ಛಾಯಾಚಿತ್ರ ಪತ್ರಿಕೋದ್ಯಮ

Author : ಆಸ್ಟ್ರೋ ಮೋಹನ್

Pages 120

₹ 95.00




Year of Publication: 2015
Published by: ಕರ್ನಾಟಕ ಮಾಧ್ಯಮ ಅಕಾಡೆಮಿ
Address: ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಟವರ್, ಡಾ.ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು- 01
Phone: 08022860164

Synopsys

‘ಛಾಯಾಚಿತ್ರ ಪತ್ರಿಕೋದ್ಯಮ’ ಹಿರಿಯ ಛಾಯಾಚಿತ್ರ ಕಲಾವಿದ ಆಸ್ಟ್ರೋ ಮೋಹನ್ ಅವರ ಕೃತಿ. ಮಾಧ್ಯಮದಲ್ಲಿ ತಾಂತ್ರಿಕ ಬೆಳವಣಿಗೆ ಆಗುತ್ತಿದ್ದಂತೆಯೇ ದೃಶ್ಯವೈಭವ ವಿಜೃಂಭಿಸಲಾರಂಭಿಸಿತು. ಫೋಟೋ ಜರ್ನಲಿಸಂ ಬೆಳವಣಿಗೆಯಾದದ್ದು ಹೀಗೆ, 'ಸಾವಿರ ಪದಗಳು ಹೇಳಲಾರದ್ದನ್ನು ಒಂದೇ ಒಂದು ಚಿತ್ರ ವಿವರಿಸುತ್ತದೆ' ಎನ್ನುವ ಮಾತು ಎಂದೆಂದಿಗೂ ಹಸಿರು. ಮುದ್ರಣ ಮಾಧ್ಯಮದಲ್ಲಿ ಈಗ ಅಪಾರ ಬೆಳವಣಿಗೆ, ನಿಲ್ಲದ ವೇಗ, ಈ ವೇಗಕ್ಕೆ ವಿನ್ಯಾಸವೇ ಬದಲು. ಬದಲಾದ ವಿನ್ಯಾಸದಲ್ಲಿ ಮಾಧ್ಯಮಗಳಿಗೆ ಹೊಸ ಸ್ವರೂಪ ಕೊಟ್ಟದ್ದು ಫೋಟೋಗಳ ಮೂಲಕವೇ ಹೇಳುವ ಪರಿಣಾಮಕಾರಿ ಕಥನ. ಮುದ್ರಣ ಮಾಧ್ಯಮದ ಪ್ರಭಾವಿ ಸಂವಹನವಾಗಿರುವ ಛಾಯಾಚಿತ್ರಗಳು ಅಕ್ಷರಸ್ಥರನ್ನೂ, ಅನಕ್ಷರಸ್ಥರನ್ನೂ ಏಕಕಾಲದಲ್ಲಿ ಪ್ರಭಾವಿಸಬಲ್ಲ ಸಾಮರ್ಥ್ಯವನ್ನು ಪಡೆದಿವೆ. ಅಂತಹ ಒಂದು ಇತಿಹಾಸದ ಹಾದಿಯನ್ನು ಗುರುತಿಸುವ ಕೃತಿ ‘ಛಾಯಾಚಿತ್ರ ಪತ್ರಿಕೋದ್ಯಮ’.

About the Author

ಆಸ್ಟ್ರೋ ಮೋಹನ್

ಆಸ್ಟ್ರೋ ಮೋಹನ್, ಕನ್ನಡ ಪತ್ರಿಕೋದ್ಯಮದಲ್ಲಿ ಚಿರಪರಿಚಿತರು. ಉದಯವಾಣಿ ದಿನಪತ್ರಿಕೆಯ ಹಿರಿಯ ನ್ಯೂಸ್ ಪೋಟೋಗ್ರಾಫರ್ ಆಗಿ ಸೇವೆಸಲ್ಲಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಛಾಯಚಿತ್ರದ ಮಹತ್ವವಿವರಿಸುವ ಸಲುವಾಗಿ ‘ಛಾಯಾಚಿತ್ರ ಪತ್ರಿಕೋದ್ಯಮ’ ಕೃತಿಯನ್ನು ರಚಿಸಿದ್ದಾರೆ. ...

READ MORE

Related Books