ಬುದ್ಧನ ಕಿವಿ

Author : ದಯಾನಂದ

Pages 146

₹ 186.00

Buy Now


Year of Publication: 2022
Published by: ಅಲೆ ಕ್ರಿಯೇಟಿವ್ಸ್
Address: ನಂ. 28, ಗ್ರೌಂಡ್ ಫ್ಲೋರ್, 8ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಗಣೇಶ ಬ್ಲಾಕ್, ನಂದಿನಿ ಲೇಔಟ್, ಬೆಂಗಳೂರು - 560 096.
Phone: 9945065060

Synopsys

'ಬುದ್ಧನ ಕಿವಿ' ದಯಾನಂದ ಅವರ ಎರಡನೇ ಕಥಾ ಸಂಕಲನ. ಈ ಸಂಕಲನದ ಕತೆಗಳು ಸಮಕಾಲೀನ ವಾಸ್ತವ ಬದುಕಿನ ತಲ್ಲಣಗಳನ್ನು ಕತೆ ಎಂಬ ಆವರಣದ ಮೂಲಕ ಕಟ್ಟಿಕೊಡಲು ಪ್ರಯತ್ನಿಸುತ್ತವೆ. ಈ ಸಂಕಲನದ ಎದ್ದುಕಾಣುವ ಅಂಶವೆಂದರೆ ನುರಿತ ಕಥೆಗಾರನೊಬ್ಬ ನಿಭಾಯಿಸಬಹುದಾದ ಎಲ್ಲ ರೀತಿಯ ವಸ್ತುಗಳನ್ನೂ ದಯಾನಂದರು ಪ್ರಯೋಗಕ್ಕೆ ಒಡ್ಡಿರುವುದು. ವಸ್ತು ವೈವಿಧ್ಯತೆಯನ್ನು ನಿಭಾಯಿಸುವಲ್ಲಿ ಅವರು ಕೆಲವೆಡೆ ಕಥನ-ಕೃಪೆಯಿಂದ ಯಶಸ್ವಿಯೂ ಆಗಿದ್ದಾರೆ.

ಎರಡು ವಿರುದ್ಧ ಶಕ್ತಿ ಅಥವ ವಿಚಾರಗಳ ತಿಕ್ಕಾಟವನ್ನು ಕೂಡ ಈ ಕತೆಗಳಲ್ಲಿ ಕಾಣಬಹುದು. ಈ ಸಂಘರ್ಷವು ಸಮಕಾಲೀನವಾಗಿದ್ದಾಗ ಅವನ್ನು ಜತನದಿಂದ ನಿಭಾಯಿಸುವುದು ನಿಜಕ್ಕೂ ಸವಾಲಿನ ಕಸುಬು. ಅದನ್ನು ದಯಾನಂದ 'ಸರ್ವೈವಲ್‌ ಬೆನಿಫಿಟ್‌' ಕತೆಯಲ್ಲಿ ವಿಡಂಬನಾತ್ಮಕ ರೂಪಕದ ಮೂಲಕ, 'ತ್ರೀ ಪಾಯಿಂಟ್‌ ಫೈವ್‌' ಮತ್ತು 'ಬುದ್ಧನ ಕಿವಿ', 'ಬೈಬಲ್‌ ಬಂಪ್‌' ಥರದ ಕತೆಗಳಲ್ಲಿ ಚಾಕಚಕ್ಯತೆಯ ನಿರೂಪಣೆಯ ಮೂಲಕ ಬಹಳ ಸಹಜವಾಗಿ ಸಾಧಿಸಿರುವುದು ಮೆಚ್ಚುಗೆಯ ಅಂಶವಾಗಿದೆ.


'ತ್ರೀ ಪಾಯಿಂಟ್ ಫೈವ್' ಕತೆಯ ಸುನೀತಾ ಆಧುನಿಕ ವಿದ್ಯಾವಂತ ಮಹಿಳೆ. ಮನೆಗೆದ್ದು ಮಾರು ಗೆಲ್ಲುವ ಛಲವಂತಳು. ಗಂಡನನ್ನು ಗೆಲ್ಲಬೇಕು, ಪಿಎಚ್‌ಡಿಯ ಗೈಡ್‌ನನ್ನು ಗೆಲ್ಲಬೇಕು, ಕಂಪೆನಿಯ ಸಿಇಒನನ್ನು ಗೆಲ್ಲಬೇಕು. ಗೆಲ್ಲಲು ವಿದ್ಯಾಬಲ ಬೇಕು ಮತ್ತು ಆತ್ಮಬಲ ಬೇಕು. ಬದುಕಿನ ಉದ್ದಕ್ಕೂ ಲಿಂಗತಾರತಮ್ಯದ ವಿರುದ್ಧ ಹೋರಾಡುತ್ತಾ ದಣಿದು ಗೆಲ್ಲುವ ಸಾಮರ್ಥ್ಯವಿದೆ ಸುನೀತಾಳಲ್ಲಿ. ಸುನೀತಾಳ ಪಕ್ಕದಲ್ಲಿ 'ಮಡ್ಳಕ್ಕಿ' ಕತೆಯ ಜಬೀನಕ್ಕನನ್ನಿಟ್ಟು ನೋಡಬೇಕೆನಿಸುತ್ತದೆ. ಜಬೀನಕ್ಕ ಬಡವಳು, ಅಲ್ಪಸಂಖ್ಯಾತಳು, ಸರ್ಕಾರದ ಸೌಲತ್ತನ್ನು ಪಡೆಯಲು ಅರ್ಹತೆ ಉಳ್ಳವಳು. ಹಸಿರು ಕಾರ್ಡ್‌ ದೊರೆತರೆ ಹೊಟ್ಟೆಯ ಪಾಡು ನೀಗುತ್ತದೆ. ಸರ್ಕಾರದ ನೌಕರಸ್ಥ ವ್ಯವಸ್ಥೆಯಲ್ಲಿ ಲಂಚ ನೀಡುತ್ತಲೇ ಇದ್ದರೂ ಜಬೀನಕ್ಕನಿಗೆ ಸರಳವಾಗಿ, ನ್ಯಾಯಯುತವಾಗಿ ಹಸಿರು ಕಾರ್ಡ್‌ ಸಿಗಬೇಕು, ಪ್ರತಿರೋಧ ಒಡ್ಡುವ ಸಾಮರ್ಥ್ಯ ಜಬೀನಕ್ಕನಲ್ಲಿಲ್ಲ. ಜಾತಿ, ಬಡತನ ವ್ಯಕ್ತಿಯನ್ನು ಅಸಹಾಯಕನನ್ನಾಗಿ ಮಾಡುತ್ತದೆ.

