ಭೂತಾನ್ - ನಳನಳಿಸುವ ಪ್ರಶಾಂತತೆಯ ನಾಡಿನಲ್ಲಿ

Author : ಡಿ.ಜಿ. ಮಲ್ಲಿಕಾರ್ಜುನ

Pages 148

₹ 350.00




Year of Publication: 2017
Published by: ಡಾ.ಎಂ.ಬೈರೇಗೌಡ
Address: ಪ್ರಗತಿ ಗ್ರಾಫಿಕ್ಸ್, ಬೆಂಗಳೂರು. 119, 3ನೇ ಕ್ರಾಸ್, 8 ನೇ ಮುಖ್ಯ ರಸ್ತೆ, ಹಂಪಿನಗರ, ಬೆಂಗಳೂರು 560104
Phone: 7899906116

Synopsys

ಭೂತಾನ್-ನಳನಳಿಸುವ ಪ್ರಶಾಂತತೆಯ ನಾಡಿನಲ್ಲಿ-ಡಿ.ಜಿ.ಮಲ್ಲಿಕಾರ್ಜುನ ಅವರು ಪ್ರವಾಸ ಕಥನ. ಆಧುನಿಕತೆಯೊಂದಿಗೆ ಅಧ್ಯಾತ್ಮಿಕತೆಯನ್ನೂ ಮೈಗೂಡಿಸಿಕೊಂಡಿರುವುದರಿಂದ ಭೂತಾನ್ ಜನರ ಮುಖದಲ್ಲಿ ದುಃಖದ ಭಾವನೆಯ ಬದಲಾಗಿ ಸದಾ ನಗು ಮತ್ತು ಪ್ರಶಾಂತತೆಯನ್ನು ಕಾಣಬಹುದಾಗಿದೆ. ಅದುವೇ ಅವರ ಆರೋಗ್ಯ ಹಾಗೂ ದೀರ್ಘಾಯುಷ್ಯದ ರಹಸ್ಯ.

ಬುದ್ಧನ ತತ್ವಗಳನ್ನು ಅಳವಡಿಸಿಕೊಂಡಿರುವ ಅವರದ್ದು ಮಾತು ಕಡಿಮೆ. ಅವರು ಅಂತರ್ಮುಖಿಗಳು. ಸಹಾಯ ಮಾಡಲಾಗದಿದ್ದರೆ ತೊಂದರೆಯನ್ನು ಮಾಡಬಾರದೆಂಬ ಧೋರಣೆ. ಸಂತಸವೆಂಬುದು ಹೊರಗೆಲ್ಲಿಂದಲೋ ಬರುವುದಿಲ್ಲ ನಮ್ಮೊಳಗೆ ಹುಟ್ಟಬೇಕು ಮತ್ತು ನಮ್ಮ ಸಂತಸಕ್ಕೆ ಬೇರೆ ಯಾರೋ ಕಾರಣರಲ್ಲ, ನಾವೇ ಕಾರಣರು ಎಂಬ ಸತ್ಯವನ್ನು ಮನಗಂಡವರು. ಭೂತಾನ್ ಗೆ ತನ್ನದೇ ಪ್ರಪಂಚ. ಯಾರ ಹಂಗೂ ಅವರಿಗಿಲ್ಲ. ಉಳಿದ ಪ್ರಪಂಚದ ಅಗತ್ಯವೂ ಅವರಿಗಿಲ್ಲ. ಆದರೆ ಪ್ರಪಂಚಕ್ಕೆಲ್ಲಾ ಭೂತಾನ್ ಮತ್ತು ಅಲ್ಲಿನವರ ಮನಸ್ಥಿತಿಯ ಅಗತ್ಯವಿದೆ ಎಂದು ಲೇಖಕರು ತಮ್ಮ ಅನುಭವವಾಗಿ ಪ್ರವಾಸ ಕಥನದಲ್ಲಿ ದಾಖಲಿಸಿದ್ದಾರೆ.

