ಚಾರ್ ಧಾಮ್

Author : ಹೇಮಮಾಲಾ ಬಿ.

₹ 100.00




Year of Publication: 2017
Published by: ಸ್ನೇಹ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 09845031335

Synopsys

‘ಚಾರ್ ಧಾಮ್’ ಕೃತಿಯು ಲೇಖಕಿ ಹೇಮಮಾಲಾ ಬಿ. ಅವರ ಪ್ರವಾಸ ಕಥನ. ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ ಕೇಶವ ಪ್ರಸಾದ್ ಅವರು, ‘ಮಹಾಭಾರತದ ನಂಟನ್ನು ಹೊಂದಿರುವ ಚಾರ್ ಧಾಮ್ ಉತ್ತರಾಖಂಡದ ಪ್ರವಾಸೋದ್ಯಮದಲ್ಲಿ ಹಾಸುಹೊಕ್ಕಾಗಿದೆ. ಗಂಗೋತ್ರಿ, ಯುಮುನೋತ್ರಿ, ಕೇದಾರ್ ನಾಥ್ ಮತ್ತು ಬದರಿನಾಥದ ದರ್ಶನ ಹಿಂದೂಗಳಿಗೆ ಜೀವನ ಸಾರ್ಥಕತೆಯನ್ನು ಮೂಡಿಸುತ್ತದೆ. ಪೌರಾಣಿಕ, ಧಾರ್ಮಿಕ, ಆಧ್ಯಾತ್ಮಿಕ ಅನುಭವ, ಅನುಭೂತಿಯ ಜತೆಗೆ ನಿಸರ್ಗದ, ಜನ ಜೀವನದ ವಿಶಿಷ್ಟ ದರ್ಶನ ಅಲ್ಲಿ ಲಭಿಸುತ್ತದೆ. ಚಾರಣಿಗರಿಗಂತೂ ಇದು ಧರೆಗಿಳಿದ ಸ್ವರ್ಗವೆನ್ನುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಕರ್ನಾಟಕದಿಂದ ಕೂಡ ವರ್ಷದಿಂದ ವರ್ಷಕ್ಕೆ ಚಾರ್ ಧಾಮ್ ಯಾತ್ರಿಕರ ಸಂಖ್ಯೆ ವೃದ್ದಿಸುದೆ’ ಎಂದು ಈ  ಪ್ರವಾಸ ಕಥನದ  ವೈಶಿಷ್ಟ್ಯವನ್ನು ಶ್ಲಾಘಿಸಿದ್ದಾರೆ. 

About the Author

ಹೇಮಮಾಲಾ ಬಿ.

ಬರಹಗಾರ್ತಿ ಹೇಮಮಾಲಾ ಬಿ. ಅವರು ಕೇರಳದ ಕಾಸರಗೋಡಿನಲ್ಲಿ 1970ರಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರೆ. ಮೈಸೂರಿನಲ್ಲಿರುವ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಎರಡು ದಶಕಗಳ ಕಾಲ ಕೆಲಸ ನಿರ್ವಹಿಸಿ 2015ರಲ್ಲಿ ಸ್ವಯಂನಿವೃತ್ತಿ ಪಡೆದು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ. ಚಾರಣ, ಪ್ರವಾಸ ಹಾಗೂ ಸಾಹಿತ್ಯ ಅವರ ಆಸಕ್ತಿಯ ಕ್ಷೇತ್ರಗಳು. 'ಸುರಹೊನ್ನೆ' ಎಂಬ ಇ-ಪತ್ರಿಕೆಯನ್ನು ನಿರ್ವಹಿಸುತ್ತಿದ್ದು ಅವರ ಹಲವಾರು ಬರಹಗಳು ಉದಯವಾಣಿ, ಪ್ರಜಾವಾಣಿ, ವಿಜಯವಾಣಿ, ಸುಧಾ, ಮಂಗಳ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಹಿಮಾಲಯದ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿ ಬರೆದ ಪ್ರವಾಸ ಕಥನ 'ಚಾರ್ ಧಾಮ್' ಅವರ ಮೊದಲ ಕೃತಿ. ‘ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಸಾಹಿತ್ಯ ...

READ MORE

Related Books