ಚಂದ್ರಮುಖಿ

Author : ಚಂದ್ರಕಾಂತ ಪೋಕಳೆ

Pages 394

₹ 240.00




Year of Publication: 2013
Published by: ಸಪ್ನ ಬುಕ್ ಹೌಸ್
Address: ಬೆಂಗಳೂರು

Synopsys

ಚಂದ್ರಕಾಂತ ಪೋಕಳೆ ಅವರ ಕಾದಂಬರಿ ‘ಚಂದ್ರಮುಖಿ’. ಈ ಕಾದಂಬರಿಯ ಮೂಲ ಲೇಖಕರಾದ ವಿಶ್ವಾಸ ಪಾಟೀಲರು ಐ.ಎ.ಎಸ್. ಅಧಿಕಾರಿಯಾಗಿ ಮಹಾರಾಷ್ಟ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಲೆ ಮತ್ತು ರಾಜಕಾರಣವನ್ನು ತಳಕು ಹಾಕಿ ಹಲವು ಸಮಸ್ಯೆಗಳನ್ನು ಹುಟ್ಟು ಹಾಕುವ ಅವರ ಈ ಕೃತಿ ಮರಾಠಿಯಲ್ಲಿ ತುಂಬಾ ಜನಪ್ರಿಯತೆಯನ್ನು ಗಳಿಸಿದೆ. ಚಂದ್ರಕಾಂತ ಪೋಕಳೆಯವರು ಇದನ್ನು ಕನ್ನಡಕ್ಕೆ ಚಂದ್ರಮುಖಿ ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ಮಹಾರಾಷ್ಟ್ರದ 'ತಮಾಶಾ' ಎಂಬ ಕಲೆಯ ಹುಟ್ಟು, ಬೆಳವಣಿಗೆ ಮತ್ತು ರೂಪಾಂತರಗಳ ಕುರಿತು ವಿಶದವಾಗಿ ಈ ಕಾದಂಬರಿಯಲ್ಲಿ ಬರೆದಿದ್ದಾರೆ. ಹಲವಾರು ಲಾವಣಿಗಳನ್ನು ಇದರಲ್ಲಿ ಕಾಣಬಹುದು. ಅನುವಾದಕರಾದ ಪೋಕಳೆಯವರ ಅಭಿಪ್ರಾಯದಂತೆ ಇತ್ತೀಚೆಗೆ ತಮಾಶಾ ಎಂಬ ಜಾನಪದ ಕಲೆಯ ಬಗ್ಗೆ ವಿಶೇಷವಾಗಿ ನಗರಗಳಲ್ಲಿ, ಹಾರಿಕೆಯ ಹಗುರ ಧಾಟಿಯ ಭಾವನೆಯನ್ನು ಪ್ರದರ್ಶನ ಮಾಡಲಾಗುತ್ತದೆ. ಇದರ ಆಧಾರದ ಮೇಲೆ ಆ ಕಲೆಯ ಮೂಲ್ಯಾಂಕನ ಮಾಡಲು ಹೊರಟರೆ ಅದು ತಪ್ಪಾಗುತ್ತದೆ. ತಮಾಶಾ ಎಂಬ ಜಾನಪದ ಕಲೆಯು ಒಂದು ಕಾಲದಲ್ಲಿ ಮಹಾರಾಷ್ಟ್ರದ ಬಹುಜನ ಸಮಾಜದ ಮನರಂಜನೆಯ ಉಸಿರಾಗಿತ್ತು. ಮಹಾರಾಷ್ಟ್ರದ ಮಹಾರ, ಮಾಂಗ, ಡೊಂಬ ಮುಂತಾದ ದಲಿತ, ಪದದಲಿತ ಮತ್ತು ಅಲೆಮಾರಿಗಳು ತಮ್ಮ ಬದುಕನ್ನೇ ಮುಡುಪಾಗಿಟ್ಟು, ಈ ಕಲೆಯನ್ನು ಬೆಳೆಸಿದರು. ಅದರಲ್ಲಿ ಮನ ಸೂರೆಗೊಳ್ಳುವಂತಹ ನೃತ್ಯ, ನಾಟ್ಯ, ವಿನೋದ ಮತ್ತು ಸಂಗೀತವಿರುತ್ತಿತ್ತು. ಈ ಕಾದಂಬರಿಯ ಕಥಾನಾಯಕಿ ಚಂದ್ರಮುಖಿ ಆ ಕಲೆಗೆ ಮೂರ್ತರೂಪ ಕೊಟ್ಟ ನರ್ತಕಿ.

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books