ಭೂಮಿಯಲ್ಲ ಇವಳು

Author : ಎಚ್.ಎಲ್. ಪುಷ್ಪ

Pages 100

₹ 80.00




Year of Publication: 2004
Published by: ಸಿವಿಜಿ ಪಬ್ಲಿಕೇಷನ್ಸ್‌
Address: #70, 2ನೇ ಮುಖ್ಯರಸ್ತೆ, ಜಬ್ಬರ್‌ ಬ್ಲಾಕ್‌, ವೈಯ್ಯಾಲಿಕಾವಲ್, ಬೆಂಗಳೂರು
Phone: 08023313400

Synopsys

'ಭೂಮಿಯಲ್ಲ ಇವಳು' ಎಚ್.ಎಲ್. ಪುಷ್ಪ ಅವರು ರಚಿಸಿರುವ ನಾಟಕ. ಈ ಹಿಂದೆ ಜನ್ನನ ಅಮೃತಮತಿಯ ಕುರಿತು ಕವಿತೆ ಬರೆದಿದ್ದರು. ಅಮೃತಮತಿ ಮತ್ತೊಮ್ಮೆ ಈ ನಾಟಕದಲ್ಲಿ ಮೈತಾಳಿದ್ದಾರೆ. ಅಮೃತಮತಿ ಸೇವಕನೊಬ್ಬನ ಹಾಡಿಗೆ ಮನಸೋತಿದ್ದು, ಅದನ್ನು ಎದುರಿಸಿದ ಪರಿಯ ಕುರಿತು ಸಂಕ್ಷಿಪ್ತವಾಗಿ ಈ ನಾಟಕದಲ್ಲಿ ಕಟ್ಟಿಕೊಡಲಾಗಿದೆ.

About the Author

ಎಚ್.ಎಲ್. ಪುಷ್ಪ
(18 September 1962)

ಕವಯತ್ರಿ, ಸ್ತ್ರೀವಾದಿ ಎಚ್.ಎಲ್. ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಹಳ್ಳೀ ಉಜ್ಜನಿಯಲ್ಲಿ 1962 ಸೆಪ್ಟಂಬರ್‌ 18ರಂದು ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕವನ ರಚನೆಯಲ್ಲಿ ಅತೀವ ಆಸಕ್ತಿ ಇರುವ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು.  ಪುಷ್ಪ ಅವರ ಪ್ರಮುಖ ಕೃತಿಗಳೆಂದರೆ ಅಮೃತಮತಿಯ ಸ್ವಗತ, ಗಾಜುಗೊಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು (ಕವನ ಸಂಕಲನ), ಭೂಮಿಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ (ನಾಟಕ), ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ ...

READ MORE

Related Books