ಬ್ಲೂ ಬುಕ್

Author : ಸವಿರಾಜ್ ಆನಂದೂರು

Pages 100

₹ 100.00
Year of Publication: 2022
Published by: ಅಮೂಲ್ಯ ಪುಸ್ತಕ
Address: ಬೆಂಗಳೂರು- 560076
Phone: 9620796770

Synopsys

ಲೇಖಕ ಸವಿರಾಜ್ ಆನಂದೂರು ಅವರ ಬರಹಗಳ ಸಂಕಲನ ʻಇಂಜಿನಿಯರ್ ವಿದ್ಯಾರ್ಥಿಯೊಬ್ಬನ ಬ್ಲೂ ಬುಕ್'. ಮೆಕ್ಯಾನಿಕಲ್ ಇಂಜಿನಿಯರಿಂಗ್ ಬ್ರಾಂಚ್‌ನ ವಿದ್ಯಾರ್ಥಿಯೊಬ್ಬನ ಬ್ಲೂ ಬುಕ್‌ನಲ್ಲಿ ಏನೆಲ್ಲಾ ಇದೆ ಅನ್ನುವುದು ಈ ಪುಸ್ತಕದ ವಸ್ತುವಾಗಿದೆ. ಇಲ್ಲಿರುವ ಎಲ್ಲಾ ಬರಹಗಳು ಪ್ರೇಮ, ಹಾಸ್ಯ, ವೈರಾಗ್ಯ ಸೇರಿದಂತೆ ನವರಸಗಳಿಂದ ಕೂಡಿರುವುದರ ಜೊತೆಗೆ ಒಂದಿಷ್ಟು ಗಂಭೀರವಾದ ಚಿಂತನಾರ್ಹ ವಿಷಯಗಳಿವೆ. ಪುಸ್ತಕದ ಬಗ್ಗೆ ಲೇಖಕರೇ ಹೇಳುವಂತೆ, ಈ ಪುಸ್ತಕದಲ್ಲಿನ ಬಹುತೇಕ ಬರಹಗಳು ಕಾಲೇಜಿನ ದಿನಗಳಲ್ಲಿ ಬರೆದವುಗಳು.

About the Author

ಸವಿರಾಜ್ ಆನಂದೂರು

ಲೇಖಕ ಸವಿರಾಜ್ ಆನಂದೂರು ಹುಟ್ಟಿದ್ದು ಆಗುಂಬೆ ಸಮೀಪದ ಆನಂದೂರಿನಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಶೃಂಗೇರಿ, ಪದವಿಯನ್ನು ಶಿವಮೊಗ್ಗದಲ್ಲಿ ಪೂರೈಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಹವ್ಯಾಸಿ ತಾಳಮದ್ದಳೆ ಅರ್ಥಧಾರಿ. ನಾಟಕಗಳನ್ನು ರಚಿಸಿ, ನಿರ್ದೇಶಿಸಿದ ಅನುಭವವಿದ್ದು ಕಾವ್ಯ ಮತ್ತು ಯಕ್ಷಗಾನ ಅವರ ಹವ್ಯಾಸಗಳು. ‘ನಕ್ಷತ್ರ ಕಡ್ಡಿ’ ಅವರ ಚೊಚ್ಚಲ ಕೃತಿ. ...

READ MORE

Related Books