ಬಿ.ವಿ. ಕಾರಂತ ಮಕ್ಕಳ ನಾಟಕ

Author : ಬಿ.ವಿ.ಕಾರಂತ

₹ 140.00




Year of Publication: 2022
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 57741 ಅಕ್ಷರ ಪ್ರಕಾಶನ Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401

Synopsys

ಲೇಖಕ ಬಿ.ವಿ. ಕಾರಂತ ಅವರ ನಾಟಕ ಕೃತಿ ʻಮಕ್ಕಳ ನಾಟಕಗಳುʼ. ಬಿ.ವಿ. ಕಾರಂತರು ಬಹಳ ಹಿಂದೆಯೇ ಬರೆದು ಪ್ರಯೋಗಿಸಿದ್ದ, ಮತ್ತು ಪ್ರದರ್ಶನಗಳಲ್ಲಿ ಪ್ರಸಿದ್ಧವೂ ಆಗಿದ್ದ ಮೂರು ನಾಟಕಗಳು ಇಲ್ಲಿ ಒಟ್ಟಾಗಿ ಪ್ರಕಟವಾಗಿದೆ. ಮೊದಲನೆಯ ನಾಟಕ ʻಪಂಜರಶಾಲೆʼಯು ರವೀಂದ್ರನಾಥ ಟಾಗೋರ್ ಅವರ ಕಥೆ ಆಧರಿಸಿದ್ದು. ಎರಡನೆಯ ನಾಟಕ ʻಹೆಡ್ಡಾಯಣವುʼ ಪಂಜೆ ಮಂಗೇಶರಾಯರ ಕಥೆಯನ್ನು ನೆನಪಿಸಿಕೊಂಡು ಬರೆದದ್ದು. ಮೂರನೆಯ ನಾಟಕ ʻನೀಲಿಕುದುರೆʼಯು ಪೋರ್ಚುಗೀಸ್ ಮೂಲವೊಂದರಿಂದ ಪ್ರೇರಿತವಾದದ್ದು. ಬಿ.ವಿ. ಕಾರಂತರ ರಂಗಮಾರ್ಗವನ್ನು ಪ್ರತಿನಿಧಿಸುವ ಈ ಸಂಕಲನವು ಪ್ರಯೋಗಕಾರರಿಗೂ ಸಂಶೋಧಕರಿಗೂ ಉಪಯುಕ್ತವಾಗಲಿದೆ.

About the Author

ಬಿ.ವಿ.ಕಾರಂತ
(19 September 1929 - 01 September 2002)

ಬಿ.ವಿ.ಕಾರಂತ ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಅಚ್ಚಳಿಯದ ಹೆಸರು. ಅವರ ಪೂರ್ಣ ಹೆಸರು ಬಾಬುಕೋಡಿ ವೆಂಕಟರಮಣ ಕಾರಂತ್. ಹುಟ್ಟಿದ್ದು ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಮಂಚಿ ಎಂಬ ಹಳ್ಳಿಯಲ್ಲಿ. ಬಾಬುಕೋಡಿ ನಾರಾಣಪ್ಪಯ್ಯ-ಲಕ್ಷ್ಮಮ್ಮ ದಂಪತಿಗಳ ಆರು ಮಕ್ಕಳಲ್ಲಿ ಹಿರಿಯ ಮಗನಾದ ವೆಂಕಟರಮಣನನ್ನು (ಬಿ.ವಿ.ಕಾರಂತ)ತಾಯಿ ಲಕ್ಷ್ಮಮ್ಮ ಕೊಂಡಾಟದಿಂದ'ಬೋಯಣ್ಣ'ಎಂದು ಕರೆಯುತ್ತಿದ್ದರು. ತಾಯಿ ಹಾಡುತ್ತಿದ್ದ ಸಂಪ್ರದಾಯದ ಹಾಡುಗಳು, ಭಜನೆಯ ಹಾಡುಗಳು; ಊರಿನ ಹರಿಕಥೆ, ಯಕ್ಷಗಾನಗಳು, ಸುತ್ತಮುತ್ತಲಿನ ಊರುಗಳ ಜಾತ್ರೆ, ಕೋಲ, ರಥೋತ್ಸವ, ಪಾಡ್ದನಗಳು, ಪಾತ್ರಿಯ ದರ್ಶನ, ವಾದ್ಯಗಳ ಧ್ವನಿ ವಿನ್ಯಾಸ ಇವುಗಳಿಂದ ಬೋಯಣ್ಣನ ಭಾವಕೋಶ ಸಮೃದ್ಧವಾಯಿತು. ಮುಂದೆ ಕುಕ್ಕಾಜೆ ಪ್ರಾಥಮಿಕ ಶಾಲೆಯ ನಾಟಕಗಳಲ್ಲಿ ಬೋಯಣ್ಣನಿಗೆ ...

READ MORE

Related Books