ಭೌತಿಕ ಜಗತ್ತು

Author : ಎಂ.ಎಸ್.ಎಸ್. ಮೂರ್ತಿ

Pages 324

₹ 235.00




Year of Publication: 2017
Published by: ವಸಂತ ಪ್ರಕಾಶನ
Address: # 360, 10ನೇ ಬಿ;ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011,
Phone: 080 2244 3996

Synopsys

ಪ್ರೊ. ವಿ.ವಿ. ರಾಮನ್ ಅವರು ಬರೆದ ಕೃತಿಯನ್ನು ‘ಭೌತಿಕ ಜಗತ್ತು ’ ಎಂಬ ಶೀರ್ಷಿಕೆಯಡಿ ಲೇಖಕ ಹಾಗೂ ವಿಜ್ಞಾನಿ ಡಾ. ಎಂ.ಎಸ್.ಎಸ್. ಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾಲದಿಂದ ಕಾಲಕ್ಕೆ ಬದಲಾಗುವ ವಿಜ್ಞಾನದ ದರ್ಶನಗಳು ಈ ಕೃತಿಯ ಜೀವಾಳವಾಗಿವೆ. ಬದಲಾವಣೆ ಎಂಬುದು ಪ್ರಕೃತಿಯ ನಿಯಮ. ಅದನ್ನೇ, ವಿಜ್ಞಾನವೂ ಹೇಳುತ್ತದೆ. ಈ ಮಾತನ್ನು ಪುಷ್ಠೀಕರಿಸಲು ಕೆಲವು ಘಟನೆಗಳು, ಪ್ರಯೋಗಗಗಳ ಮೂಲಕ ವಿಜ್ಞಾನದ ಎಲ್ಲ ವಲಯಗಳಲ್ಲಿ ತೋರಿದ್ದೂ, ವಿಜ್ಞಾನದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ; ವಿಜ್ಞಾನದ ವಿಷಯಗಳು ಆಸಕ್ತಿ ಇರುವ ಎಲ್ಲ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೂ ಈ ಕೃತಿ ಉಪಯುಕ್ತವಾಗಿದೆ.

 

About the Author

ಎಂ.ಎಸ್.ಎಸ್. ಮೂರ್ತಿ
(16 August 1929 - 18 December 2012)

ವಿಜ್ಞಾನಿ ಎಂ.ಎಸ್.ಎಸ್. ಮೂರ್ತಿ ಅವರು 16-08-1929ರಂದು ಜನಿಸಿದ ಲೇಖಕರು ಸಹ.ಮುಂಬೈಯ ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ  40 ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತರು. ರೇಡಿಯೇಶನ್ ಬಯೋಫಿಜಿಕ್ಸ್ ನಲ್ಲಿ ಪಿಎಚ್.ಡಿ ಮಾಡಿದ್ದಾರೆ. ಕ್ಯಾನ್ಸರ್‍ ಸೇರಿದಂತೆ ಇತರೆ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುವ ವಿಕಿರಣಗಳು ಹಾಗೂ ಅನುಸರಿಬೇಕಾದ ಸುರಕ್ಷತಾ ನೀತಿಗಳ ಅಧ್ಯಯನ ಇವರ ವಿಶೇಷತೆ. ಸದ್ಯ, ಬೆಂಗಳೂರಿನಲ್ಲಿ ನೆಲೆಸಿದ್ದು, ವೈಜ್ಞಾನಿಕ ವಿಷಯವಾಗಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ಲೇಖನಗಳನ್ನು ಬರೆಯುತ್ತಿದ್ದಾರೆ. ಕ್ಯಾನ್ಸರ್, ಖಗೋಳ ವಿಜ್ಞಾನ, ಮಲೇರಿಯಾ, ಪರಮಾಣು, ತಳಿ ವಿಜ್ಞಾನ, ಕಾಲರಾ ವಿಷಯಗಳು ಕುರಿತದ್ದಾಗಿವೆ.  ಕೃತಿಗಳು: ಆರೋಗ್ಯದ ಅಂಗಳದಲ್ಲಿ ವೈಜ್ಞಾನಿಕ ಪ್ರಗತಿ (ವೈದ್ಯಕೀಯ ಲೇಖನಗಳ ...

READ MORE

Related Books