವರಿಗೆ ಸಿದ್ಧಿಸಿದೆ. ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ.

'ಭಿನ್ನಬಿಂಬ' ಕೃತಿಯ ಹಿನ್ನೆಲೆಯಲ್ಲಿ ಮುಖ್ಯವಾಗಿ ಕೆಲಸ ಮಾಡಿರುವುದು ಅವರ ಈ ಬಗೆಯ ಪ್ರವೃತ್ತಿಯೇ. ಜೊತೆಗೆ ಧರ್ಮ ವಿಜ್ಞಾನಗಳನ್ನು ಕುರಿತ ತೌಲನಿಕ ಚರ್ಚೆ ಇಲ್ಲಿದೆ. ಚರಿತ್ರೆಯ ವಿಸ್ಕೃತಿಯ ಪರಿಣಾಮಗಳೇನೆಂಬುದನ್ನು ಅತ್ಯಂತ ಕುತೂಹಲದ ಧಾಟಿಯಲ್ಲಿ ನಿರೂಪಿಸುವ ನಿಧಿಯ ಅವತರಣೆ' ಲೇಖನವಿದೆ. ಎಲ್ಲ ಲೇಖನಗಳು ಓದುಗರನ್ನು ಆಲೋಚನೆಗೆ ಹಚ್ಚುವಷ್ಟು ಪರಿಣಾಮಕಾರಿಯಾಗಿವೆ. ವಿಜ್ಞಾನ, ಚರಿತ್ರೆ, ಧರ್ಮಗಳ ಮುಖಾಮುಖಿಯಲ್ಲಿ ತಿಳಿದುಕೊಳ್ಳಬೇಕಾದ ಸತ್ಯದ ಅನಾವರಣವನ್ನು ಇಲ್ಲಿನ ಲೇಖನಗಳು ಮಾಡುತ್ತವೆ. ಇಂಗ್ಲಿಷ್‌ನಲ್ಲಿ ಅನೇಕ ಸಂಶೋಧನಾ ಲೇಖನಗಳನ್ನು ಬರೆದಿರುವ ಗಣೇಶಯ್ಯ ಅವರ ಮೊದಲ ಆ ಸ್ವರೂಪದ ಕನ್ನಡದ ಕೃತಿ ಭಿನ್ನಬಿಂಬ.

About the Author

ಕೆ.ಎನ್. ಗಣೇಶಯ್ಯ

ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು  ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...

READ MORE

Related Books