ಬೂದಿ ಮುಚ್ಚಿದ ಕೆಂಡ

Author : ಎಲ್. ಹನುಮಂತಯ್ಯ

Pages 264

₹ 225.00




Year of Publication: 2016
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 080-26617100/26617755

Synopsys

‘ಬೂದಿ ಮುಚ್ಚಿದ ಕೆಂಡ’- ದಲಿತ ಲೋಕದ ಅನಾವರಣ. ಎಲ್. ಹನುಮಂತಯ್ಯ ಅವರ ಲೇಖನಗಳ ಸಂಕಲನ. ಸ್ಪಷ್ಟತೆ ಹಾಗೂ ಪ್ರಖರತೆಗಳಿರು ಇಲ್ಲಿನ ಬಹುಪಾಲು ಲೇಖನಗಳ ಸತ್ವಯುತವಾಗಿವೆ. 'ಸಾಹಿತ್ಯ ಚಿಂತನೆ' ಭಾಗದಲ್ಲಿ ಇರುವ ಸಾಹಿತ್ಯ ಪರಿಶೀಲನಾ ಲೇಖನಗಳ ಹರಹು ಮತ್ತು ನಿಲುವುಗಳು ಮೆಚ್ಚುಗೆ ಹುಟ್ಟಿಸುತ್ತವೆ, ಇಲ್ಲಿ ಕಲಿಕಾತ್ಮಕ ಲೇಖನಗಳಿರುವಂತೆ, ಆಶಯಗಳ ಪ್ರತಿಪಾದನೆ ಮಾಡುವ ಲೇಖನಗಳೂ ಇವೆ, 'ಬೂದಿ ಮುಚ್ಚಿದ ಕೆಂಡ ಒಳ ಮೀಸಲಾತಿ', 'ದಲಿತರು ಮತ್ತು ಹಿಂದುಳಿದ ವರ್ಗ', 'ಆಧುನಿಕತೆ ಮತ್ತು ಮಾನವೀಯತೆ', 'ಹಿಂಸೆ-ಅಹಿಂಸೆಯ ನಡುವೆ' ಮುಂತಾದ 'ಸಮಾಜ-ಸಂಘರ್ಷ' ಭಾಗದಲ್ಲಿರುವ ಲೇಖನಗಳು ನಮ್ಮನ್ನು ವಾಸ್ತವಿಕ ಸತ್ಯದೆದುರು ನಿಲ್ಲಿಸಿ, ಆಲೋಚಿಸುವಂತೆ, ಖಚಿತ ನಿಲುವು ತಳೆಯುವಂತೆ ಪ್ರೇರೇಪಿಸುತ್ತವೆ.

About the Author

ಎಲ್. ಹನುಮಂತಯ್ಯ
(10 June 1955)

ರಾಜ್ಯಸಭಾ ಸದಸ್ಯರಾಗಿರುವ ಎಲ್. ಹನುಮಂತಯ್ಯ ಪ್ರಮುಖ ಕವಿಗಳಲ್ಲಿ ಒಬ್ಬರು. ಬೆಂಗಳೂರು ಜಿಲ್ಲೆ ರಾಮೇಶ್ವರ ಗ್ರಾಮದವರಾದ ಅವರು ಮೊದಲಿಗೆ ಬ್ಯಾಂಕ್ ನೌಕರಿಯಲ್ಲಿದ್ದರು. ಸೃಜನಶೀಲ ಸಾಹಿತಿ, ವಾಗ್ಮಿ ಹಾಗೂ ವಿಮರ್ಶಕ ಆಗಿರುವ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದರು. 'ಕಪ್ಪು ಕಣ್ಣಿನ ಹುಡುಗಿ', 'ಅವ್ವ (ಕವಿತಾ ಸಂಕಲನ); 'ಅಂಬೇಡ್ಕರ್ ಕವನಗಳು’ (ಸಂಪಾದನೆ) 'ದಲಿತ ಲೋಕದ ಒಳಗೆ' (ವಿಮರ್ಶೆ), ಅಂಬೇಡ್ಕರ್‌' (ನಾಟಕ) ಪ್ರಕಟಿತ ಕೃತಿಗಳು. ಅವರ ಸಮಗ್ರ ಕೃತಿಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. ಅವರು ಜನಪರ ಸಂಘಟನೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ...

READ MORE

Related Books