ಚಲೋ ಉಡುಪಿ

Author : ಗಂಗಾರಾಂ ಚಂಡಾಳ

Pages 104

₹ 80.00




Year of Publication: 2017
Published by: ಬೆಳಕು ಸಮಾಜ ಪ್ರಕಾಶನ
Address: # 29, ಕಾವೇರಿನಗರ, 2ನೇ ಹಂತ, ಮಂಡ್ಯ-571402
Phone: 9916741104

Synopsys

ಲೇಖಕ, ಚಿಂತಕ ಗಂಗಾರಾಂ ಚಾಂಡಾಳ ಅವರ ಸಂಪಾದಿತ ಕೃತಿ-ಚಲೋ ಉಡುಪಿ. ರಾಜ್ಯದಲ್ಲಿ ನಡೆಯುತ್ತಿರುವ ಮಡೇ ಸ್ನಾನ ದಂತಹ ಮೂಢನಂಬಿಕೆಗಳ ವಿರುದ್ಧ ರಾಜ್ಯದ ವಿವಿಧ ದಲಿತ ಸಂಘಟನೆಗಳು ಉಡುಪಿ ಚಲೋ ಎಂಬ ಚಳವಳಿ ಆಯೋಜಿಸಿದ್ದರ ಹಿನ್ನೆಲೆಯಲ್ಲಿ ವ್ಯಕ್ತವಾದ ಲೇಖಕರ ಪರ-ವಿರೋಧ ಅಭಿಪ್ರಾಯಗಳನ್ನು ಸಂಗ್ರಹಿಸಿ ತೌಲನಿಕ ಅಧ್ಯಯನಕ್ಕಾಗಿ ನೀಡಿದ ಕೃತಿ ಇದು.

ಚಲೋ ಉಡುಪಿ ಎಂದು ಮಠದತ್ತ ಹೊರಟಿದ್ದೇಕೆ? (ಜೀತೇಂದ್ರ ಕುಂದೇಶ್ವರ), ದ;ಲಿತರು ಭೂಮಿ ಹೊಂದಿರುವುದು ಇಂದಿನ ಅಗತ್ಯಗಳಲ್ಲೊಂದು (ಜಿಗ್ನೇಶ ಮೇವಾನಿ), ಮುತ್ತಿಗೆಗಳ ಹಿಂದಿರುವುದು ಕಮ್ಯುನಿಸ್ಟರ ಕತ್ತಿ, ಸುತ್ತಿಗೆ (ರೋಹಿತ್ ಚಕ್ರವರ್ತಿ), ವಿದ್ವಂಸಕರಿಂದ ದೂರವಾಗುವಿರಾ? (ಸನತಕುಮಾರ ಬೆಳಗಲಿ), ಶೋಷಿತರೊಳಗಿನ ಶ್ರೇಣಿಕರಣದ ಅಪಾಯ (ಬರಗೂರು ರಾಮಚಂದ್ರಪ್ಪ), ಬ್ರಾಹ್ಮಣರೇ ಇವರ ಅಕ್ಕಿ-ಬೇಳೆ, ದ್ರಾಕ್ಷಿ ಗೋಡಂಬಿ (ಚಿರಂಜೀವಿ ಭಟ್) ಹೀಗೆ ಸಂಪಾದಕರ ಮಾತು ಒಳಗೊಂಡು ಒಟ್ಟು 18 ಲೇಖನಗಳನ್ನು ಸಂಪಾದಿಸಲಾಗಿದೆ. 

 

 

About the Author

ಗಂಗಾರಾಂ ಚಂಡಾಳ

ಲೇಖಕ ಗಂಗಾರಾಂ ಚಂಡಾಳ ಅವರು ಕೋಲಾರ ಜಿಲ್ಲೆಯ ಯಡಹಳ್ಳಿ (ಜನನ: 18-06-1961) ಗ್ರಾಮದವರು. ತಂದೆ ವೆಂಕಟಪ್ಪ, ತಾಯಿ ವೆಂಕಟಗಿರಿಯಮ್ಮ.  ಮಂಡ್ಯದ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವೀಧರರು. ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು.  ಯು.ಆರ್.ಪಿ ವತಿಯಿಂದ (2005) ಎಂ.ಟೆಕ್ ವ್ಯಾಸಂಗ ಪೂರೈಸಿದರು. ಕನ್ನಡ, ತೆಲುಗು, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಬಲ್ಲವರು.  ಕರ್ನಾಟಕ ಅಂಬೇಡ್ಕರ್ ಗ್ರಾಮ ಸಮಾಜ ಸಂಘಟನೆಯಿಂದ ಸಮಾಜ ಸೇವೆಯಲ್ಲಿ ನಿರತರು. ಗೋಕಾಕ್ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ ಹಾಗೂ ದಲಿತ ಚಳವಳಿಯಲ್ಲಿ ಪಾಲ್ಗೊಂಡಿದ್ದರು. 68ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಶೀಲ ವಿಷಯ ಮಂಡನೆ., ಸಮ್ಮೇಳನ, ಉತ್ಸವಗಳು ...

READ MORE

Related Books