ಕವಿ ಹೆಚ್.ಎಸ್. ವೆಂಕಟೇಶಮೂರ್ತಿ ಅವರ ಬುದ್ಧಚರಣ ಕಾವ್ಯ ಕುರಿತ ಲೇಖನಗಳ ಸಂಪುಟ ಇದು. ಹಿರಿಯ ವಿದ್ವಾಂಸರಾದ ಮಲ್ಲೇಪುರಂ ಜಿ ವೆಂಕಟೇಶ ಅವರು ಇದರ ಪ್ರಧಾನ ಸಂಪಾದಕರಾಗಿದ್ದು, ಮಾಲಿನಿ ಗುರುಪ್ರಸನ್ನ, ಸಿಂಧು ರಾವ್ ಟಿ ಸಂಪಾದಕರಾಗಿದ್ದಾರೆ. ವೆಂಕಟೇಶಮೂರ್ತಿ ಅವರ ಬುದ್ಧ ಚರಣ ಕಾವ್ಯದ ಕುರಿತು ಬೆನ್ನುಡಿಯಲ್ಲಿ ಬಿ.ಎ.ವಿವೇಕ ರೈ ಅವರು ಬರೆಯುತ್ತಾ, ಬುದ್ಧನನ್ನು ಪೂರ್ಣವಾಗಿ ದರ್ಶಿಸಲು ಸಾಧ್ಯವಾಯಿತು ಎಂದಿದ್ದಾರೆ. ಇಲ್ಲಿ ನಾವು ಓದುಗರಾಗಿ ಕೇವಲ ಕಾವ್ಯದ ಹೊರಗೆ ಉಳಿಯುವುದಿಲ್ಲ. ನಾವೆಲ್ಲ ಶ್ರವಣಭಿಕ್ಕುಗಳಾಗಿ ಬಿಡುತ್ತೇವೆ. ಬುದ್ಧಚರಣವು ಬುದ್ಧಮೀಮಾಂಸೆಯನ್ನು ಹೃದ್ಗತ ಮಾಡಿಸಿದ ಮಹಾಕಾವ್ಯ ಎಂದು ವಿವೇಕ ರೈ ಅಭಿಪ್ರಾಯಪಟ್ಟಿದ್ದಾರೆ. ಕವಿ ವೆಂಕಟೇಶಮೂರ್ತಿಯವರ ನಿಡುಗಾಲದ ಕಾವ್ಯ ವಿಲಾಸವು ಒಂದು ಅಖಂಡ ತತ್ಪರ ಉಪಾಸನೆಯೇ ಆಗಿದೆ ಎಂದು ಕವಿ ಜಯಂತ ಕಾಯ್ಕಿಣಿ ಹೇಳಿದ್ದಾರೆ
©2023 Book Brahma Private Limited.