ಭೂಮಿಯಿಂದ ಬಾನಿನತ್ತ

Author : ಪಿ.ಆರ್‌. ವಿಶ್ವನಾಥ್‌

Pages 180

₹ 150.00
Year of Publication: 2016
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಬೆಂಗಳೂರು
Phone: 22392474

Synopsys

ಪಿ.ಆರ್‌. ವಿಶ್ವನಾಥ್‌ ಅವರ ಭೂಮಿಯಿಂದ ಬಾನಿನತ್ತ ಕೃತಿಯು ಗ್ರೀಕರ ಕಾಲದಿಂದ ಇಂದಿನವರೆಗಿನ ಬಾಹ್ಯಾಕಾಶದ ಇತಿಹಾಸ, ವೈಜ್ಞಾನಿಕ ಪರಿಕಲ್ಪನೆ ಬಗ್ಗೆ ಬರೆದಿದ್ದಾರೆ. ಈ ಕೃತಿಯಲ್ಲಿ ಪ್ರಮುಖ ವಿಜ್ಞಾನಿಕಗಳನ್ನು ಪರಿಚಯಿಸಲಾಗಿದೆ. 

About the Author

ಪಿ.ಆರ್‌. ವಿಶ್ವನಾಥ್‌

ವಿಜ್ಞಾನ ಲೇಖಕ, ಅಂಕಣಕಾರ ಪಿ.ಆರ್. ವಿಶ್ವನಾಥ್ ಅವರು ಮೂಲತಃ ಬೆಂಗಳೂರಿನವರು. 1942ರಲ್ಲಿ ಜನಿಸಿದ ಪಿ.ಆರ್. ವಿಶ್ವನಾಥ್ ಅವರು ಪಾಲಹಳ್ಳಿ ವಿಶ್ವನಾಥ್ ಎಂದೇ ಪ್ರಸಿದ್ಧರಾದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್.ಸಿ ಪೂರೈಸಿದ ಅವರು ಆ್ಯನ್ ಆರ್ಬರ್ ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದರು. ಆನಂತರ ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿ.ಐ.ಎಫ್.ಆರ್)ಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಬೆಂಗಳೂರಿನ ಭಾರತೀಯ ಖಭೌತ ಸಂಸ್ಥೆ (ಐ.ಐ.ಎ) ಸಂದರ್ಶಕ ಪ್ರಾಧ್ಯಾಪಕರು; ಕ್ಯಾಲಿಫೋರ್ನಿಯ ಮತ್ತು ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರು, ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದರು. ...

READ MORE

Related Books