About the Author

ಡಿ.ಜಿ. ಮಲ್ಲಿಕಾರ್ಜುನ

ಚಿಕ್ಕಬಳ್ಳಾಪುರದ ಶಿಡ್ಲಘಟ್ಟದವರಾದ ಡಿ.ಜಿ. ಮಲ್ಲಿಕಾರ್ಜುನ ಅವರು ಓದಿದ್ದು ಮೆಕ್ಯಾನಿಕಲ್‌ ಎಂಜಿನಿಯರಿಂಗ್. ಪ್ರಸ್ತುತ ಪ್ರಜಾವಾಣಿ ಮತ್ತು ಡೆಕನ್‌ ಹೆರಲ್ಡ್‌ ದಿನಪತ್ರಿಕೆಗೆ ಶಿಡ್ಲಘಟ್ಟ ತಾಲ್ಲೂಕು ವರದಿಗಾರರಾಗಿ ಕೆಲಸ ಮಾಡುತ್ತಿರುವ ಇವರು ಛಾಯಾಗ್ರಹಣದಲ್ಲಿ ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿಯಿಂದ ಪ್ರಮಾಣ ಪತ್ರ ಪಡೆದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ನಮ್ಮ ಶಿಡ್ಲಘಟ್ಟ, ಕ್ಲಿಕ್, ಭೂತಾನ್, ಅರೆಕ್ಷಣದ ಅದೃಷ್ಟ, ರಸ್ಕಿನ್ ಬಾಂಡ್ ಕತೆಗಳು, ಯೋರ್ಡಾನ್ ಪಿರೆಮಸ್- ಜೋರ್ಡಾನ್ ಈಜಿಪ್ಟ್ ಪ್ರವಾಸ ಕಥನ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಯೋರ್ಡಾನ್ ಪಿರೆಮಸ್ ಪ್ರವಾಸ ಕಥನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ...

READ MORE

Excerpt / E-Books

......ಭೂತಾನ್ ನಲ್ಲಿ ಮಕ್ಕಳು ಸಿಕ್ಕಾಗೆಲ್ಲಾ ನನ್ನ ಜೇಬಲ್ಲಿಟ್ಟುಕೊಂಡಿದ್ದ ಚಾಕೋಲೇಟ್ ಗಳನ್ನು ಕೊಡುತ್ತಿದ್ದೆ. ಎರಡೂ ಕೈಗಳನ್ನು ಜೋಡಿಸಿಕೊಂಡು ಪ್ರೀತಿಭಾವದಿಂದ ನಾವು ಕೊಡುವ ಚಾಕೋಲೇಟ್ ಅಥವಾ ತಿಂಡಿಯನ್ನು ಅವರು ಪಡೆಯುವ ರೀತಿ ಕಂಡು ಸಂಕೋಚವಾಗುತ್ತಿತ್ತು. ಅವರು ನಮ್ಮಿಂದ ತಿಂಡಿಯನ್ನಲ್ಲ ಪ್ರೀತಿಯನ್ನು ಪಡೆಯುವಂತೆ ಭಾಸವಾಗುತ್ತಿತ್ತು. ನಾನು ಕೊಟ್ಟಿದ್ದು ದೊಡ್ಡದಲ್ಲ, ಅವರು ಸ್ವೀಕರಿಸಿದ್ದು ದೊಡ್ಡದು. ಅವರು ಸ್ವೀಕರಿಸಿದ ನನ್ನನ್ನು ಸಣ್ಣವನ್ನಾಗಿಸಿತ್ತು. ತೆಗೆದುಕೊಳ್ಳುವವರು ಅಷ್ಟು ಪ್ರೀತಿಯಿಂದ ಪಡೆದರೆ, ಕೊಡುವವರು ಮತ್ತಷ್ಟು ಪ್ರೀತಿಯಿಂದ ಕೊಡಬೇಕೆಂಬ ಪಾಠವನ್ನು ಅವರು ಕಲಿಸಿದರು...

Related Books