ಚದುರಂಗರ ಸಮಗ್ರ ನಾಟಕಗಳು

Author : ಚದುರಂಗ (ಎಂ. ಸುಬ್ರಹ್ಮಣ್ಯರಾಜೇ ಅರಸ್)

Pages 221

₹ 200.00




Year of Publication: 2001
Published by: ಅಭಿರುಚಿ ಪ್ರಕಾಶನ
Address: # 386, 3ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ಸರಸ್ವತಿಪುರ, ಮೈಸೂರು-09.

Synopsys

ಖ್ಯಾತ ಸಾಹಿತಿ ಚದುರಂಗ (ಎಂ. ಸುಬ್ರಹ್ಮಣ್ಯರಾಜೇ ಅರಸ್) ಅವರ ಸಮಗ್ರ ನಾಟಕಗಳ ಕೃತಿ ಇದು. ಚದುರಂಗರು ಕುಮಾರರಾಮ (1966), ಇಲಿಬೋನು(1972), ಹಾಗೂ ಬಿಂಬ (1990) ನಾಟಕಗಳನ್ನು ರಚಿಸಿದ್ದು, ವಸ್ತು ವಿಷಯಗಳು ಸಮಾಜದ ಮೌಢ್ಯಾಚರಣೆಗಳನ್ನು ವ್ಯಂಗ್ಯವಾಡಿ, ವೈಜ್ಞಾನಿಕತೆಯನ್ನು ಬೆಳೆಸುವತ್ತ ಇವರ ನಾಟಕಗಳು ಹೊಸ ಚಿಂತನೆಯನ್ನು ಪ್ರೇರೇಪಿಸುತ್ತವೆ. ಸಾಮಾಜಿಕ ನಡೆಗಳ ಕುರಿತು ಸೂಕ್ಷ್ಮ ಒಳನೋಟಗಳನ್ನು ನೀಡುತ್ತವೆ.

About the Author

ಚದುರಂಗ (ಎಂ. ಸುಬ್ರಹ್ಮಣ್ಯರಾಜೇ ಅರಸ್)
(01 January 1916 - 19 October 1998)

ಸಣ್ಣ ಕಥೆಗಾರ, ಕಾದಂಬರಿಕಾರ, ನಾಟಕಕಾರ ಆದ ಚದುರಂಗರು (ಎಂ. ಸುಬ್ರಹ್ಮಣ್ಯರಾಜೇ ಅರಸ್ ಅವರು) ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರು. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ 1916ರ ಜನವರಿ 1ರಂದು ಜನಿಸಿದರು. ತಂದೆ ಮುದ್ದುರಾಜೇ ಅರಸ್ ಮತ್ತು ತಾಯಿ ಮರುದೇವಿ ಅರಸ್. ರಾಜಮನೆತನದ ಒಡನಾಟವಿದ್ದ ಇವರ ವಿದ್ಯಾಭ್ಯಾಸ ಮೈಸೂರಿನಲ್ಲಿ ನಡೆಯಿತು. ಮೈಸೂರಿನ ರಾಯಲ್ ಸ್ಕೂಲ್, ಬೆಂಗಳೂರಿನ ಇಂಟರ್ ಮೀಡಿಯೇಟ್  ಕಾಲೇಜು, ಮೈಸೂರು ಮಹಾರಾಜ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಬಿ.ಎ. ಪದವಿ ಪಡೆದರು. ಕಾನೂನು ಮತ್ತು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಪುಣೆಗೆ ಹೋದರು. ಕಾರಣಾಂತರಗಳಿಂದ ಶಿಕ್ಷಣ ಪೂರ್ಣಗೊಳ್ಳಲಿಲ್ಲ. ಗಾಂಧಿ ...

READ MORE

Reviews

ಹೊಸತು - ಸಪ್ಟೆಂಬರ್‌-2001

ಸಮಗ್ರ ನಾಟಕಗಳು ಪಂಥಗಳಿಂದಲೂ ಪಡೆದು ಅಗ್ರಪಂಕ್ತಿಯಲ್ಲಿ ಎತ್ತರವಾಗಿ ನಿಲ್ಲಬಲ್ಲಂಥ ಕೃತಿ ರಚನೆ ಮಾಡಿದ ಸಾಹಸಿ ಶ್ರೀ ಚದುರಂಗರು. ಅವರ ನಾಲ್ಕೂ ನಾಟಕಗಳ ಸಮಗ್ರ ಸಂಗ್ರಹವಿದು. ಅಸಹಜತೆಯಿಂದ ಸಹಜತೆಗೆ ಜಿಗಿಯುವ, ಭೂತ-ಭವಿಷ್ಯತ್‌ಗಳಿಗಿಂತ ವರ್ತಮಾನಕ್ಕೇ ಹೆಚ್ಚಿನ ಪ್ರಾಧಾನ್ಯತೆ ನೀಡುವ, ಅಸಾಮಾನ್ಯ ಮಾನವ ಸ್ವಭಾವಗಳನ್ನು ಪರಿಚಯಿಸುವ ಅವರ ನಾಟಕಗಳ ಮೋಡಿ ಅದ್ಭುತವಾಗಿದೆ.

Related Books