ಬೊಜ್ಜುದೇಹ

Author : ವಿ ಪರಮೇಶ್ವರ

Pages 192

₹ 100.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001.
Phone: 0802216 1900

Synopsys

ಡಾ. ವಿ. ಪರಮೇಶ್ವರ ಅವರು ರಚಿಸಿದ ಕೃತಿ-ಬೊಜ್ಜುದೇಹ. ಬೊಜ್ಜು ಆರೋಗ್ಯಕ್ಕೆ ಹಾನಿಕರ. ಬೊಜ್ಜಿನಿಂದಾಗಿ ತೂಕ ಹೆಚ್ಚಾಗುವುದು ಮಾತ್ರವಲ್ಲ; ಮಧುಮೇಹ, ಹೃದಯಾಘಾತ, ಅಧಿಕ ರಕ್ತದೊತ್ತಡ ಮುಂತಾದ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಪ್ರಪಂಚದಾದ್ಯಂತ ಕಾಣಸಿಗುವ ಅತಿ ಭೀಕರ ರೋಗವಿದು. ಏಕೆಂದರೆ, ಇದರ ಅಡ್ಡ ಪರಿಣಾಮಗಳು ಜಾಸ್ತಿ. ಸುಖಜೀವನದ ಬೆನ್ನು ಹತ್ತಿ ಶರೀರಕ್ಕೆ ಶ್ರಮವಿಲ್ಲದ ಹಗುರ ಕೆಲಸ, ಸಿದ್ಧ ಆಹಾರ ಸೇವನೆ, ಐಷಾರಾಮಿ ಜೀವನಶೈಲಿ ಮುಂತಾದವು ಬೊಜ್ಜು ಶೇಖರವಾಗಲು ಕಾರಣವಾಗುತ್ತಿದೆ. ಹಿತಮಿತವಾದ ಆಹಾರ ಸೇವನೆಯಿಂದ, ಶಿಸ್ತಿನ ಜೀವನಕ್ರಮದಿಂದ ಬೊಜ್ಜನ್ನು ಹೇಗೆ ನಿವಾರಿಸಬಹುದು. ಈ ಕುರಿತು ಹತ್ದೆಂತು ಹಲವು ಸಲಹೆಗಳನ್ದುನು, ಸೂಚನೆಗಳನ್ನು ನೀಡಿರುವ ಉಪಯುಕ್ತ ಕೃತಿ ಇದು.

About the Author

ವಿ ಪರಮೇಶ್ವರ

ಲೇಖಕ ಡಾ. ವಿ ಪರಮೇಶ್ವರ ಅವರು ಹೃದಯರೋಗ ತಜ್ಞರು. ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಜನ ಸೇವೆಯಲ್ಲಿದ್ದು, ವೈದ್ಯ ಶಾಸ್ತ್ರ ಕುರಿತು ಅನೇಕ ಲೇಖನ-ಪುಸ್ತಕಗಳನ್ನೂ ಬರೆದಿದ್ದಾರೆ. 1985 ರಲ್ಲಿ ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷರಾಗಿ, 1988-89 ರಲ್ಲಿ ಅಸೋಸಿಯೇಷನ್ ಆಫ್ ಫಿನಿಷಿಯನ್ಸ್ ಆಫ್ ಇಂಡಿಯಾದ ಅಧ್ಯಕ್ಷರಾಗಿ, 1994-98 ರಲ್ಲಿ, ಇಂಡಿಯನ್ ಕಾಲೇಜ್ ಆಫ್ ಫಿನಿಷಿಯನ್ಸ್ ನ ಡೀನ್ ಆಗಿ, ಅಖಿಲ ಭಾರತ ಮಟ್ಟದಲ್ಲಿ ವೈದ್ಯಕೀಯ ಸೇವೆಯನ್ನು ಸಲ್ಲಿಸಿದ್ದಾರೆ.  1985 ರಲ್ಲಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1993 ರಲ್ಲಿ ಬಿ.ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ, ಮಾಸ್ಟರ್ ಟೀಚರ್ ಪ್ರಶಸ್ತಿ, ...

