ಬೀಡಿನ ಧರ್ಮದೃಷ್ಟಿ

Author : ಎನ್‌. ನಾರಾಯಣ ಬಲ್ಲಾಳ್‌



Published by: ರೂಪ ಪ್ರಕಾಶನ

Synopsys

ಕತೆಗಾರ ಎನ್. ನಾರಾಯಣ ಬಲ್ಲಾಳ್ ಅವರ ಕತಾ ಸಂಕಲನ ಬೀಡಿನ ಧರ್ಮದೃಷ್ಟಿ. ಈ ಕೃತಿಯಲ್ಲಿ ಸಾಹಿತಿ ಬಿ.ಜನಾರ್ದನ್ ಭಟ್ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಉಡುಪಿಯ ಖ್ಯಾತ ಕತಗಾರರಾದ ಎನ್. ನಾರಾಯಣ ಬಲ್ಲಾಳರು ಐವತ್ತರ ದಶಕದ ಉತ್ತರಾರ್ಧದಲ್ಲಿ, ಅರುವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ ಬಹಳಕ್ರಿಯಾಶೀಲರಾಗಿದ್ದರು. ನವೋದಯದ ಸತ್ವವನ್ನೆಲ್ಲ ಹೀರಿಕೊಂಡು ಹೊಸಬಗೆಯಲ್ಲಿ ಬರೆಯಲಾರಂಭಿಸಿ ಜನಪ್ರಿಯರಾಗಿದ್ದ ಅವರ ನಾಲ್ಕು ಸಂಕಲನಗಳು ಅರುವತ್ತರ ದಶಕದಲ್ಲಿ ಪ್ರಕಟವಾಗಿದ್ದವು. ಅವರ ಐದನೆಯ ಕಥಾಸಂಕಲನ ನಾಲ್ಕು ವರ್ಷಗಳ ಹಿಂದೆ ಬಂತು. 'ಬೀಡಿನ ಧರ್ಮದೃಷ್ಟಿ' ಅವರ ಸಮಗ್ರ ಕತೆಗಳ ಸಂಕಲನ. ನಾರಾಯಣ ಬಲ್ಲಾಳ್ ಅವರು ತಮ್ಮ ಕೆಲವು ಕತೆಗಳಲ್ಲಿ ಕೆಲವು ತಾತ್ವಿಕ ಮತ್ತು ವೈಚಾರಿಕ ಸಮಸ್ಯೆಗಳನ್ನೆತ್ತಿಕೊಂಡು, ಕಥಾಚೌಕಟ್ಟಿನೊಳಗೆ ಅವುಗಳನ್ನು ಚರ್ಚಿಸುತ್ತಾರೆ. ಆ ಕಾಲದ ಬರವಣಿಗೆ ವಾಸ್ತವಕ್ಕೆ ಹತ್ತಿರವಾಗಬೇಕೆಂಬ ಇರಾದೆಯಿಂದ ಅದಕ್ಕೆ ಬೇಕಾದ ತಂತ್ರಗಳನ್ನು ಹುಡುಕುವುದರಿಂದ ದೈನಂದಿನ ಅನುಭವದಲ್ಲಿಯೇ ವೈಚಾರಿಕ ಔನ್ನತ್ಯವನ್ನು ಸಾಧಿಸುವ ಸವಾಲನ್ನು ಎದುರಿಸಿತ್ತು. ಅದನ್ನು ಸಮರ್ಥವಾಗಿ ಎದುರಿಸಿದ ಬಲ್ಲಾಳರು ಸಾಮಾನ್ಯ ಲೇಖಕರಂತೆ ವಾಸ್ತವ ಚಿತ್ರಣಗಳನ್ನು ನೀಡುವಷ್ಟಕ್ಕೆ ತೃಪ್ತರಾಗದೆ ಆಶಯ ಮತ್ತು ದರ್ಶನ ಪ್ರಧಾನ ಕತೆಗಳನ್ನು ಬರೆಯಲು ಪ್ರಯತ್ನಿಸಿದ್ದಾರೆ. ಕತೆಗಳಲ್ಲಿ ತಾತ್ವಿಕ ಹಾಗೂ ಸಾಮಾಜಿಕ ಪ್ರಶ್ನೆಗಳನ್ನು ಎತ್ತುವುದು ಲೇಖಕನ ಒಂದು ಜವಾಬ್ದಾರಿ ಎಂದು ನಾರಾಯಣ ಬಲ್ಲಾಳ್ ತಿಳಿಯುತ್ತಾರೆ. " ಕೆಂಪು ದೀಪ' ಕಥಾಸಂಕಲನದಲ್ಲಿ ವೇಶ್ಯಾ ಸಮಸ್ಯೆಯ ಬಗ್ಗೆ ಗಮನಹರಿಸಿದ ನಾರಾಯಣ ಬಲ್ಲಾಳರು, ಪ್ರಗತಿಶೀಲ ಘಟ್ಟದ ನಂತರ ಇತಿಹಾಸ ಮತ್ತು ಐತಿಹ್ಯಗಳ ಕಡೆಗೆ ದೃಷ್ಟಿಹರಿಸಿ, ಪಾರಂಪರಿಕ ಕಥನಶೈಆಯಲ್ಲ ಆಧುನಿಕ ಆಶಯಗಳನ್ನು ಹೇಳಲು ಸಾಧ್ಯವೆ ಎಂದು ಪರಿಶೀಲಸಿ ಯಶಸ್ವಿಯಾಗಿದ್ದಾರೆ. ಕತೆಗಳನ್ನು ಪಾಶ್ಚಾತ್ಯರಂತ ನಾಟಕೀಯವಾಗಿ ಪ್ರಾರಂಭಿಸಿ, ಕೊನೆಯವರೆಗೂ ಕುತೂಹಲ ಉಳಿಸಿಕೊಳ್ಳುವಂತೆ ನಿರೂಪಿಸುವ ಕಥನಕಲೆಯಲ್ಲಿ ಬಲ್ಲಾಳರು ಸಿದ್ಧಹಸ್ತರು. ನಾರಾಯಣ ಬಲ್ಲಾಳರ ಲಭ್ಯ ಕತೆಗಳನ್ನೆಲ್ಲ ಒಂದು ಸಂಪುಟದಲ್ಲಿ ಓದುವುದು ಸಂತೋಷಕರ ಅನುಭವವಾಗಿದೆ ಎಂಬುದಾಗಿ ಹೇಳಿದ್ದಾರೆ.

