ಬೀದರ ಜಿಲ್ಲೆಯ ಜನಪದ ಆಹಾರ ಪದ್ಧತಿ ಮತ್ತು ಆರೋಗ್ಯ

Author : ಶಿವಗಂಗಾ ರುಮ್ಮಾ

Pages 96

₹ 90.00




Year of Publication: 2019
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ
Address: ಜಿ-2, ವಿ. ವಿ. ಹಾಸ್ಟೆಲ್‌ ಕಾಂಪ್ಲೆಕ್ಸ್, ಸೇಡಂ ರಸ್ತೆ, ಕಲಬುರಗಿ- 585105
Phone: 8095897118

Synopsys

ಪ್ರದೇಶದ ಹವಾಮಾನ, ಆಯಾ ಋತುಮಾನ ಅಲ್ಲಿಯ ಬೆಳೆ ಮುಂತಾದವುಗಳ ಆಧಾರದ ಮೇಲೆ ಅಲ್ಲಿಯ ಜನರ ಆಹಾರ ಪದ್ದತಿ ನಿರ್ಧರಿಸಲ್ಪಡುತ್ತದೆ. ಕೃತಿಯ ಹೆಸರೇ ಸೂಚಿಸುವಂತೆ ಲೇಖಕರು ಬೀದರ ಜಿಲ್ಲೆಯ ಆಹಾರ ಪದ್ಧತಿ, ಸಂಸ್ಕೃತಿಯ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೇ, ಆಹಾರ ಹಾಗೂ ಜನರ ಆರೋಗ್ಯಕ್ಕೂ ಇರುವ ಅಂರ್ತಸಂಬಂಧವನ್ನು ವೈಜ್ಞಾನಿಕವಾಗಿ ಲೇಖಕಿ ಡಾ.ಶಿವಗಂಗಾ ರುಮ್ಮಾ ಅವರು ಬೆಳಕು ಚೆಲ್ಲಿದ್ದಾರೆ.

 ಪಾಶ್ಚಾತ್ಯ ಪ್ರಭಾವಿತ ಆಧುನಿಕ ಜೀವನಶೈಲಿ ಹಾಗೂ ಜಾಗತೀಕರಣದ ಫಲವಾಗಿ ಬಹು ಸಂಸ್ಕೃತಿಯ ಭಾಗವಾದ ಆಹಾರಪದ್ಧತಿ ನೇಪಥ್ಯಕ್ಕೆ ಸರಿದು ನಿರ್ಭಿಜಿಕರಣದ ಸತ್ವಹೀನ ಸಮಾಜ ನಿರ್ಮಾಣದಲ್ಲಿ ಆಹಾರಪದ್ಧತಿ ಅದರ ಮಹತ್ವ ಎತ್ತಿತೋರಿಸುವ ಸಮಷ್ಟಿ ಪ್ರಜ್ಞೆ ಹಾಗೂ ಸಾಂಸ್ಕೃತಿಕ ಕಾಳಜಿ ಈ ಕೃತಿಯಲ್ಲಿದೆ. ಇಡೀ ಜಗತ್ತಿನಲ್ಲಿ ಭಾರತದ ಸಂಸ್ಕೃತಿ ನೆಲ ವಾಗಿದ್ದು ಇಲ್ಲಿ ಪ್ರಾದೇಶಿಕವಾಗಿ ಆಹಾರದಲ್ಲಿ ವೈವಿಧ್ಯತೆ ಇರುವುದಕ್ಕೆ ಈ ಕೃತಿ ಸಾಕ್ಷಿಯಾಗಿದೆ.ದೇಸಿ ಆಹಾರ ವಿಮುಖತೆ ಯಿಂದಾಗಿಯೇ ನಾವು ಹಲವು ರೋಗಗಳಿಗೆ ತುತ್ತಾಗುತ್ತಿದ್ದು ಒಂದು ಪ್ರದೇಶದ ಆಹಾರ ಸಂಸ್ಕೃತಿಯನ್ನು ದಾಖಲೀಕರಣ ವಾಗಿ ಈ ಕೃತಿ ಮಹತ್ವ ಪಡೆದುಕೊಂಡಿದೆ.

 

About the Author

ಶಿವಗಂಗಾ ರುಮ್ಮಾ
(01 January 1969)

ಶಿವಗಂಗಾ ರುಮ್ಮಾ ಜನವರಿ 1, 1969 ರಲ್ಲಿ ಜನಿಸಿದರು. ಚಿಂತಕರು, ಬಸವತತ್ತ್ವ ಹಾಗೂ ಕಾರ್ಲ್ ಮಾರ್ಕ್ಸ್ ತತ್ತ್ವಗಳನ್ನು ಅಧ್ಯಯನ ಮಾಡಿದವರು. ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕಲಬುರ್ಗಿಯ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದು, ಪ್ರಭಾರಿ ಕುಲಸಚಿವರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಕ್ಕನಾಗಮ್ಮ, ನೀಲಾಂಬಿಕೆ, ಬಂದೂಕಿನ ಬಾಯ ಗುಬ್ಬಿ ಗೂಡು, ಕಾಲದ ಮಾಯೆ, ನೀರ ನುಡಿ, ಹೊತ್ತು ಹೋಗದ ಮುನ್ನ, ತಳಕ್ಕೆ ನೀರೆರೆದರೆ ಮೊದಲಾದ ಕೃತಿಗಳನ್ನು ರಚಿಸಿದ್ದಲ್ಲದೇ,   "ನಡುಗನ್ನಡ ಸಾಹಿತ್ಯ" ಸಂಗ್ರಹ, 371 (ಜೆ)  ಹಾಗೂ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ, ಮತ್ತು ಆದಿಲ್ ಶಾಹಿ ಕಾಲದ ಕರ್ನಾಟಕದ ಬಹು ಸಂಸ್ಕೃತಿ  ಮೊದಲಾದ ಕೃತಿಗಳನ್ನು ...

READ MORE

Related Books