ಬಿಳಿಸಾಹೇಬನ ಭಾರತ

Author : ಎನ್. ಜಗದೀಶ್ ಕೊಪ್ಪ

Pages 132

₹ 120.00




Year of Publication: 2014
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113
Phone: 08394-228567 /9480728393

Synopsys

ಪತ್ರಕರ್ತ, ಬರಹಗಾರ ಎನ್‌. ಜಗದೀಶ ಕೊಪ್ಪ ಅವರು ವರ್ತಮಾನ ಜಾಲತಾಣಕ್ಕಾಗಿ ಬರೆದ ಕೃತಿ ’ಬಿಳಿಸಾಹೇಬನ ಭಾರತ’. ಬೇಟೆ ಸಾಹಿತ್ಯ ರಚಿಸುವ ಮೂಲಕ ಭಾರತೀಯ ಇಂಗ್ಲಿಷ್‌ ಸಾಹಿತ್ಯದಲ್ಲಿ ಗಮನ ಸೆಳೆದ ಜಿಮ್‌ ಕಾರ್ಬೆಟ್ ಯಾರಿಗೆ ಗೊತ್ತಿಲ್ಲ? ಜಿಮ್‌ ಕಾರ್ಬೆಟ್‌ ಕೇವಲ ಬೇಟೆಗಾರನಾಗಿರಲಿಲ್ಲ, ಆತನೊಳಗೊಬ್ಬ ಪರಿಸರ ಪ್ರೇಮಿ, ಮಾನವತಾವಾದಿ ಇದ್ದುದರಿಂದಲೇ ಅವನು ಅಪಾರ ಮನ್ನಣೆಗೆ ಪಾತ್ರವಾದ. ಅವನ ಹೆಸರಿನಲ್ಲೇ ಭಾರತದಲ್ಲಿ ರಾಷ್ಟ್ರೀಯ ಉದ್ಯಾನವೊಂದು ಇದೆ ಎಂದರೆ ಅದು ಆ ಮಹಾಶಯನ ಹಿರಿಮೆಯನ್ನು ಹೇಳುತ್ತದೆ. 

ಇನ್ನು ಕನ್ನಡದಲ್ಲಿ ಜಿಮ್‌ ಕಾರ್ಬೆಟ್ ಬರಹಗಳನ್ನು ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಹಲವರು ಅನುವಾದಿಸಿದ್ದಾರೆ. ತೇಜಸ್ವಿ ಹೇಳುವಂತೆ ಬೇಟೆ ಸಾಹಿತ್ಯ ಒಮ್ಮೆ ಮಾತ್ರ ಬರೆಯಲು ಸಾಧ್ಯವಾದ ವಿಶಿಷ್ಟ ಪ್ರಕಾರ. ಅದನ್ನು ಮತ್ತೆ ಬರೆಯಲು ಸಾಧ್ಯವಿಲ್ಲ ಎಂಬರ್ಥದಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಮಹತ್ವದ ಪ್ರಕಾರವನ್ನು ಹುಟ್ಟುಹಾಕಿದ ವಿರಳಾತಿವಿರಳರಲ್ಲಿ ಕಾರ್ಬೆಟ್‌ ಅಗ್ರಗಣ್ಯರು. 

