ಬುದ್ಧಿಜೀವಿಗಳ ಮೂಢನಂಬಿಕೆಗಳು

Author : ರಾಜಾರಾಮ ಹೆಗಡೆ

Pages 210

₹ 165.00




Year of Publication: 2019
Published by: ವಸಂತ ಪ್ರಕಾಶನ
Address: # 360, 10ನೇ ಮುಖ್ಯ, ಬಿ-ಮುಖ್ಯರಸ್ತೆ, ಕಾಸ್ಮೊ ಪಾಲಿಟಿನ್ ಕ್ಲಬ್ ಎದುರು, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011
Phone: 08022443996

Synopsys

ಹಿರಿಯ ಲೇಖಕ ಎಸ್.ಎನ್. ಬಾಲಗಂಗಾಧರ ಅವರು ಇಂಗ್ಲಿಷಿನಲ್ಲಿ ಬರೆದ ವೈಚಾರಿಕ ಲೇಖನಗಳ ಕೃತಿಯನ್ನು ಲೇಖಕ ಡಾ. ರಾಜಾರಾಮ ಹೆಗಡೆ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಬುದ್ಧಜೀವಿಗಳ ಮೂಢನಂಬಿಕೆಗಳು. ವಸಾಹತುಪ್ರಜ್ಞೆಯ ವಿಶ್ವರೂಪದ ಭಾಗ-2ರ ಕೃತಿ ಇದು. ಬ್ರಿಟಿಷರು ಬುದ್ಧಿಜೀವಿಗಳು ಎಂಬ ಭ್ರಮೆಯಲ್ಲಿರುವ ಬಹುತೇಕ ಭಾರತೀಯರಿಗೆ ತಮ್ಮ ಮೂಢನಂಬಿಕೆಗಳ ಅರಿವೂ ಇಲ್ಲ. ಬ್ರಿಟಿಷರ ನಂಬಿಕೆಗಳು ಸಹ ಭ್ರಮಾಧೀನ-ಮೌಢ್ಯ ಎಂದೂ ತಿಳಿದಿಲ್ಲ. ವಾಸ್ತವವಾಗಿ ಇಂತಹ ಸ್ಥಿತಿಯಲ್ಲಿರುವ ನಮಗೆ ಈ ಕೃತಿಯು ನೈಜವಾಗಿ ಯಾರು ಮೂಢನಂಬಿಕೆಗಳ ವಾರಸುದಾರರು, ಯಾರು ಪ್ರಸಾರಕ-ಪ್ರಚಾರಕರು ಎಂಬ ವಂಚನೆಯನ್ನು ಬಯಲು ಮಾಡುತ್ತದೆ. ಬ್ರಿಟಿಷರ ಪ್ರಗತಿಪರರು ಎಂದೇ ನಂಬಿದ ಕೆಲವು ಬುದ್ಧಿಜೀವಿಗಳು, ಪಾಶ್ಚಾತ್ಯ ಸಂಸ್ಕೃತಿಯನ್ನುಉತ್ತಮ ಎಂದೂ, ಭಾರತೀಯ ಆಚರಣೆಗಳು ಮೌಢ್ಯ ಎಂಬಂತೆ ವ್ಯಾಪಕ ಪ್ರಚಾರದ ಸರಣಿಗಳನ್ನೇ ಹರಡುತ್ತಿದ್ದಾರೆ. ಇಂತಹ ವಿದ್ಯಮಾನಗಳು ನಿಲ್ಲಬೇಕು ಎಂಬುದು ಕೃತಿಯ ಆಶಯ. ‘ನಮ್ಮದಲ್ಲದ ಜಗತ್ತು, ಅಗೋಚರ ವ್ಯವಸ್ಥೆಯ ಆವಾಂತರಗಳು ಹಾಗೂ ನಾರ್ಮೇಟಿವ್ ಚೌಕಟ್ಟಿಗೆ ನಿಲುಕದ ಜಗತ್ತು ಹೀಗೆ ಮೂರು ವಿಭಾಗಗಳಲ್ಲಿ ವಿಷಯದ ಮಂಡನೆ ಇದೆ. ಬುದ್ಧಿಜೀವಿಗಳ ಮೂಢನಂಬಿಕೆಯನ್ನು ಹೇಳುವಾಗ ಮತ್ತು ಭಾರತೀಯ ಸಂಸ್ಕೃತಿಯು ಮೂಢನಂಬಿಕೆಗಳನ್ನು ಒಳಗೊಂಡಿದೆ ಎಂದು ಬ್ರಿಟಿಷರು ಹೇಳುವಾಗಿನ ಎಲ್ಲ ಸಂದರ್ಭಗಳ್ಲೂ ಸಂಶೋಧನಾತ್ಮಕ ಆಧಾರಗಳನ್ನು ನೀಡಲಾಗಿದೆ. ಸತ್ಯವು ಪುನರ್ ಪರಿಶೀಲನೆಗೆ ಒಳಗಾಗಬೇಕು. ಎಂಬುದು ಕೃತಿಯ ಆಶಯವಾಗಿದೆ.

About the Author

ರಾಜಾರಾಮ ಹೆಗಡೆ

ಡಾ. ರಾಜಾರಾಮ ಹೆಗಡೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಐನಕೈನವರು. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹೊನ್ನೆಬಾಗ ಎಂಬ ಹಳ್ಳಿಯಲ್ಲಿ ವಾಸವಾಗಿದ್ದಾರೆ.  ಪ್ರಾಕ್ತನಶಾಸ್ತ್ರ ಹಾಗೂ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯನ್ನು ವಿಶೇಷ ಅಧ್ಯಯನವನ್ನಾಗಿ ಆಯ್ಕೆಮಾಡಿಕೊಂಡು ತಮ್ಮ ಸ್ನಾತಕೋತ್ತರ ಪದವಿಯನ್ನು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಪಡೆದಿರುತ್ತಾರೆ. 1979ರಲ್ಲಿ ‘ಶುಂಗ ಕಾಲದ ಕಲೆ : ಸಾಂಸ್ಕರತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟೊರೇಟ್ ಪದವಿಯನ್ನು ಪಡೆದರು. ಹಂಪಿ, ಇನಾಂಗಾವ್ ಹಾಗೂ ಸನ್ನತಿ ನೆಲೆಗಳ ಉತ್ಖನನದಲ್ಲಿ ಭಾಗವಹಿಸಿದ್ದಾರೆ. 1988ರಿಂದ 2019ರವರೆಗೆ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ...

READ MORE

Related Books