ಚಂದ್ರವಂಶದ ಕಥೆ

Author : ನಾರಾಯಣೀ ದಾಮೋದರ್

Pages 144

₹ 120.00




Year of Publication: 2015
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 08026617100/ 26617755

Synopsys

ಲೇಖಕಿ ನಾರಾಯಣೀ ದಾಮೋದರ್‍ ಅವರ ಕೃತಿ ’ಚಂದ್ರವಂಶದ ಕಥೆ’.

ಚಂದ್ರವಂಶದ ಪೌರಾಣಿಕ ಒಳನೋಟವನ್ನು ಸರಳವಾಗಿ ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ. ಚಂದ್ರವಂಶದ ಸ್ಥೂಲ ಪರಿಚಯವು ಒಂದೆಡೆ ಸಿಗುವ ಉದ್ದೇಶದಿಂದ ಈ ಪುಸ್ತಕವನ್ನು ತರಲಾಗಿದೆ.

ಬ್ರಹ್ಮ ಸೃಷ್ಟಿಯ ಕಲ್ಪನೆ, ಅಸ್ಥಿರ ಸುಖದ ಚಂದ್ರಸಂಸಾರ, ಬುಧ, ಪುರೂರವ, ಆಯು, ನಹುಷ, ಯಯಾತಿ, ಯಯಾತಿಯ ಮತ್ತೊಂದು ಭೂಯಾತ್ರೆ, ಯಯಾತಿಯ ನಂತರ, ದೀರ್ಘಕಾಲದವರೆಗಿನ ಸದ್ದುಮಾಡದ ಸಂತಾನ, ದುಷ್ಯಂತ, ಭರತ, ಪ್ರತೀಪ, ಶಂತನು, ಭೀಷ್ಮ, ಚಿತ್ರಾಂಗದ ಮತ್ತು ವಿಚಿತ್ರವೀರ್ಯ – ಸುಳಿನೋಟ, ವೇದವ್ಯಾಸರು, ಕುರುಕ್ಷೇತ್ರದಿಂದ ಹಸ್ತಿನಾವತಿಯತ್ತ ಎನ್ನುವ ಬರಹಗಳು ಈ ಕೃತಿಯಲ್ಲಿವೆ. ಮೂಲ ಪುರುಷ ಚಂದ್ರನಿಂದ ಹಿಡಿದು ಪುರು, ಯಯಾತಿ, ಪಾಂಡವರು, ಕೌರವರುಗಳನ್ನೆಲ್ಲಾ ದಾಟಿ ಪರೀಕ್ಷಿತ ರಾಜನನ್ನೂ ಮೀರಿ ಮುಂದುವರೆದ ಚಂದ್ರವಂಶದ ವಿವರಗಳು ಈ ಪುಸ್ತಕದಲ್ಲಿ ದಾಖಲಾಗಿವೆ

About the Author

ನಾರಾಯಣೀ ದಾಮೋದರ್

ನಾರಾಯುಣೀ ದಾಮೋದರ ಅವರು ಮೂಲತಃ ಐರೋಡಿಯವರು. ಬಾಲ್ಯದ ಬಹುತೇಕ ಭಾಗವನ್ನು ಕುಂದಾಪುರದಲ್ಲಿ ಕಳೆದರು. ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ನಿರ್ದೇಶನದಲ್ಲಿ ಜರುಗಿದ ಬಾಲವೃಂದ, ಇವರು ನೀವು ಬಲ್ಲಿರಾ? , ಹಚ್ಚುವ ಜ್ತಾನದ ಹಣತೆಯ ಕಾರ್ಯಕ್ರಮಗಳು ಬಾನುಲಿ ಕೇಳುಗರ ಮನಸೂರೆಗೊಂಡಿದ್ದವು. ಆಕಾಶವಾಣಿ ಕಲಾವಿದರಾಗಿ ಹರಿಕಥೆ, ಭಕ್ತಿಗೀತೆ, ಭಾವಗೀತೆಗಳನ್ನು ಹಾಡಿದ್ದಾರೆ. ಹಲವು ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದ್ದಾರೆ. ಪುರಾಣ -ಉಪನಿಷತ್ತುಗಳಿಂದ ಆಯ್ದ ಕಥೆಗಳು ಆಕಾಶವಾಣಿಯಲ್ಲಿ ಪ್ರಸಾರಗೊಳಿಸಿದ್ದೂ ಸೇರಿದಂತೆ ಮತ್ತಿತರೆ ಕಥೆಗಳನ್ನು ಸೇರಿಸಿ   ‘ಒಂದಾನೊಂದು ಕಾಲದಲ್ಲಿ’ ಪುಸ್ತಕ ಪ್ರಕಟಿಸಿದರು. ನಂತರ ಪ್ರಕಟವಾದ ‘ಬೆಳಕು ನೀಡುವ ಕಥೆಗಳು’ ಸಂಕಲನದ ‘ತಾಳ್ಮೆಗೆ ಒಲಿದ ಅದೃಷ್ಟ’ ಕಥೆಯು ...

READ MORE

Related Books