ಚಕ್ರ

Author : ಜೆ.ಆರ್. ಲಕ್ಷ್ಮಣರಾವ್

Pages 128

₹ 54.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಲೇಖಕ ಜೆ.ಆರ್. ಲಕ್ಷ್ಮಣರಾವ್ ಅವರು ಮಕ್ಕಳಿಗಾಗಿ ಬರೆದ ಕೃತಿ-ಚಕ್ರ. ಮಾನವನ ಚಿಂತನಾಶೀಲ ವಿಕಾಸದಲ್ಲಿ ಚಕ್ರದ ಉಪಯೋಗ ಹೇಗೆ ಪೂರಕವಾಯಿತು. ಮೊದಲು ಚಕ್ರದ ಪರಿಕಲ್ಪನೆ ಬಂದಿದ್ದು ಹೇಗೆ? ಅದರಿಂದ, ದೊಡ್ಡ ದೊಡ್ಡ ಹಾಗೂ ಭಾರವಾದ ವಸ್ತುಗಳನ್ನು ಸುಲಭವಾಗಿ ಹಾಗೂ ವೇಗವಾಗಿ ಸಾಗಿಸಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ಚಿಂತನಾಶೀಲ ಬರೆಹಗಳು ಇಲ್ಲಿವೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1996) ಲಭಿಸಿದೆ.

About the Author

ಜೆ.ಆರ್. ಲಕ್ಷ್ಮಣರಾವ್
(21 January 1921 - 29 December 2017)

ಜಗಳೂರು ರಾಘವೇಂದ್ರರಾವ್ ಲಕ್ಷ್ಮಣರಾವ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜೆ.ಆರ್‌. ಲಕ್ಷ್ಮಣರಾವ್ ಎಂದೇ ಚಿರಪರಿಚಿತರು. 1921 ಜನವರಿ 21 ರಂದು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಜನಿಸಿದರು. ತಂದೆ ರಾಘವೇಂದ್ರ ರಾವ್ ಮತ್ತು ತಾಯಿ ನಾಗಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಜಗಳೂರಿನಲ್ಲಿ ನಡೆಸಿದ ಅವರು  ಪ್ರೌಢ ಶಾಲೆಯ ಅಭ್ಯಾಸ ದಾವಣಗೆರೆಯಲ್ಲಿ ಪೂರ್ಣಗೊಳಿಸಿದರು. ಈಗ ಯುವರಾಜ ಕಾಲೇಜು ಎಂದು ಕರೆಯಲಾಗುವ ’ಮೈಸೂರಿನಲ್ಲಿ ಇಂಟರ್ ಮೀಡಿಯೆಟ್ ಕಾಲೇಜ್’ ಅಧ್ಯಯನ ಮುಂದುವರೆಸಿದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, ರಸಾಯನ ಶಾಸ್ತ್ರದಲ್ಲಿ ಎಮ್ಮೆಸ್ಸಿ ಪದವಿ ಪಡೆದರು. ತುಮಕೂರು ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯಾರಂಭ ಮಾಡಿದ ಅವರು ಬೆಂಗಳೂರಿನ ಸೇಂಟ್ರಲ್ ಕಾಲೇಜ್, ಶಿವಮೊಗ್ಗೆಯ ಸಹ್ಯಾದ್ರಿ ...

READ MORE

Related Books