ಲೇಖಕ ಎಚ್.ಜಿ. ಶ್ರೀಧರ ಅವರ ಕಾದಂಬರಿ-ಚಪಡ. ಇದು ಅಕ್ಷರದ ಪಯಣ ಎಂಬುದು ಕಾದಂಬರಿಯ ಉಪಶೀರ್ಷಿಕೆ. ಕನ್ನಡ ಶಾಸನಗಳ ಮೊದಲ ಲಿಪಿಕಾರ ಎಂದೇ ಖ್ಯಾತಿಯ ಚಪಡನ ಕುರಿತ ಕಾದಂಬರಿ ಇದು. ಬ್ರಹ್ಮಗಿರಿ ಶಾಸನದಲ್ಲಿ 'ಚಪಡೇನ ಲಿಖಿತೇ ಲಿಪಿಕರೇಣ’ ಎಂಬ ಸಾಲುಗಳು ಬರುತ್ತವೆ. ಉತ್ತರ ಭಾರತದ 'ಪಾಟಲಿಪುತ್ರ'ದಿಂದ ದಕ್ಷಿಣಭಾರತದ 'ಬ್ರಹ್ಮಗಿರಿ' ವರೆಗಿನ ಸಾಂಸ್ಕೃತಿಕ ಬೃಹದ್ಭಾರತವನ್ನು ಚಿತ್ರಿಸಲಾಗಿದೆ. ಚಕ್ರವರ್ತಿ ಅಶೋಕನ ಕಾಲದ (ಸುಮಾರು 2,270 ವರ್ಷಗಳ ಹಿಂದೆ ) ಶಿಲ್ಪಿಯೊಬ್ಬನ ಜೀವನವನ್ನು ಲಭ್ಯವಿದ್ದ ಮಾಹಿತಿಗಳನ್ನು ಆಧರಿಸಿ, 16 ಅಧ್ಯಾಯಗಳಲ್ಲಿ ನೀಡಲಾಗಿದೆ. ಕೊನೆಗೆ ಬ್ರಹ್ಮಗಿರಿಯ ಶಾಸನ ಹಾಗೂ ಅದರ ಕನ್ನಡಾನುವಾದವನ್ನೂ ಸಹ ನೀಡಿದ್ದು, ಶಿಲ್ಪಿಯೊಬ್ಬನ ಚರಿತ್ರೆಯನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ.
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಚ್.ಜಿ. ಶ್ರೀಧರ ಅವರು ಕನ್ನಡ ವಿಭಾಗ ಮುಖ್ಯಸ್ಥರು ಕೂಡ. ಹೆಸರಾಂತ ವಿಮರ್ಶಕ, ಸಂಶೋಧಕರಾಗಿರುವ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಮುಂಡಿಗೆಹಳ್ಳದವರು. ಸಾಗರದ ಲಾಲ್‌ಬಹಾದೂರ್ ಶಾಸ್ತಿ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದಿದ್ದಾರೆ. ’ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ' ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿ, ಪದವಿ ತರಗತಿ ಪಠ್ಯಪುಸ್ತಕಗಳ ರಚನಾ ಸಮಿತಿ; ಕ್ಯಾಲಿಕತ್ ವಿಶ್ವವಿದ್ಯಾಲಯದ ಪದವಿ ಪರೀಕ್ಷಾ ಮಂಡಳಿಯ ಸದಸ್ಯರಾಗಿರುವ ಅವರು ...
READ MORE