ಬಿಸಿಲ ಬಾಗಿನ

Author : ಕಲಿಗಣನಾಥ ಗುಡದೂರು

Pages 468

₹ 360.00




Year of Publication: 2016
Published by: ಅಂಬಾರಿ ಪ್ರಕಾಶನ
Address: ನಂ.77, ಕುಮಾರವ್ಯಾಸ ರಸ್ತೆ, ಐಶ್ವರ್ಯನಗರ, ಕುವೆಂಪು ನಗರ, ಎನ್‌ ಬ್ಲಾಕ್‌, ಮೈಸೂರು
Phone: 9845890353

Synopsys

ಎರಡು ದಶಕದ ಕಥನ ’ಬಿಸಿಲ ಬಾಗಿನ’ ಕಲಿಗಣನಾಥ ಗುಡದೂರು ಅವರ ನಾಲ್ಕು ಕಥಾ ಸಂಕಲನಗಳ ಸಮಗ್ರ ಕೃತಿಯಾಗಿದೆ. ಜಾಗತೀಕರಣದ ಸಂದರ್ಭದಲ್ಲಿ ಜನರು ಎದುರುಗೊಳ್ಳುತ್ತಿರುವ ಸವಾಲುಗಳು, ಯಾಂತ್ರೀಕರಣದ ಅಟ್ಟಹಾಸ, ಕುಸಿಯುತ್ತಿರುವ ಕೌಟುಂಬಿಕ ಮೌಲ್ಯಗಳ ಚರ್ಚೆ ಈ ಕೃತಿಯಲ್ಲಿದೆ. ಮಾನವೀಯ ಮೌಲ್ಯ, ನೆಲದ ಸಂಸ್ಕೃತಿಯ ಸಂಸ್ಕಾರವನ್ನು ಉಸಿರಾಗಿಸಿಕೊಂಡಿರುವ ಲೇಖಕರ ಕತೆಗಳು ಓದುಗರನ್ನು ಚಿಂತನೆಗೆ ಹಚ್ಚುತ್ತವೆ. ಉತ್ತರ ಕರ್ನಾಟಕ ಶೈಲಿಯ ಭಾಷಾ ಬರವಣಿಗೆ ತನ್ನ ಸುತ್ತ ಮುತ್ತಲಿನ ಪರಿಸರದಲ್ಲಿ ಲೇಖಕರು ಕಂಡುಂಡ ನೋವು-ನಲಿವು, ಹೋರಾಟ, ಸಂಕಟ ಎಲ್ಲವನ್ನು ಕತೆಗಳಾಗಿ ದಾಖಲಿಸಿದ್ದಾರೆ. 

ಉಡಿಯಲ್ಲಿಯ ಉರಿ, ಮತಾಂತರ, ಮಾಮೂಲಿ ಗಾಂಧಿ, ತೂತು ಬೊಟ್ಟು ಕಥಾ ಸಂಕಲನದಲ್ಲಿನ ಹಲವು ಕಥೆಗಳು ಇಲ್ಲಿವೆ. ಲೇಖಕರ ಬರಹಗಳ ಬಗ್ಗೆ ರಹಮತ್ ತರೀಕೆರೆ ಅವರು ವಿವರಿಸುತ್ತಾ ರೂಪಕದ ಭಾಷೆಯಲ್ಲಿ ಕತೆಗಳನ್ನು ಕಟ್ಟುತ್ತಿದ್ದಾರೆ ಕಲಿ. ಅವರದು ನೇರವಾದ ಮತ್ತು ಪ್ರಾಮಾಣಿಕವಾದ ಗ್ರಾಮೀಣ ಮುಗ್ಧತೆಯ ಮನಸ್ಸು. ಬಹುಶಃ ಗಾಯಗೊಂಡಂತಿರುವ ಮನೋಸ್ಥಿತಿಯಲ್ಲಿ ಅವರು ಕತೆ ಬರೆಯುತ್ತಾರೆ ಎಂದಿದ್ದಾರೆ. ಇದು ಲೇಖಕರ ಬರಹ ಶೈಲಿ, ಭಾವನೆಗಳ ಕುರಿತಾಗಿ ವಿವರಿಸುತ್ತದೆ. 

About the Author

ಕಲಿಗಣನಾಥ ಗುಡದೂರು
(11 October 1974)

 ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಗುಡದೂರು ಗ್ರಾಮದವರಾದ ಕಲಿಗಣನಾಥ ಅವರು ವೃತ್ತಿಯಂದ ಪತ್ರಕರ್ತ. ಕಥೆ, ಕವನ, ಲೇಖನಗಳನ್ನು ಬರೆದಿದ್ದರೂ ಸಾಹಿತ್ಯಲೋಕದಲ್ಲಿ ’ಕತೆಗಾರ’ ಎಂದೇ ಚಿರಪರಿಚಿತ. ಜಾಗತೀಕರಣದ ನಂತರದ ಹೊಸ ತಲೆಮಾರಿನ ತಲ್ಲಣಗಳಿಗೆ ಸ್ಪಂದಿಸುವ ಕಲಿಗಣನಾಥ ಅವರು, ಬದಲಾದ ಗ್ರಾಮೀಣ ಆರ್ಥಿಕತೆ ಸಂಕಷ್ಟ ಹಾಗೂ ಸಾಮಾಜಿಕ ಸ್ಥಿತ್ಯಂತರಗಳನ್ನು ತಮ್ಮ ಕತೆಗಳಲ್ಲಿ ದಾಖಲಿಸುತ್ತಾರೆ. ಮತಾಂತರ, ಮಾಮೂಲಿ ಗಾಂಧಿ, ತೂತುಬೊಟ್ಟು (ಕಥಾ ಸಂಕಲನಗಳು) ಪ್ರಕಟಿತ ಕೃತಿಗಳು. ...

READ MORE

Related Books