ಬೃಹದ್ಯೋಗ ದರ್ಶನ

Author : ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)

Pages 330

₹ 460.00




Year of Publication: 2001
Published by: ಅನಾಥಸೇವಾಶ್ರಮ ವಿಶ್ವಸ್ತ ಸಮಿತಿ
Address: ಮಲ್ಲಾಡಿಹಳ್ಳಿ- 577531, ಹೊಳಲ್ಕೆರೆ ತಾಲ್ಲೂಕು

Synopsys

‘ಬೃಹದ್ಯೋಗ ದರ್ಶನ’ ಪಾತಂಜಲ ಮೂಲ ಯೋಗ ಶಿಕ್ಷಣ ಶಿಬಿರದ ಬೆಳ್ಳಿಹಬ್ಬದ ಸವಿನೆನಪಿಗಾಗಿ ಪ್ರಕಟಗೊಂಡ ಕೃತಿ. ಈ ಕೃತಿಯನ್ನು ರಾಘವೇಂದ್ರ ಸ್ವಾಮೀಜಿ (ತಿರುಕ) ಅವರು ಸಂಪಾದಿಸಿದ್ದಾರೆ. ಇಲ್ಲಿ ತಿರುಕ ಅವರ ಯೋಗದ ಪ್ರಾಚೀನತೆ ಮತ್ತು ಅದು ನಡೆದುಬಂದ ದಾರಿ, ಕೆ.ಜಿ. ಸುಬ್ಬರಾಯಶರ್ಮ ಅವರ ಜ್ಞಾನಯೋಗ, ಎನ್. ಎಸ್. ಚಿದಂಬರರಾವ್ ಅವರ ಕರ್ಮಯೋಗ, ಸ. ವೆಂಕಟಾಚಲಪತಿ ಅವರ ನಾರದಮುನಿ ಉಪದೇಶಿಸಿರುವ ಭಕ್ತಿಯೋಗ, ಸ್ವಾಮಿ ಜಗದಾತ್ಮಾನಂದರ ಭಕ್ತಿಮಾರ್ಗ, ಹೊ.ನಾ. ಕೃಷ್ಣಮೂರ್ತಿ ಅವರ ರಾಜಯೋಗ, ಬ್ರಹ್ಮಕುಮಾರ್ ಬಸವರಾಜ ಋಷಿ ಅವರ ಸಹಜರಾಜಯೋಗ, ತಿರುಕ ಅವರ ಹಠಯೋಗ, ಸೂರುದಾಸ್ ಜಿ ಅವರ ಸಾಂಖ್ಯಯೋಗ, ಅಜಿತ್ ಕುಮಾರ ಅವರ ಅಷ್ಟಾಂಗಯೋಗ, ಪಂ. ಸುಧಾಕರ ಚತುರ್ವೇದಿ ಅವರ ವೇದಗಳು ಮತ್ತು ಯೋಗ, ಸಿ.ಎಂ. ಭಟ್ ಅವರ ಉಪನಿಷತ್ತುಗಳ ಸೂಕ್ಷ್ಮ ಪರಿಚಯ, ಪಿ.ಎಸ್.ರೈ ಅವರ ಆಧುನಿಕ ಕಾಲದಲ್ಲಿ ಯೋಗ, ಬಾಲಗಣಪತಿ ಭಟ್ಟ ಅವರು ಹಿಂದಿಯಿಂದ ಅನುವಾದಿಸಿರುವ ಶ್ರೀ ಮದ್ಭಾಗವತದಲ್ಲಿ ಯೋಗ, ಹಾಗೂ ಗೀತೆಯಲ್ಲಿ ಯೋಗ, ಬಾಲಚಂದ್ರ ಜಯಶೆಟ್ಟಿ ಅವರು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಧ್ಯಾನಯೋಗ, ತಿರುಕ ಅವರ ಕುಂಡಲೀನಿಯೋಗ ಹಾಗೂ ಓಂಕಾರೋಪಾಸನೆ, ಕೆ.ಹೆಚ್. ಜಯರಾಂ ಎಂ.ಎಸ್.ಸಿ ಅವರು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿರುವ ವೀಣಾದಂಡ, ಸೂರುದಾಸ್ ಜಿ. ಅವರ ಜಪಯಜ್ಞ, ಎನ್.ಎಸ್. ರವೀಂದ್ರನಾಥ್ ಎಂ.ಎ.ಬಿ.ಎಲ್ ಅವರು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿರುವ ಮಂತ್ರಯೋಗ, ಬಾಲಗಣಪತಿ ಭಟ್ಟ ಅವರು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ತಂತ್ರಾಗಮದಲ್ಲಿ ಯೋಗ, ಎ.ರಾಮಸ್ವಾಮಿ ಅವರು ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾಸಿರುವ ಕ್ರಿಯಾಯೋಗಕ್ಕೆ ಪಂಚಪಾದಗಳು, ಬಾಲಗಣಪತಿ ಭಟ್ಟ ಅವರು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಬುದ್ಧಿಯೋಗ ಸೇರಿದಂತೆ ಮೂರು ಭಾಗಗಳಲ್ಲಿ ಯೋಗಕ್ಕೆ ಸಂಬಂಧಿಸಿದ 88 ಲೇಖನಗಳು ಸಂಕಲನಗೊಂಡಿವೆ.

About the Author

ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)
(18 March 1891 - 04 August 1996)

ಕೇರಳದಲ್ಲಿ ಹುಟ್ಟಿ, ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿದ್ದು, ತಿರುಕ ಎಂ ಕಾವ್ಯನಾಮದೊಂದಿಗೆ ಬೆಳೆದವರು. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಈ ಮಗುವಿಗೆ ದೇಹ ವಿಕಾರ ಹಾಗೂ ಮೆದುಳಿನ ಬೆಳವಣಿಗೆ ಸರಿಯಾಗಿರಲಿಲ್ಲ. ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ದಂಪತಿ ಬಾರಕೂರಿನಲ್ಲಿ ತಂಗಿದ್ದರು. ಆ ಹಾದಿಯಲ್ಲಿ ಉಡುಪಿಗೆ ಹೊರಟಿದ್ದ ಮಂತ್ರಾಲಯದ ಪೀಠಸ್ಥ ಸ್ವಾಮಿಗಳು ಈ ಮಗುವನ್ನು ಕಂಡು ಕೀರ್ತಿವಂತನಾಗುವುದಾಗಿ ಹರಸುತ್ತಾರೆ.  ತಂದೆ ಈ ಮಗುವನ್ನು ಸಾಕಲಾಗದೆ ಅತಿಥೇಯರಾಗಿದ್ದ ನರಸಿಂಹಯ್ಯ – ಪುತಲೀ ಬಾಯಿ ಅವರಿಗೆ ದತ್ಯತು ಕೊಟ್ಟು ಯಾತ್ರೆ ಹೊರಡುತ್ತಾರೆ. ಈ ಮಗು ಮುಂದೆ ರಾಘವೇಂದ್ರ ಎಂದು ನಾಮಕರಣವಾಗುತ್ತದೆ. ಕುಂದಾಪುರದ ಶಾಲೆಗೆ. ...

READ MORE

Related Books