ಚಾತುರ್ವರ್ಣ ಧರ್ಮ ದರ್ಶನ

Author : ಕುಮಾರ ಕಕ್ಕಯ್ಯ ಪೋಳ್

Pages 256

₹ 100.00




Year of Publication: 2010
Published by: ಲೋಹಿಯಾ ಪ್ರಕಾಶನ
Address: ಕಪ್ಪಗಲ್ಲು ರಸ್ತೆ, ಬಳ್ಳಾರಿ

Synopsys

ಹಿರಿಯ ಲೇಖಕ ಕುಮಾರ ಕಕ್ಕಯ್ಯ ಪೋಳ್ ಅವರ ಕೃತಿ-ಚಾತುರ್ವರ್ಣ ಧರ್ಮ ದರ್ಶನ. ಚಿತ್ರದುರ್ಗದ ಶ್ರೀ ಮುರಘರಾಜೇಂದ್ರ ಸ್ವಾಮೀಜಿ ಅವರು ಕೃತಿಗೆ ಬೆನ್ನುಡಿ ಬರೆದು ‘ಇಲ್ಲಿಯ ವಿಚಾರಗಳು ವೈಜ್ಞಾನಿಕ, ವಾಸ್ತವಿಕವಾಗಿವೆ. ಒಂದು ವ್ಯವಸ್ಥೆಯು ಶೋಷಣೆಯ ಕೂಪಕ್ಕೆ ತಳ್ಳಲ್ಪಟ್ಟು, ಎಂತಹ ಯಾತನೆಯನ್ನು ಅನುಭವಿಸುತ್ತದೆ ಎಂಬುದನ್ನು ತೆರೆದು ತೋರಲಾಗಿದೆ. ಚರ್ಚಿಸಿದ ವಿಚಾರಗಳು ತಾರ್ಕಿಕವಾಗಿವೆ. ಇಡೀ ಸಮಾಜದ ವ್ಯವಸ್ಥೆಯನ್ನು ದಿಗ್ದರ್ಶಿಸುತ್ತದೆ.’ ಎಂದು ಪ್ರಶಂಸಿಸಿದ್ದಾರೆ.

About the Author

ಕುಮಾರ ಕಕ್ಕಯ್ಯ ಪೋಳ್
(28 July 1926)

ಹಿರಿಯ ಲೇಖಕ ಕುಮಾರ ಕಕ್ಕಯ್ಯ ಪೋಳ್ ಅವರು ಶರಣ ಸಂಪ್ರದಾಯಸ್ಥರು. ವಚನಗಳ ಆಶಯವೇ ಜೀವನ ಶೈಲಿಯಾಗಿಸಿಕೊಂಡವರು. ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾಮದವರು. ಬಿ.ಎಸ್. ಪೋರ್ಳ ಎಂಬುದು ಇವರ ಮೂಲ ಹೆಸರು. ಕುಮಾರ ಕಕ್ಕಯ್ಯ ಪೋಳ್ ಎಂಬುದು ಕಾವ್ಯನಾಮ. ತಂದೆ ಸಾಯಬಣ್ಣ, ತಾಯಿ ರಾಯವ್ವ. ಗಾಂಧೀಜಿ ಅನುಯಾಯಿಗಳಾಗಿ ಸ್ವಾತಂತ್ಯ್ರ ಹೋರಾಠದಲ್ಲಿ ಧುಮುಕಿದ್ದರು. ಪೊಲೀಸರಿಂದ ಅವಮಾನ-ಹಿಂಸೆಗಳನ್ನು ಅನುಭವಿಸಿದರು. ಸಿಂದಗಿಯಲ್ಲಿ 7 ತರಗತಿಯವರೆಗೆ ಓದಿದರು. ನಂತರ, ವಿಜಯಪುರದ ಶ್ರೀ ಸಿದ್ದೇಶ್ವರ ಹೈಸ್ಕೂಲ್ ಸೇರಿ 9 ಹಾಗೂ 10 ತರಗತಿ ಪಾಸು ಮಾಡಿದರು. ತದನಂತರ, ಮುಂಬೈನ ಸೆಕೆಂಡರಿ ಸ್ಕೂಲ್ ...

READ MORE

Related Books