ಕೃತಿಯನ್ನು ವಿಶ್ಲೇಷಿಸಿರುವ ಡಾ. ರಾಜೇಗೌಡ ಹೊಸಹಳ್ಳಿ ಅವರು ’ಬಡಜನತೆಯ ಉದ್ಧಾರಕ್ಕಾಗಿ ಇಡೀ ಒಂದು ಹಳ್ಳಿಯನ್ನು ಖರೀದಿಸಿ ಅದನ್ನು ಹಳ್ಳಿಗರಿಗೆ ದಾನ ಮಾಡಿದಭಾರತದ ಏಕೈಕ ಹೃದಯವಂತ (ಐರಿಷ್) ಮೂಲದ ವ್ಯಕ್ತಿಯೆಂದರೆ ಅದು ಜಿಮ್ ಕಾರ್ಬೆಟ್ ಮಾತ್ರ” (ಪು59) ತಲಾ ಎರಡರಿಂದ ಐದು ಎಕರೆ ಭೂಮಿ ಹಂಚುತ್ತಾನೆ. ಕಾಡು ಪ್ರಾಣಿಗಳ ಕಾಟಕ್ಕೆ ತಡೆಗೋಡೆಯಾಗಿಇಡೀ ಗ್ರಾಮಕ್ಕೆ ನಾಲ್ಕು ಅಡಿ ದಪ್ಪದ ಆರು ಅಡಿ ಎತ್ತರದ ಕಾಂಪೌಂಡ್ ಗೋಡೆ ನಿರ್ಮಿಸುತ್ತಾನೆ. ಅಲ್ಲಿಈಗ ಒಂದು ಮಾವಿನ ಮರ ಹೆಮ್ಮರವಾಗಿ ಅವನ ಹೆಸರು ಹೇಳುತ್ತಿದೆ. ಆಗ ಬೆಳೆಗೆ ಬೆನ್ನೆಲುಬಾಗಿನೈನಿತಾಲ್‍ನಲ್ಲಿ ಮಾರುಕಟ್ಟೆ ಸ್ಥಾಪಿಸುತ್ತಾನೆ. ಮಧ್ಯವರ್ತಿಗಳ ಕಾಟ ತಪ್ಪಿಸುತ್ತಾನೆ. ಹೀಗೆ ಅವನು ಮುಂದೆಬರುವ ಸ್ವತಂತ್ರ ಭಾರತಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಾನೆ. “ಅವನ ಬದುಕು ನಡವಳಿಕೆಎಲ್ಲವೂ ಸ್ಥಳೀಯ ಜನರಿಗೆ ಮಾದರಿಯಾಗಿದ್ದವು. ಅಷ್ಟೇ ಅಲ್ಲದೆ ಕಾರ್ಬೆಟ್‍ನ ಮಾತುಗಳನ್ನು ದೇವರಅಪ್ಪಣೆ ಎಂಬಂತೆ ಅಲ್ಲಿನ ಜನತೆ ಪಾಲಿಸುತ್ತಿದ್ದರು. (ಪು 61). ಈ ವಿಚಾರಗಳನ್ನೆಲ್ಲಾ ಕಲೆಹಾಕುತ್ತ ಕ್ಷೇತ್ರಕಾರ್ಯ ಮಾಡುತ್ತ ಹೋಗುವ ಜಗದೀಶ ಕೊಪ್ಪ ಅವರನ್ನು ಅಲ್ಲಿ ಒಬ್ಬ ಮುಸ್ಲಿಂ ಹೆಣ್ಣು ಮಗಳು ಮನೆಗೆಕರೆದು ತನ್ನ ತಾತ ಬಹದ್ದೂರ್‍ಖಾನ್ ಕಾರ್ಬೆಟ್‍ನೊಡನೆ ಮೂವತ್ತು ವರ್ಷ ಆತನ ಬಂಟನಾಗಿದ್ದ ಎಂಬವಿಚಾರ ಹೇಳಿ ಭಾರತದ ವೈಸರಾಯ್ ಹಾಗೂ ಕಾರ್ಬೆಟ್‍ನೊಡನೆ ತನ್ನ ತಾತ ನಿಂತಿರುವ ಫೋಟೋತೋರಿಸುತ್ತಾಳೆ. (ಪು 62) ಈಗ ಚೋಟಿ ಹಲ್ದವಾನಿ ಯುವಕರು ಒಗ್ಗೂಡಿ ಕಾರ್ಬೆಟ್ ಹೆಸರಿನಲ್ಲಿಎಕೋಟೂರಿಸಂ ರೆಸಾರ್ಟ್ ಮಾಡಿಕೊಂಡಿದ್ದಾರಂತೆ. ಇದು ಒಬ್ಬ ಮನುಷ್ಯ ಆ ನೆಲದಲ್ಲಿ ಬದುಕಿ ಹೋದಮಾರ್ಗ’ ಎಂದಿದ್ದಾರೆ. 

’ಬಿಳಿಸಾಹೇಬನ ಭಾರತ’ ಕುರಿತು ಈಗಾಗಲೇ ಬಂದಿರುವ ವಿಮರ್ಶೆ, ಪರಿಚಯ, ಟಿಪ್ಪಣಿಗಳು ಕೃತಿಯ ಮಹತ್ವವನ್ನು ಸಾರಿಹೇಳುತ್ತಿವೆ. 

About the Author

ಎನ್. ಜಗದೀಶ್ ಕೊಪ್ಪ

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ 1956 ರಲ್ಲಿ ರೈತ ಕುಟುಂಬದಲ್ಲಿ ಜನನ. ಬೆಂಗಳೂರು ವಿ.ವಿ.ಪುರಂ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ ಜಾಗತೀಕರಣ ಮತ್ತು ಗ್ರಾಮ ಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. 1981 ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2018 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯಟಿ.ವಿ.ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. 1995 ರಲ್ಲಿ ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ...

READ MORE

Related Books