About the Author

ಎನ್‌. ನಾರಾಯಣ ಬಲ್ಲಾಳ್‌
(07 February 1937)

ಸಾಹಿತಿ ಎನ್. ನಾರಾಯಣ ಬಲ್ಲಾಳ್‌ ಅವರು 1937 ಫೆಬ್ರುವರಿ 7ರಂದು ಉಡುಪಿಯಲ್ಲಿ ಜನಿಸಿದರು. ಹುಟ್ಟೂರಿನ ಎಂ.ಜಿ.ಎಂ. ಕಾಲೇಜಿನಲ್ಲಿ ಓದು, ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಕಾಲೇಜ್ ಯೂನಿಯನ್ ಅಧ್ಯಕ್ಷರಾಗಿದ್ದರು. ವೃತ್ತಿ ಜೀವನದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಸ್ವಯಂ ನಿವೃತ್ತಿ ಪಡೆದಿದ್ದಾರೆ. ಇವರು ಬರೆದ ಲೇಖನ, ಕಥೆ, ಸಂದರ್ಶನಗಳು ನಾಡಿನ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.    ಉಡುಪಿಯ 'ಪ್ರಕಾಶ' ವಾರಪತ್ರಿಕೆಯ ಮಕ್ಕಳಪುಟ ಹಾಗೂ ಸುದ್ದಿ ವಿಭಾಗದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದು, ಇವರ ಕಾವ್ಯನಾಮ 'ಚಕ್ರಧಾರಿ'. ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಿಂದ ಹಲವು ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ...

READ MORE

Related Books