ಚಂದ್ರಪಲ್ಲವಿ

Author : ಪ್ರಭಾಕರ ಬಿಳ್ಳೂರು

Pages 96

₹ 90.00




Year of Publication: 2021
Published by: ಪೂಜ್ಯ ಮಾತಾಜಿ ಪ್ರಕಾಶನ
Address: # 1668/B, ಹೋಳಿಕಟ್ಟಿ ಗಲ್ಲಿ, ಅಥಣಿ-591304, ಬೆಳಗಾವಿ ಜಿಲ್ಲೆ.
Phone: 8861081817

Synopsys

ಹಿರಿಯ ಲೇಖಕ ಪ್ರಭಾಕರ ಬಿಳ್ಳೂರ ಅವರ ಸಾಮಾಜಿಕ ರಂಗ ನಾಟಕ ಕೃತಿ-ಚಂದ್ರಪಲ್ಲವಿ. ಸಾಹಿತಿ ಸುನಂದಾ ಎಮ್ಮಿ ಅವರು ಬರೆದ ಮುನ್ನುಡಿಯಲ್ಲಿ ‘ಈ ನಾಟಕವು ಸಮಾಜಕ್ಕೆ ಕೇವಲ ಸಂದೇಶ ನೀಡದು. ಸಮಾಜದ ಅನೇಕ ಸಮಸ್ಯೆಗಳಿಗೆ ಸಮಾಧಾನ, ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ. ಅನ್ಯಾಯಕ್ಕೆ ಅಪಜಯವೂ, ನ್ಯಾಯಕ್ಕೆ ಜಯವೂ ಲಭಿಸುವ ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ. 

ಸಾಹಿತಿ ಅರ್ಚನಾ ಆರ್ಯ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಚಂದ್ರಪಲ್ಲವಿ ನಾಟಕವು ಸಾಮಾಜಿಕ ಮನಃಶಾಸ್ತ್ರವನ್ನು ಒಳಗೊಂಡಿದೆ. ಉತ್ತರ ಕರ್ನಾಟಕದ ಗಟ್ಟಿ ಭಾಷೆ ಇದೆ. ಎಲ್ಲಾ ಇದ್ದೂ ಒಂಟಿತನದ ಬೇಗೆಯಲ್ಲಿರುವಂತೆ ಕೊನೆಗೆ ಇಹಲೋಕ ತ್ಯಜಿಸುವಲ್ಲಿ ಮುಗಿಯುವ ಈ ನಾಟಕ ಬದಲಾಗುತ್ತಿರುವ ಸಾಮಾಜಿಕ ಸಂದರ್ಭದ ಮೇಲೆ ಬೆಳಕು ಚೆಲ್ಲುತ್ತೆ. ಅನುಭವಕ್ಕೆ ಆಕಾರ ನೀಡುತ್ತದೆ’ ಎಂದು ಪ್ರಶಂಸಿಸಿದ್ದರೆ, ಸಾಹಿತಿ ಆಗುಂಬೆ ಎಸ್. ನಟರಾಜ್ ಅವರು ‘ಚಂದ್ರಪಲ್ಲವಿ  ನಾಟಕದಲ್ಲಿ ಕನ್ನಡ ಲಯ, ಹೃದ್ಯತೆ ಹೀಗೆ ಮಾರ್ಮಿಕವಾದ  ಶೈಲಿಗಳು ಆದರ್ಶಪ್ರಾಯವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಹಿತಿ ಆರ್.ಎಸ್. ಜಾಪಗಾವಿ ಅವರು ‘ಆದರ್ಶ ಶಿಕ್ಷಕರಾಗಿದ್ದ ಪ್ರಭಾಕರ ಬಿಳ್ಳೂರ ಅವರು ಚಂದ್ರಪಲ್ಲವಿ ನಾಟಕದಲ್ಲೂ ಆದರ್ಶ ಜೀವನಕ್ಕೆ ಆದ್ಯತೆ ನೀಡಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.

About the Author

ಪ್ರಭಾಕರ ಬಿಳ್ಳೂರು
(01 December 1938 - 13 February 2019)

ಪ್ರಭಾಕರ ಬಿಳ್ಳೂರು ಅವರು ಬೆಳಗಾವಿ ಜಿಲ್ಲೆಯ ಅಥಣಿಯವರು (ಜನನ: 01-12-1938) ಅಥಣಿಯಲ್ಲೇ ಪಿಯುಸಿ ನಂತರ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಎಂಎ. ತದನಂತರ ಬಿ.ಇಡಿ ಪದವಿ ಪಡೆದರು. ಶಿರುಗುಪ್ಪಿಯ  ಶ್ರೀ ಸಿದ್ದೇಶ್ವರ ವಿದ್ಯಾಲಯದ ಮುಖ್ಯೋಪಾಧ್ಯಯರಾಗಿ ನಿವೃತ್ತರಾದರು. ಇವರ ಮೊದಲ ನಾಟಕ-ಶ್ರೀ ಧರ್ಮ ರಕ್ಷಕ ಮಹಾವೀರ’. ಮೊದಲ ಕವನ ಸಂಕಲನ-ತಿಳಿನೀರು. ಪೂಜ್ಯ ಮಾತಾಜಿ ಪ್ರಕಾಶನ ಸಂಸ್ಥೆಯೊಂದನ್ನುಸ್ಥಾಪಿಸಿದ್ದರು. ಮಿರ್ಜಿ ಅಣ್ಣಾರಾಯರ ಚಂದ್ರಗಂಗಾ ಜ್ಞಾನಪೀಠ ಪ್ರಕಾಶನವು ಇವರ ‘ತಿಳಿನೀರು’ ಕವನ ಸಂಕಲನವನ್ನು ಪ್ರಕಟಿಸಿತ್ತು. ಸಿಂಪಿಯೊಡೆದ ಮುತ್ತುಗಳು-ಎಂಬುದು ಇವರ ಮತ್ತೊಂದು ಕವನ ಸಂಕಲನ. 2019ರ ಫೆಬ್ರವರಿ 13 ರಂದು ನಿಧನರಾದರು. ...

READ MORE

Related Books