ಭ್ರಷ್ಟಾಚಾರದ ಸುಳಿಯಲ್ಲಿ ಭಾರತ

Author : ವೈ.ಜಿ.ಮುರಳೀಧರನ್

Pages 168

₹ 120.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು- 560001
Phone: 22203580

Synopsys

‘ಭ್ರಷ್ಟಾಚಾರದ ಸುಳಿಯಲ್ಲಿ ಭಾರತ’ ಲೇಖಕ ವೈ.ಜಿ. ಮುರಳೀಧರನ್ ಅವರ ಲೇಖನಗಳ ಸಂಕಲನ. ನಮ್ಮ ದೇಶದಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿರುವ ಭ್ರಷ್ಟಾಚಾರದ ರಕ್ತ ಬೀಜಾಸುರನಂತಿರುವ ಬ್ರಹ್ಮರಾಕ್ಷಸನ ಲಕ್ಷ ಲಕ್ಷ ಕರಾಳ ಮುಖಗಳ ಕುರಿತು ವಿವರವಾಗಿ ಬರೆದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಜನತೆ ತಮ್ಮ ತೀವ್ರ ಅಸಮಾಧಾನ, ವಿರೋಧಗಳನ್ನು ವ್ಯಕ್ತಪಡಿಸಿ ಪ್ರಬಲ ಹೋರಾಟಗಳನ್ನು ಸಂಘಟಿಸಬೇಕಾದ ಅಗತ್ಯದ ಬಗ್ಗೆ ಒತ್ತಿ ಹೇಳಿದ್ದಾರೆ. ಪ್ರತೀ ಅಧ್ಯಾಯವೂ ಬಹಳ ಮೌಲ್ಯಯುತವಾದ ಮಾಹಿತಿಗಳನ್ನೊಳಗೊಂಡಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಆಸಕ್ತರು ಓದಲೇ ಬೇಕಾದ ಕೃತಿ. 

About the Author

ವೈ.ಜಿ.ಮುರಳೀಧರನ್
(16 August 1956)

ವೈ.ಜಿ.ಮುರಳೀಧರನ್ ಅವರು [1956] ಬಿ ಕಾಂ ಪದವೀಧರರು ಮತ್ತು ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೋಮ ಪಡೆದಿದ್ದಾರೆ. ಬಿ ಎಚ್ ಇ ಎಲ್ ಕಾರ್ಖಾನೆಯಲ್ಲಿ 20 ವರ್ಷ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ನಂತರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಲ್ಲಿ 12 ವರ್ಷ ಗ್ರಾಹಕ ವ್ಯವಹಾರಗಳ ಕಚೇರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. 1993ರಿಂದ ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು ಇತ್ಯಾದಿ ಸಾಮಾಜಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಕೇಂದ್ರ ಸರಕಾರದ ವಿವಿಧ ಸಲಹಾ ಮಂಡಳಿಯ ಸದಸ್ಯರಾಗಿ ನಾಗರಿಕರನ್ನು ಪ್ರತಿನಿಧಿಸಿದ್ದಾರೆ. ರಾಜ್ಯ ಸರಕಾರದ ಆಡಳಿತ ತರಬೇತಿ ಸಂಸ್ಥೆ, ನ್ಯಾಷನಲ್ ಲಾ ಸ್ಕೂಲ್ ...

READ MORE

Reviews

(ಹೊಸತು, ಮಾರ್ಚ್ 2013, ಪುಸ್ತಕದ ಪರಿಚಯ)

