ಭೂಗಳ್ಳರು ಕಬಳಿಸಿದ ಸರ್ಕಾರಿ ಜಮೀನನ್ನು ಉಳಿಸಿದ ಹೋರಾಟ

Author : ಎಚ್. ಎಸ್. ದೊರೆಸ್ವಾಮಿ

Pages 72

₹ 75.00




Year of Publication: 2019
Published by: ಎಂ.ಮುನಿಸ್ವಾಮಿ ಅಂಡ್‌ ಸನ್ಸ್‌
Address: ಸರ್ವೋದಯ, #72, ಸರ್ವೇಯರ್‌ ರಸ್ತೆ, ಬಸವನಗುಡಿ, ಬೆಂಗಳೂರು-560004
Phone: 08026576228

Synopsys

ಭೂಕಬಳಿಕೆ ವಿರೋಧಿಸಿ ನಡೆಸಿದ ಹೋರಾಟದ ಅನುಭವವನ್ನು ಓದುಗರೊಂದಿಗೆ ಹಿರಿಯ ಸ್ವಾತಂತ್ಯ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಹಂಚಿಕೊಂಡ ಕೃತಿಯೇ-ಭೂಗಳ್ಳರು ಕಬಳಿಸಿದ ಸರ್ಕಾರಿ ಜಮೀನನ್ನು ಉಳೀಸಿದ ಹೋರಾಟ.,

ಪುಸ್ತಕ ಕುರಿತು ಬರೆದಿರುವ ಎಚ್.ಎಸ್. ದೊರೆಸ್ವಾಮಿ, ‘ಬಾಲಸುಬ್ರಹ್ಮಣ್ಯಂ ವರದಿಯಲ್ಲಿ ಕರ್ನಾಟಕದಲ್ಲಿ ಒಟ್ಟು 4 ಲಕ್ಷ ಎಕರೆ ಜಮೀನು ಕಬಳಿಕೆಯಾಗಿದೆ ಎಂದಿದ್ದರೆ, ಎ.ಟಿ. ರಾಮಸ್ವಾಮಿ ವರದಿಯಲ್ಲಿ ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 40ಸಾವಿರ ಎಕರೆ ಜಮೀನು ಭೂಗಳ್ಳರ ವಶವಾಗಿದೆ ಎಂದಿದ್ದಾರೆ. ಆದರೆ ವಾಸ್ತವವಾಗಿ ಇದಕ್ಕೆ 10ರಷ್ಟು ಜಮೀನು ಕರ್ನಾಟಕದಲ್ಲಿ ಕಬಳಿಕೆಯಾಗಿದೆ. ಈ ಎಲ್ಲ ಸರ್ಕಾರಿ ಜಮೀನನ್ನು ವಾಪಸ್ಸು ತೆಗೆದುಕೊಳ್ಳಲು ಸರ್ಕಾರ ಒಂದು ಜನತಾ ಹೋರಾಟವನ್ನೇ ನಡೆಸಬೇಕಾಯಿತು. ಎ.ಟಿ.ರಾಮಸ್ವಾಮಿ, ನಿವೃತ್ತ ನ್ಯಾ., ಸಂತೋಷ ಹೆಗ್ಡೆ, ಮಾಜಿ ಸ್ಪೀಕರ್‌ ಕೃಷ್ಣ, ಎಲ್ಲಪ್ಪ ರೆಡ್ಡಿ, ಎಚ್.ಎಸ್. ದೊರೆಸ್ವಾಮಿ, ಎಸ್.ಆರ್‌. ಕಾಂತಾ ಸೇರಿದಂತೆ ಎಲ್ಲ ಹೋರಾಟ ಸಂಸ್ಥೆಗಳೂ ಕೂಡಿಕೊಂಡು 39 ದಿನಗಳ ಅವಿಸ್ಮರಣೀಯ ಹೋರಾಟ ನಡೆಸುವುದರ ಮೂಲಕ ಸಿದ್ದರಾಮಯ್ಯ ಸರ್ಕಾರವನ್ನು ಮಣಿಸಲಾಯಿತು. ಈ ಹೋರಾಟದ ವಿವರಗಳನ್ನು ಈ ಹೊತ್ತಿಗೆಯಲ್ಲಿ ನೀಡಿರುವುದಾಗಿ ಹೇಳೊಕೊಂಡಿದ್ದಾರೆ.

About the Author

ಎಚ್. ಎಸ್. ದೊರೆಸ್ವಾಮಿ
(10 April 1918)

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಪೂರ್ಣ ಹೆಸರು ಹಾರೋಹಳ್ಳಿ ಶ್ರೀನಿವಾಸಯ್ಯ ದೋರೆಸ್ವಾಮಿ. ಹಾರೋಹಳ್ಳಿಯಲ್ಲಿ ಜನಿಸಿದ ದೊರೆಸ್ವಾಮಿ ತಮ್ಮ 5ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡರು. ಆ ಬಳಿಕ ಅಜ್ಜನ ಬಳಿ ಬೆಳೆದ ಅವರು ಹಾರೋಹಳ್ಳಿಯಲ್ಲೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಮಹಾತ್ಮ ಗಾಂಧಿ ‘ಮೈ ಅರ್ಲಿ ಲೈಫ್’ ಪುಸ್ತಕವನ್ನು ಓದಿ ಅದರಿಂದ ಪ್ರಭಾವಿತರಾದ ದೊರೆಸ್ವಾಮಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಿದರು. ಕಾಲೇಜು ಶಿಕ್ಷಣದ ಜೊತೆಗೆ ಸ್ವತಂತ್ರ್ಯ ಹೋರಾಟದಲ್ಲೂ ಭಾಗಿಯಾಗುತ್ತಿದ್ದ ದೊರೆಸ್ವಾಮಿ 1942ರ ಹೊತ್ತಿಗೆ ತಮ್ಮ ಬಿ.ಎಸ್.ಸಿ ಪೂರ್ಣಗೊಳಿಸಿ ಉಪನ್ಯಾಸಕ ವೃತ್ತಿ ಆರಂಭಿಸಿದರು. ಅದೇ ವರ್ಷ ...

READ MORE

Related Books