ಬುದ್ಧಿಜೀವಿ ಬಿಕ್ಕಟ್ಟುಗಳು

Author : ಕೆ.ವಿ. ನಾರಾಯಣ

Pages 140

₹ 100.00




Published by: ಋತುಮಾನ ಟ್ರಸ್ಟ್
Address: ಎಫ್-3, ಎ ಬ್ಲಾಕ್, ಶಾಂತಿನಿಕೇತನ ಅಪಾರ್ಟ್ಮೆಂಟ್, ಶಾಂತಿನಿಕೇತನ ಬಡಾವಣೆ, ಅರೆಕೆರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು- 560076.
Phone: 9480009997

Synopsys

ಲೇಖಕ ಕೆ. ವಿ. ನಾರಾಯಣ ಅವರ ಅನುವಾದ ಕೃತಿ ʻಬುದ್ದಿಜೀವಿ ಬಿಕ್ಕಟ್ಟುಗಳುʼ. ಕೃತಿಯ ಮೂಲ ಲೇಖಕ ಜೀನ್ ಪಾಲ್ ಸಾರ್ತೃ ಅವರ ‘ಎ ಪ್ಲೀ ಫಾರ್‌ ಇಂಟಲೆಕ್ಚುವಲ್ʼ‌ ಎಂಬ ಬರಹವು , ಕನ್ನಡಕ್ಕೆ ನಿರೂಪಣೆಮಾಡಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ, “ಎಲ್ಲ ಬುದ್ದಿಜೀವಿಗಳಲ್ಲೂ ಕೂಡ ಒಂದು ಸಾಮಾನ್ಯ ನೆಲೆಯನ್ನು ಗುರುತಿಸಬಹುದು: ಬುದ್ದಿಜೀವಿಗಳು ತಮ್ಮದಲ್ಲದ ಕಾರ್ಯಕ್ಷೇತ್ರದಲ್ಲಿ ತಲೆ ತೂರಿಸುವವರು. ಅಲ್ಲದೆ ತಾವು ಯಾವಾಗಲೂ ಸ್ಥಾಪಿತ ಸತ್ಯಗಳನ್ನು ಪ್ರಶ್ನಿಸುತ್ತೇವೆಂದು ಹೇಳುವವರು ಮತ್ತು ಈ ಸ್ಥಾಪಿತ ಸತ್ಯಗಳಿಂದ ಪ್ರೇರಿತವಾದ ವರ್ತನೆಗಳನ್ನು ಕೂಡ ಪ್ರಶ್ನಿಸುವವರು. ಹೀಗೆ ಮಾಡಲು ಅವರು ಮಾನವ ಜನಾಂಗ ಮತ್ತು ಸಮಾಜಗಳಿಗೆ ಸಂಬಂಧಿಸಿದಂತೆ ಒಂದು ಸಾರ್ವತ್ರಿಕವಾಗಿ ಸಮ್ಮತವಾಗಿರುವ ನೆಲೆಯೊಂದು ಇದೆಯೆಂದು ನಂಬಿ, ಅದನ್ನು ಆಧರಿಸಿ, ತಮ್ಮ ಈ ಪ್ರಶ್ನಿಸುವ ಪ್ರವೃತ್ತಿಯನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಅವರ ಈ ನಂಬಿಕೆಗೆ ಈಗ ಯಾವ ಬುನಾದಿಯೂ ಇಲ್ಲ. ಅವರು ಪ್ರತಿಪಾದಿಸುತ್ತಿರುವ ಆ ಸಾರ್ವತ್ರಿಕವಾದ ನೆಲೆಯು ಒಂದು ಅಮೂರ್ತವಾದ ಮತ್ತು ಹುಸಿಯಾದ ನಂಬಿಕೆ. ಏಕೆಂದರೆ ಕೈಗಾರಿಕೀಕರಣಗೊಂಡ ನಾಡುಗಳು ಅತ್ಯಂತ ವೈವಿಧ್ಯಮಯವಾದ ಜೀವನ ಕ್ರಮಗಳನ್ನು, ಸಾಮಾಜಿಕ ಕಾರ್ಯವಿಧಾನಗಳನ್ನು ಮತ್ತು ಅತ್ಯಂತ ನಿರ್ದಿಷ್ಟ ಸಮಸ್ಯೆಗಳನ್ನು ಹುಟ್ಟುಹಾಕಿವೆ. ಇದರಿಂದಾಗಿ ಜಾಗತಿಕವಾಗಿ ಅನ್ವಯವಾಗುವ ನೆಲೆಗಳು ಅಮೂರ್ತವಾಗುತ್ತಿವೆ” ಎಂದು ಹೇಳಿದ್ದಾರೆ.

About the Author

ಕೆ.ವಿ. ನಾರಾಯಣ
(20 October 1948)

ಕಂಪಲಾಪುರ ವೀರಣ್ಣ ನಾರಾಯಣ ಅವರು ಜನಿಸಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಕಂಪಲಾಪುರ. ಅಮ್ಮ ಕೆಂಚಮ್ಮ ಮತ್ತು ಅಪ್ಪ ವೀರಣ್ಣ. ಮೊದಲ ಹಂತದ ಓದು ಪುತ್ತೂರು ಮತ್ತು ತಾಲ್ಲೂಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಎಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ಎ.ಎಸ್ ಮತ್ತೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನದ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿ.ಎಡ್. ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು ಬರವಣಿಗೆಯಲ್ಲೂ ...

READ MORE

Related Books