ಎಂಬತ್ತರ ದಶಕದಲ್ಲಿ ವಿಜೃಂಭಿಸಿದ ಬಂಡಾಯ- ಪ್ರತಿಭಟನಾ ಕತೆಗಳು ಹಳ್ಳಿ ಕೇಂದ್ರಕ್ಕೆ ಸೀಮಿತವಾಗಿ, ಗೌಡ-ಶಾನುಭೋಗರ ಎದುರು ದಲಿತನ ಸಿಟ್ಟು ತೋರಿಸುವ ಕತೆಗಳು ರಾಶಿ ಬಂದಿವೆ. ಈ ಪರಿ ಬದಲಾದ ಸಮಾಜದಲ್ಲಿ ಅದಕ್ಕನುಗುಣವಾಗಿ ಮುಂದುವರಿಯಬೇಕಾದದ್ದಕ್ಕೆ ‘ತ್ರೀ ಪಾಯಿಂಟ್ ಫೈವ್’ ಅಂತಹ ಕತೆಗಳ ಜರೂರಿತ್ತು. ಈ ಬಗೆಯ ಮಾದರಿ ಕತೆಗಳು ಹೊಸತಲೆಮಾರಿನವರಲ್ಲಿ ಮುಂದುವರಿದಿವೆ. ಬಹುರಾಷ್ಟ್ರೀಯ ಕಂಪೆನಿಗಳ ಆಡಳಿತ ವ್ಯವಸ್ಥೆಯನ್ನು ವಿರೋಧಿಸುವ ಕತೆಗಳು ವಿರಳವಾಗಿ ಕಂಡುಬರುತ್ತವೆ.

About the Author

ದಯಾನಂದ
(14 April 1988)

ಹುಟ್ಟಿದ್ದು 1988ರ ಅಂಬೇಡ್ಕರ್ ಜಯಂತಿಯಂದು ನಾಗಮಂಗಲ ತಾಲ್ಲೂಕಿನ ಬೆಳ್ಳೂರು, ಓದಿ ಬೆಳೆದಿದ್ದು ಬೆಂಗಳೂರಿನಲ್ಲಿ. ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ‘ಸಮಯ ಟಿವಿ’, ‘ಪ್ರಜಾವಾಣಿ’ ಮತ್ತು ‘ಸಮಾಚಾರ.ಕಾಂ’ ಸುದ್ದಿಸಂಸ್ಥೆಗಳಲ್ಲಿ ಒಂದು ದಶಕದ ಪತ್ರಿಕೋದ್ಯಮದ ಅನುಭವ. ಸದ್ಯ ಬೆಂಗಳೂರಿನಲ್ಲಿ ಮಾಧ್ಯಮ ಅಧ್ಯಾಪಕ. ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹಧನ ಪಡೆದು 2005ರಲ್ಲಿ ಪ್ರಕಟಗೊಂಡ ನಾಟಕ ‘ಬಾಳಪೂರ್ಣ’. ಛಂದ ಪುಸ್ತಕ ಬಹುಮಾನ ಪಡೆದು 2017ರಲ್ಲಿ ಪ್ರಕಟಗೊಂಡ ಕಥಾ ಸಂಕಲನ ‘ದೇವರು ಕಚ್ಚಿದ ಸೇಬು’. ‘ಬುದ್ಧನ ಕಿವಿ’ ಇವರ ಎರಡನೇ ಕಥಾ ಸಂಕಲನ. ಇವರ ಕತೆಗಳಿಗೆ ಬಸವರಾಜ ಕಟ್ಟೀಮನಿ ...

READ MORE

Reviews

https://avadhimag.in/%e0%b2%95%e0%b2%a4%e0%b3%86-coffee-house-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%ac%e0%b3%81%e0%b2%a6%e0%b3%8d%e0%b2%a7%e0%b2%a8-%e0%b2%95%e0%b2%b5%e0%b2%bf-%e0%b2%ab%e0%b3%8b/

https://www.eedina.com/opinion/du-saraswati-opinion-about-dayanand-authors-new-book-buddas-ear-33519.html

www.alecreatives.com/books


https://beetlebookshop.com/products/%E0%B2%AC%E0%B3%81%E0%B2%A6%E0%B3%8D%E0%B2%A7%E0%B2%A8-%E0%B2%95%E0%B2%BF%E0%B2%B5%E0%B2%BF-buddana-kivi?utm_medium=product-links&utm_content=android

Related Books