CAA, NRC, NPR ಎಂದರೇನು?

Author : ದೊಡ್ಡಿಪಾಳ್ಯ ನರಸಿಂಹಮೂರ್ತಿ

Pages 48

₹ 40.00




Year of Publication: 2020
Published by: ಗೌರಿ ಮೀಡಿಯಾ ಟ್ರಸ್ಟ್‌
Address: ನಂ.960, 7ನೇ ಅಡ್ಡರಸ್ತೆ, ಶ್ರೀನಿವಾಸನಗರ, ಬನಶಂಕರಿ ಮೊದಲನೇ ಹಂತ, ಬೆಂಗಳೂರು-560050
Phone: 08026622817

Synopsys

ಭಾರತ ಸರ್ಕಾರ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆ-2019 ಬಗ್ಗೆ ದೇಶದೆಲ್ಲೆಡೆ ಚರ್ಚೆ, ಸಂವಾದ, ಪ್ರತಿಭಟನೆ, ಹೋರಾಟಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ಎಂದರೇನು? ಎಂಬುದನ್ನು ಪತ್ರಕರ್ತ, ಲೇಖಕ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ.

ಈ ಕೃತಿಯಲ್ಲಿ ಪೌರತ್ವ ಪರಿಕಲ್ಪನೆ ಬಗ್ಗೆ ವಿವರಿಸಲಾಗಿದೆ. ಪೌರತ್ವದ ಕುರಿತು ಸಂವಿಧಾನದಲ್ಲಿ ಮಾಡಿರುವ ತಿದ್ದುಪಡಿಗಳೇನು? ಸಿಎಎ ಬಗ್ಗೆ ಇರುವ ತಪ್ಪುಕಲ್ಪನೆಗಳು ಏನು? ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ಗೂ ನಡುವಿನ ಸಂಬಂಧವೇನು ಎಂಬುದನ್ನು ಈ ಪುಸ್ತಕದಲ್ಲಿ ಚರ್ಚಿಸಿದ್ದು, ಸಕಾಲಿಕವಾಗಿ ಅಗತ್ಯ ಎನ್ನುವಂತಿದ್ದ ಮಾಹಿತಿಯನ್ನು ಈ ಕೃತಿ ಪೂರೈಸಿದೆ.

About the Author

ದೊಡ್ಡಿಪಾಳ್ಯ ನರಸಿಂಹಮೂರ್ತಿ

ಪತ್ರಕರ್ತ, ಚಿಂತಕ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರು ಮೂಲತಃ ಕುಂಬಳಗೋಡಿನ ದೊಡ್ಡಿಪಾಳ್ಯದವರು. ಗೌರಿ ಲಂಕೇಶ್‌, ವಾರಪತ್ರಿಕೆಯಲ್ಲಿ ವರದಿಗಾರರಾಗಿ, ಸುದ್ದಿ ವಿಶ್ಲೇಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಗೌರಿ ಮೀಡಿಯಾ ಟ್ರಸ್ಟ್‌ನ ಕಾರ್ಯದರ್ಶಿಯಾಗಿ ಯಾಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ...

READ MORE

Related Books