READ MORE

Reviews

(ಹೊಸತು, ಜೂನ್ 2012, ಪುಸ್ತಕದ ಪರಿಚಯ)

ಆಹಾರದಲ್ಲಿನ ಕೊಬ್ಬಿನ ಅಂಶ ಕರಗದೆ ಶರೀರದಲ್ಲಿ ಶೇಖರಗೊಂಡು ದೇಹದ ತೂಕ ಹೆಚ್ಚಿ ಗಾತ್ರ ಹೆಚ್ಚಾದಾಗ ಬೊಜ್ಜು ಎನಿಸಿಕೊಳ್ಳುತ್ತದೆ. ಇದನ್ನು ಒಂದು ವ್ಯಾಧಿಯೆಂದು ಪರಿಗಣಿಸಿ ಬೊಜ್ಜನ್ನು ಇಳಿಸಲು ಪ್ರಪಂಚದಾದ್ಯಂತ ವಿವಿಧ ಚಿಕಿತ್ಸೆಗಳ ಮೊರೆಹೋಗಲಾಗಿದೆ. ಪ್ರತಿಯೊಂದು ಕೆಲಸಕ್ಕೂ ಯಂತ್ರಗಳನ್ನವಲಂಬಿಸಿ ಶ್ರಮಜೀವನಕ್ಕೆ ವಿದಾಯ ಹೇಳಿ ಐಶಾರಾಮಿ ಜೀವನ ನಡೆಸುವ ಶ್ರೀಮಂತ ವರ್ಗದ ಜನರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಮಿತಿಮೀರಿದ ಆಹಾರ ಸೇವನೆಯೂ ಇದಕ್ಕೆ ಕಾರಣ. ಅಧಿಕ ರಕ್ತದೊತ್ತಡ, ಹೃದಯಾಘಾತ, ಮಧುಮೇಹ ಮುಂತಾದವುಗಳಿಗೆ ಬೊಜ್ಜುದೇಹ ಕಾರಣವಾಗುತ್ತದೆ. ಬೊಜ್ಜನ್ನು ನಿವಾರಿಸಲು ಯಾವ ಕ್ರಮ ಕೈಗೊಳ್ಳಬೇಕು, ಯಾವ ಆಹಾರ ಸೇವಿಸಬೇಕು ಮುಂತಾದ ಉಪಯುಕ್ತ ಮಾಹಿತಿ ಈ ಪುಸ್ತಕದಲ್ಲಿದೆ. ಆರಾಮ ಜೀವನ ತ್ಯಜಿಸಿ ದೈಹಿಕ ಶ್ರಮದ ಕೆಲಸಗಳನ್ನು ಸಾಧ್ಯವಾದಷ್ಟೂ ಹೆಚ್ಚಿಸಬೇಕಾದ ಅಗತ್ಯವನ್ನು ಒತ್ತಿಹೇಳಲಾಗಿದೆ. ತೂಕವನ್ನು ಇಳಿಸಿ ಬೊಜ್ಜನ್ನು ಕರಗಿಸಲು ತೆಗೆದುಕೊಳ್ಳಬೇಕಾದ ಕ್ರಮವನ್ನು ತಿಳಿಸಲಾಗಿದೆ. 20, 21ನೇ ಶತಮಾನದಲ್ಲಿ ಬೊಜ್ಜುದೇಹದ ವ್ಯಾಧಿಯು ಅಪಾಯಕಾರಿ ಮಟ್ಟ ತಲುಪಿ ಆತಂಕ ಸೃಷ್ಟಿಸಿದ್ದನ್ನು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿ ಎಲ್ಲ ದೇಶದವರಿಗೂ ಎಚ್ಚರಿಕೆಯನ್ನು ಘೋಷಿಸಿದೆ. ಜೋಕೆ ! ಡೆನ್ಮಾರ್ಕ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ದೇಶದ ಬೊಜ್ಜುದೇಹದ ನಾಗರಿಕರಿಗೆ ಹೊಸ ತೆರಿಗೆ ವಿಧಿಸಿ ಸರ್ಕಾರದ ಬೊಕ್ಕಸಕ್ಕೂ ಬೊಜ್ಜು ಬರಿಸಿದೆ.

Related Books