ಬರ್ಟ್ರಂಡ್ ರಸೆಲ್

Author : ಪಿ. ವಿ. ನಾರಾಯಣ

Pages 48

₹ 50.00




Year of Publication: 2000
Published by: ಸಪ್ನ ಬುಕ್ ಹೌಸ್
Address: ತುಂಗಾ ಕಾಂಪ್ಲೆಕ್ಸ್, ಗಾಂಧಿನಗರ, ಬೆಂಗಳೂರು- 560009
Phone: 22660088

Synopsys

ಮೂವತ್ತೇಳು ವರ್ಷದ ಪ್ರತಿಭಾವಂತ, ಕೇಂಬ್ರಿಜ್ ವಿಶ್ವವಿದ್ಯಾಲಯದ ಅಧ್ಯಾಪಕ. ಅವನ ದೇಶ ಯುದ್ಧದಲ್ಲಿ ತೊಡಗಿತ್ತು, ಯುದ್ಧ ಮಾಡುವುದು ಮೂರ್ಖತನವೆಂದು ಲೇಖನ ಬರೆದ. ಅವನು ದೇಶದ್ರೋಹಿ ಎಂದು ಕೂಗೆದ್ದಿತು. ಜನ ಅವನ ಮೇಲೆ ಕಲ್ಲೆಸೆದರು. ಅವನು ಕೆಲಸವನ್ನು ಕಳೆದುಕೊಳ್ಳಬೇಕಾಯಿತು. ನಾಲ್ಕು ವರ್ಷದ ನಂತರ ರಾಜಕೀಯ ಪಕ್ಷವೊಂದು ಅವನನ್ನು ಚುನಾವಣೆ ಅಭ್ಯರ್ಥಿಯನ್ನಾಗಿ ಆರಿಸಿತು, ಆದರೆ ಪಕ್ಷದ ಮುಖಂಡರು ಪ್ರಶ್ನಿಸಿದಾಗ ತಾನು ಅಗ್ನಾಸ್ಟಿಕ್ (ದೇವರು ಇದ್ದಾನೆ ಅಥವಾ ಇಲ್ಲ ಎಂದು ಖಚಿತವಾಗಿ ಹೇಳಲಾರೆ) ಎಂದ. ಕಡೆಯ ಪಕ್ಷ ಈಗೊಮ್ಮೆ ಆಗೊಮ್ಮೆ ಚರ್ಚೆಗೆ ಹೋಗಲು ಒಪ್ಪುತ್ತೀರಾ ಎಂದು ಕೇಳಿದರು, ಸಾಧ್ಯವಿಲ್ಲ ಎಂದ. ಪಕ್ಷ ಆತನನ್ನು ಕೈಬಿಟ್ಟಿತು. ಎರಡನೆ ಮಹಾಯುದ್ಧದಲ್ಲಿ ಅಮೆರಿಕ ಜಪಾನಿನ ನಾಗಸಾಕಿ ಮತ್ತು ಹಿರೋಷಿಮಾಗಳ ಮೇಲೆ ಪರಮಾಣು ಬಾಂಬ್ ಹಾಕಿ ವಿನಾಶ ಮಾಡಿದ ಮೇಲೆ ಜಗತ್ತಿನ ಮೇಲೆಲ್ಲಾ ಅಣ್ವಸ್ತ್ರಗಳ ಕಪ್ಪುಮೋಡ ಕವಿಯಿತು. ಅಣ್ವಸ್ತ್ರ ವಿರೋಧ ಪ್ರಚಾರವನ್ನು 89 ವರ್ಷದ ವೃದ್ಧ ಕೈಗೊಂಡ. ಅವನನ್ನು ಸರ್ಕಾರವು ಬಂಧಿಸುವ ಬೆದರಿಕೆ ಇತ್ತು ಆದರೂ ಲಂಡನಿನಲ್ಲಿ ಸಹಸ್ರಾರು ಜನರ ಮೆರವಣಿಗೆಯ ನಾಯಕತ್ವ ವಹಿಸಿದ, ಸೆರೆಮನೆಗೆ ಹೋದ. ಇಂಥ ಧೀರ ಧೀಮಂತ ಬರ್ಟ್ರಂಡ್ ರಸೆಲ್ ಅವರ ಬದುಕು ಬರೆಹಗಳ ಮೇಲೆ ಬೆಳಕು ಚೆಲ್ಲುವ ಕೃತಿ ಇದು.

About the Author

ಪಿ. ವಿ. ನಾರಾಯಣ
(18 December 1942)

ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು.  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ  ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...

READ MORE

Related Books