ಸ್ವಾರ್ಥಕ್ಕಾಗಿ ಭ್ರಷ್ಟಾಚಾರದ ದಾರಿ ತುಳಿದು ಅದನ್ನು ಈ ಮಟ್ಟಕ್ಕೆ ಬೆಳೆಸಿದವರು ನಾವೇ ಅಲ್ಲವೇ ? ಪ್ರಾಮಾಣಿಕವಾಗಿ ಮನಸ್ಸು ಮಾಡಿದರೆ ಚಿಟಿಕೆ ಹೊಡೆಯುವಷ್ಟರಲ್ಲಿ ಇದನ್ನು ನಿರ್ನಾಮ ಮಾಡಬಹುದು. ಸದಾಚಾರದ ನಿಯಮಗಳನ್ನು ಮೀರಿ ನಡೆಯುವುದೇ ಭ್ರಷ್ಟಾಚಾರ. ಈ ಪಿಡುಗು ಇಂದು ಹಠಾತ್ ಕಾಣಿಸಿಕೊಂಡದ್ದಲ್ಲವೆಂದೂ, ಮಾನವನ ಜೊತೆಗೆ ಇದರ ಉಗಮವೂ ಆಗಿದ್ದಿರಬಹುದೆಂದು ನಾವು ಊಹಿಸಬಹುದು. ಇತ್ತೀಚಿನ ಘಟನೆಗೆ ಬಂದರೆ, ಮೊಘಲ್ ಆಡಳಿತದಲ್ಲಿ ಕೆಲಸವನ್ನು ಮೆಚ್ಚಿ ಖುಷಿಯಿಂದ ಬಹುಮಾನವಿತ್ತರೆ ಅದಕ್ಕೆ ಮೆಹರ್‌ ಬಾನಿ, ಫರ್‌ಮಾಯಿಷಿ ದಿಲ್‌ಖುಷ್ ಮುಂತಾಗಿ ಹೆಸರಿತ್ತು ಬ್ರಿಟಿಷ್ ಆಳ್ವಿಕೆಯಲ್ಲೂ ಅಚ್ಚುಕಟ್ಟಾಗಿ ಕೆಲಸ ಮಾಡಿದವನಿಗೆ ಸ್ವ-ಸಂತೋಷದಿಂದ 'ಭಕ್ಷೀಸ್' ಕೊಡುವುದು ಚಾಲ್ತಿಯಲ್ಲಿತ್ತು. ಇಲ್ಲಿ ಯಾರದೂ ಕೇಳಿಕೆ - ಒತ್ತಾಯ ಇರಲಿಲ್ಲ. ಮುಂದೆ ಇದು ಚಾಳಿಯಾಗಿ ಬೆಳೆದು 'ಭಕ್ಷಿಸಲು ಕೊಡುವುದು ಸಂಪ್ರದಾಯವಾಗಿ ನಂತರ ಕಡ್ಡಾಯವೇ ಆಗಿ ಸಂಪಾದನೆಯ ಮಾರ್ಗವಾಯ್ತು 'ಎಳೆಗರುಂ ಎತ್ತಾಗದೇ ಲೋಕದೊಳ್ ?' ಬಹುಮಾನ ಅರ್ಥ ಕಳೆದುಕೊಂಡು ಭ್ರಷ್ಟಾಚಾರದ ಪುಟ್ಟಕರು ಶಕ್ತಿಶಾಲಿಯಾಗಿ ಕೊಬ್ಬಿ, ಕೊಂಬು ಬೆಳೆಸಿ ಗುಟುರು ಹಾಕುತ್ತನಮ್ಮನ್ನೇ ಹಾಯುತ್ತಿದೆ. ಇದು ಎಲ್ಲ ದೇಶಗಳಲ್ಲೂ ಹಬ್ಬಿದೆಯಾದರೂ ಅರ್ಜುನನಿಗೆ ವಿಶ್ವರೂಪದರ್ಶನ ಭಾರತದ ನೆಲದಲ್ಲೇ ಆದ ಕಾರಣವೋ ಏನೋ – ಭ್ರಷ್ಟಾಚಾರ ನಮ್ಮ ದೇಶವನ್ನೇ ಆಯ್ದುಕೊಂಡು ಹಾವಳಿ ನಡೆಸಿ ನಮಗೆ ಅದರ ವಿರಾಟ್ ಸ್ವರೂಪ ತೋರಿಸಿದೆ. ನಾವೂ ಬೆರಗಾಗಿ ನೋಡಿ ರೋಸಿಹೋಗಿದ್ದೇವೆ. ಬನ್ನಿ; ಅರ್ಜುನನಂತೆ ಭಯಪಡುವುದನ್ನು ಬಿಟ್ಟು ಧೈರ್ಯದಿಂದ ಇದರ ಮೂಲೋತ್ಪಾಟನೆಗೆ ಹೋರಾಡೋಣ.

Related Books