ಬೂದಿ ಗರ್ಭದ ಕೆಂಡ

Author : ನಾಗೇಂದ್ರ ಮಸೂತಿ

Pages 80

₹ 60.00




Published by: ಶ್ರೀ ರೇವಣಸಿದ್ದೇಶ್ಚರ ಪ್ರಕಾಶನ ಗುಲ್ಬರ್ಗಾ

Synopsys

ಭಾಷಾ ವಿಜ್ಞಾನಿ, ಅಧ್ಯಯನಶೀಲ ನಾಗೇಂದ್ರ ಮಸೂತಿ ಅವರು ಉತ್ತಮ ವಾಗ್ಮಿಗಳು. ಮಾನವನು ತನ್ನ ಜೀವನದುದ್ದಕ್ಕೂ ಆಸೆ, ನಿರಾಸೆ, ಹತಾಶೆ, ದುರಾಶೆ, ನೋವು ನಲಿವು, ಕಷ್ಟ ಸುಖಗಳ ಮಧ್ಯೆ ತೊಳಲಾಡುತ್ತ ಅಂತರಾತ್ಮನ ಅರಿವಿನ ಕಡೆ್ಗೆ ಲಕ್ಷ್ಯ  ಇರುವುದಿಲ್ಲ. ಮನುಷ್ಯನ ಮನುಷ್ಯನ ಚಂಚಲತೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಇವೆಲ್ಲವೂ ಇಲ್ಲಿರುವ ವಚನಗಳು ಸ್ಪಷ್ಟಪಡಿಸುತ್ತದೆ. ಸಾಮಾಜಿಕ ಪರಿಸ್ಥಿತಿ ಮತ್ತು ವರ್ತಮಾನದ ರಾಜನೀತಿ ವಿಶ್ಲೇಷಣೆಯ ವಚನಗಳನ್ನು ಕೂಡ ಈ ಕೃತಿ ಒಳಗೊಂಡಿದೆ. ದೇವರನ್ನು  ಕಾಣುವ ಬಗೆ, ಕಾಣದೆ ಇದ್ದಾಗ ಆಗುವ ನಿರಾಶೆ, ನಂತರ ಕಾಣುವನೆಂಬ ಸಂಕಲ್ಪ, ಬೆಡಗಿನ ವಚನಗಳು ಮತ್ತು ಆತ್ಮ ವಿಮರ್ಶೆಯ ವಚನಗಳನ್ನು ಕೂಡ ಒಳಗೊಂಡಿದೆ.

About the Author

ನಾಗೇಂದ್ರ ಮಸೂತಿ
(20 June 1964)

ಕಲಬುರಗಿ ನಿವಾಸಿಯಾಗಿರುವ ಡಾ. ನಾಗೇಂದ್ರ ಎಸ್. ಮಸೂತಿ ಅವರು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಲಬುರಗಿಯ ವಿ.ಜಿ. ಮಹಿಳಾ ಪದವಿ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ.  ಕಲಬುರ್ಗಿ ಕನ್ನಡ; ವರ್ಣನಾತ್ಮಕ ವ್ಯಾಕರಣ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಗುಲಬರ್ಗಾ ವಿ.ವಿ. ಪಿಎಚ್.ಡಿ. ನೀಡಿದೆ. ’ಗುರುಸಿದ್ಧ’ ಅಂಕಿತದಲ್ಲಿ ಇವರು ವಚನಗಳನ್ನು ಬರೆಯುತ್ತಾರೆ. ಕಲ್ಯಾಣರಾವ ಪಾಟೀಲ್‌ ಮತ್ತು ಶಿವಶರಣಪ್ಪ ಮೋತಕಪಲ್ಲಿ ಅವರು ಮಸೂತಿ ಅವರ ಜೀವನ- ಸಾಹಿತ್ಯ ಕುರಿತ ’ನುಡಿತೋರಣ’ ಪುಸ್ತಕವನ್ನು ಸಂಪಾದಿಸಿದ್ದಾರೆ. ...

READ MORE

Related Books