ಚರಿತ್ರ ಸಂಗ್ರಹ ಭಾಗ-1

Author : ರಾ.ಹ. ದೇಶಪಾಂಡೆ (ರಾಮಚಂದ್ರ ಹಣಮಂತರಾಯ ದೇಶಪಾಂಡೆ)

Pages 191

₹ 1.00




Year of Publication: 1898
Published by: ರಾಮಚಂದ್ರ ಹಣಮಂತರಾಯ ದೇಶಪಾಂಡೆ
Address: ಮಾಳಮಡ್ಡಿ, ಧಾರವಾಡ

Synopsys

ಚರಿತ್ರ ಸಂಗ್ರಹ ಭಾಗ-1 ಈ ಕೃತಿಯನ್ನು ರಾ.ಹ. ದೇಶಪಾಂಡೆ ಅವರು ರಚಿಸಿದ್ದು, 1892ರಲ್ಲಿ ಮೊದಲ ಮುದ್ರಣ ಕಂಡಿತ್ತು. ಮೊಗಲರು (ಬಾಬರ, ನೂರಜಹಾನ್ ರಾಣಿ ಹಾಗೂ ಔರಂಗಜೇಬ), ಮರಾಠರೂ ಪೇಶ್ವೆಯರೂ (ಶಿವಾಜಿ. ಬಾಲಾಜಿ ಭಟ್ಟ ಹಾಗೂ ನಾನಾ ಫಡ್ನವೀಸ್), ಮೈಸೂರು-ಪಂಜಾಬ್ ಗಳ ಕಲಿಗಳು (ಹೈದರ್ ಅಲಿ., ಟಿಪ್ಪುಸುಲ್ತಾನ ಹಾಗೂ ರಜಪುತಸಿಂಗ್) ಯುರೋಪಿಯನ್ ಸಾಹಸಿಗರು (ಅಲ್ಬಕರ್ಕ್, ಡ್ಯುಪ್ಲೆ, ರಾಬರ್ಟ್ ಕ್ಲೈವ್) ಭರತಖಂಡದ ಆಂಗ್ಲಭೌಮ ಸರ್ವಾಧಿಪತಿಗಳು (ವಾರೆನ್ ಹೇಸ್ಟಿಂಗ್ಸ್, ಕಾರ್ನವಾಲಿಸ್, ಮಾಕ್ವೀಸ್ ವೆಲ್ಸೆ, ಡಾಲ್ ಹೌಸಿ) ಹೀಗೆ ಚರಿತ್ರೆಯನ್ನು ಕಟ್ಟಿಕೊಟ್ಟ ಕೃತಿ ಇದು.

About the Author

ರಾ.ಹ. ದೇಶಪಾಂಡೆ (ರಾಮಚಂದ್ರ ಹಣಮಂತರಾಯ ದೇಶಪಾಂಡೆ)
(20 March 1861 - 26 April 1931)

ರಾ.ಹ.ದೇಶಪಾಂಡೆ ಎಂದೇ ಖ್ಯಾತಿಯ ರಾಮಚಂದ್ರ ಹಣಮಂತರಾಯ ದೇಶಪಾಂಡೆ ಅವರು ಧಾರವಾಡ ತಾಲೂಕಿನ ನರೇಂದ್ರ ಗ್ರಾಮದವರು. ‘ಸಿರಿಗನ್ನಡಂ ಗೆಲ್ಗೆ’ ಎಂಬ ಕನ್ನಡ ಅಭಿಮಾನದ ಮಂತ್ರವನ್ನು ನಾಡಿಗೆ ನೀಡಿದವರು ಇವರೆ! ನರೇಂದ್ರದಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಧಾರವಾಡದಲ್ಲಿ ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿದರು. 1878ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಅವರು ಧಾರವಾಡಕ್ಕೆ ಪ್ರಥಮ ಹಾಗೂ ಮುಂಬೈ ವಿಭಾಗಕ್ಕೆ 21ನೆಯವರಾಗಿ ಉತ್ತೀರ್ಣರಾಗಿದ್ದರು. ವಿದ್ಯಾರ್ಥಿ ವೇತನ ಪಡೆದ ಅವರು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಸೇರಿ ಇಂಟರ್ ಮೀಡಿಯೇಟ್ ನಲ್ಲಿ ಇಡೀ ಮುಂಬೈ ವಿ.ವಿ.ಗೆ 2ನೇ ಸ್ಥಾನ ಪಡೆದರು. 1882ರಲ್ಲಿ ಬಿ.ಎ. ಉಚ್ಛ ತರಗತಿಯಲ್ಲಿ ಪಾಸಾಗಿದ್ದಕ್ಕೆ ಮುಂಬೈ ಸರ್ಕಾರ ಮತ್ತೇ ...

READ MORE

Related Books