ಚಕೋರ ಮತ್ತು ಚಂದ್ರಮ

Author : ದಂಡಪ್ಪ

Pages 246

₹ 200.00




Year of Publication: 2017
Published by: ವಿಸ್ಮಯ ಪಬ್ಲಿಕೇಶನ್ಸ್
Address: #892, 15 ನೇ ಅಡ್ಡರಸ್ತೆ, 1 ನೇ ಹಂತ, ಚಂದ್ರಾ ಲೇಔಟ್, ಬೆಂಗಳೂರು - 72
Phone: 9916916828

Synopsys

ಲೇಖಕ ಎಚ್. ದಂಡಪ್ಪ ಅವರ ಈ ಪುಸ್ತಕ ಅವರ ಬದುಕಿನ ಘಟನೆಗಳನ್ನು ದಾಖಲಿಸಿದ, ನೋವು ನಲಿವುಗಳ ಸಂದರ್ಭದಲ್ಲಿ ಬರೆದ ಲೇಖನಗಳ ಸಂಗ್ರಹ ಇದು.  ಅವರ ಬಹುಶಿಸ್ತೀಯ ಅಧ್ಯಯನಗಳ ಫಲವಾಗಿ 'ಚಕೋರ ಮತ್ತು ಚಂದ್ರಮ' ಮೂಡಿ ಬಂದಿದೆ. ಪುಸ್ತಕ ಭಾರತೀಯ ಭಕ್ತಿ ಸಾಹಿತ್ಯ, ಪರಂಪರೆ, ದಾಸ ಸಾಹಿತ್ಯದಲ್ಲಿನ ಕೀರ್ತನೆಗಳಲ್ಲಿ ಜಾತಿ ತಾರತಮ್ಯದ ಆಯಾಮಗಳು, ಮತ್ತು ಸಾಹಿತ್ಯ, ವಿಮರ್ಶೆ, ಸಂಸ್ಕೃತಿ, ಹೊಸಗನ್ನಡ ಸಾಹಿತ್ಯ ರಚನೆಯಲ್ಲಿ ಬಂದಂತಹ ವಿಮರ್ಶೆಯ ಕೆಲವು ಚಿಂತನೆಗಳು  ಇವೆ. ಅಲ್ಲದೆ ಕನ್ನಡದ ಮೊದಲ ದಲಿತ ಲೇಖಕರ ಕಾದಂಬರಿಯ ವಿವರಣೆ, ಗೊರೂರರ ಪ್ರಬಂಧಗಳ ಕಥನ ಸ್ವರೂಪ, ಕರ್ನಾಟಕ ಸಾಂಸ್ಕೃತಿಕ ಪರಿಸರದ ಅವಲೋಕನ, ಆಫ್ರಿಕನ್, ಆಪ್ರೋ - ಅಮೇರಿಕನ್ ಸಾಹಿತ್ಯದ ಅನುವಾದ, ವಾರಿಸ್ ಡೆರಿಸ್ ನ ಮರುಭೂಮಿಯ ಹೂ ಬಗೆಗಿನ ಒಂದು ವಿಮರ್ಶೆ, ಓಲೆಕುಲೆಟ್ ಅವರ ಲೇರಿಯೋಂಕ ಕೃತಿ, ಶಿಕ್ಷಣ ಮತ್ತು ಭಾಷೆಗೆ ಸಂಬಂಧಪಟ್ಟ ಕೆಲವು ವಿಚಾರ ವಿವರಣೆಗಳು, ಇಂಗ್ಲಿಷ್ ಮತ್ತು ಸಾಂಸ್ಕೃತಿಕ ಆಧುನೀಕರಣ, ಶಾಸ್ತ್ರೀಯ ಭಾಷೆಯಲ್ಲಿನ ಕೆಲವು ವಿಚಾರಗಳನ್ನೂ ಕೂಡ ಒಳಗೊಂಡಿದೆ.

Related Books