ಕಾರ್ಪೆಂಟರ್ ಪದ್ಯಗಳು

Author : ವಿ.ಆರ್. ಕಾರ್ಪೆಂಟರ್

Pages 120

₹ 100.00
Year of Publication: 2011
Published by: ಅಂಕ ಪ್ರಕಾಶನ
Address: ನಂ, 955, ಕಾಳಿದಾಸನಗರ, 4ನೇ ಮುಖ್ಯರಸ್ತೆ, ಹೊಸಕೆರೆಹಳ್ಳಿ, ಬೆಂಗಳೂರು

Synopsys

ನರಸಿಂಹಮೂರ್ತಿ ವಿ.ಆರ್. ಅವರ ಪದ್ಯ ಸಂಕಲನ ಕಾರ್ಪೆಂಟರ್ ಪದ್ಯಗಳು. ಕಾರ್ಪೆಂಟರಿ ಕಸುಬುದಾರಿಕೆಯೊಂದಿಗೆ ಕವಿತೆನೇಯುವ ಕಸುವನ್ನೂ ಉಳಿಸಿಕೊಂಡಿರುವ ಕಾರ್ಪೆಂಟರ್ ಪದ್ಯಗಳ ಮೂಲಕ ಸಮಾಜದ ಜಡತ್ವಕ್ಕೆ ಮುಖಾಮುಖಿಯಾಗುತ್ತಾರೆ. 

‘ಈ ನಗರದ ಬಂಗಲೆಗಳು ಧ್ಯಾನಸ್ತವಾಗಿವೆಯೆಂದು

ತಿಳಿದು ಈ ಕಡೆಗೆ ತಲೆಹಾಕಿದಿರಿ,

ಇಲ್ಲಿ ನಿಮ್ಮ ಆತ್ಮವನ್ನು ನಿಸ್ಸಂದೇಹವಾಗಿ 

ಜರ್ಝಿರಿತಗೊಳಿಸುವಂತಹ ವಿಷಪೂರಿತ ಹಾವು ಚೇಳುಗಳೇ

ಮೊದಲಾದ ಜಂತುಗಳು ಜೀವಿಸುತ್ತಿವೆ’

ಎಂದು ನಗರದ ಭೀಕರತೆಯನ್ನು ವಿವರಿಸುವ  ಕವಿ ಕಾರ್ಪೆಂಟರ್..

‘ತಮ್ಮ ಯೌವ್ವನದ ಬಿರುಸನ್ನು ಹೊರಸೂಸುವ 

ಮುಂಗುಸಿಗಳು ಸಹ ಇಲ್ಲಿ ನಿಷ್ಪ್ರೋಜಕ ’. 

ಅವುಗಳನ್ನು ಕತ್ತು ಸೀಳಿ ಕತ್ತಲೆಯ ಪಂಜರಗಳಲ್ಲಿ 

ಹೂಳುತ್ತಾರೆ. 

ಎನ್ನುತ್ತಾ ನವಿರುತನ ನಶಿಸುಹೋದುದ್ದನ್ನೂ ತಮ್ಮದೇ ಶೈಲಿಯಲ್ಲಿ ಬರೆಯುತ್ತಾರೆ. ಮತ್ತದೇ ಪದ್ಯದ ಸಾಲುಗಳಲ್ಲಿ

‘ಇಲ್ಲಿನ ಗಡಿಯಾರಗಳು ದಿಕ್ಕೆಟ್ಟ ಪ್ರಾಣಿಗಳಂತೆ

ವರ್ತಿಸುತ್ತಾ ತಮ್ಮ ಚಲನೆಯನ್ನು ಆಗಾಗ ನಿಲ್ಲಿಸುತ್ತವೆ’

ಎನ್ನುವ ಮೂಲಕ ತಮ್ಮ ಆತಂಕಭರಿತ ಭಯವನ್ನು ಮತ್ತಷ್ಟು ಗಟ್ಟಿಯಾಗಿ ಹೇಳುತ್ತಾರೆ.

ಈ ಪುಸ್ತಕದಲ್ಲಿ ಕಾರ್ಪೆಂಟರ್ ಅವರು ಕವಿತೆಯೊಂದಿಗೆ ಸಮಾಜದ ವಿಭಿನ್ನ ಚಲನೆಗೆ ಸ್ಪಂದಿಸುವಂತಹ ಪದ್ಯಗಳಿವೆ. 

About the Author

ವಿ.ಆರ್. ಕಾರ್ಪೆಂಟರ್
(28 May 1981)

ವಿ. ಆರ್. ಕಾರ್ಪೆಂಟರ್ ಯಲಹಂಕ ಸಮೀಪದ ವೆಂಕಟಾಲದಲ್ಲಿ 1981ರಲ್ಲಿ ಜನಿಸಿದರು. ಅವರ ಮೂಲ ಹೆಸರು- ನರಸಿಂಹಮೂರ್ತಿ ವಿ.ಆರ್. ತಂದೆ ರಾಮಯ್ಯ, ತಾಯಿ-ಸಿದ್ದಗಂಗಮ್ಮ. 9ನೇ ತರಗತಿಯವರೆಗೆ ವೆಂಕಟಾಲ ಮತ್ತು ಯಲಹಂಕದಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ ಸುಮಾರು ಹದಿನೈದು ವರ್ಷಗಳ ಕಾಲ ಬಡಗಿ ವೃತ್ತಿ. ಅದರ ನಡುವೆಯೇ ಲಂಕೇಶ್ ಪತ್ರಿಕೆಯ ಪ್ರಭಾವದಿಂದ ಸಾಹಿತ್ಯ ಲೋಕಕ್ಕೆ ಬಂದ ಅವರು ಒಂದಷ್ಟು ಕಾಲ ಕನ್ನಡ ಟೈಮ್ಸ್ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಸಿಗ್ನಲ್ ಟವರ್, ಐದನೇ ಗೋಡೆಯ ಚಿತ್ರಗಳು, ಕಾರ್ಪೆಂಟರ್ ಪದ್ಯಗಳು (ಕವನ ಸಂಕಲನ), ಅಪ್ಪನ ಪ್ರೇಯಸಿ ಮತ್ತು ನೀಲಿಗ್ರಾಮ (ಕಾದಂಬರಿಗಳು) ಪ್ರಕಟವಾಗಿವೆ. ಕಾರ್ಪೆಂಟರ್ ...

READ MORE

Related Books