ಚೆಲುವ ಕನ್ನಡ ನಾಡು (ಮಕ್ಕಳ ಕವಿತೆಗಳು)

Author : ಅಕಬರ ಎ ಸನದಿ

Pages 65

₹ 80.00
Year of Publication: 2015
Published by: ಆದಿತ್ಯ ಪಬ್ಲಿಕೇಷನ್ಸ್‌
Address: ಎಲ್‌ ಐಜಿ 49, ಮಹಾಂತೇಶ್‌ ನಗರ, ಬೆಳಗಾವಿ. 
Phone: 9902791799

Synopsys

ಕವಿ ಅಕಬರ ಸನದಿ ಅವರು ನಾಡು-ನುಡಿ-ಜಲ-ನಿಸರ್ಗದ  ಅಭಿಮಾನದೊಂದಿಗೆ ಬರೆದ ಮಕ್ಕಳ ಕವಿತೆಗಳ ಸಂಕಲನವಿದು-ಚೆಲುವ ಕನ್ನಡ ನಾಡು. ಮಕ್ಕಳು ಕನ್ನಡವನ್ನು ಖುಷಿಯಿದ ಹಾಡುತ್ತಾ  ಕಲಿಯಬೇಕು ಹಾಗೂ ಅವರಲ್ಲಿ ನಾಡು-ನುಡಿ ನಮ್ಮ ಸಂಸ್ಕೃತಿಯೆಡೆಗಿನ ಪ್ರೀತಿ ಹೆಚ್ಚಾಗಬೇಕು ಎಂಬ ಸಂದೇಶ ಈ ಕವಿತೆಗಳಲ್ಲಿದೆ. ಕವಿತೆಗಳ ಭಾಷೆಯು ಸರಳವಾಗಿದೆ. ಹದವಿದೆ. ಸೊಗಸುಗಾರಿಕೆ ಇದೆ. ಕನ್ನಡವನ್ನು ಉಳಿಸಿ, ಬೆಳೆಸಬೇಕು ಎಂಬ ಕಳಕಳಿ ಇದೆ. 

About the Author

ಅಕಬರ ಎ ಸನದಿ

ಕವಿ ಅಕಬರ ಎ. ಸನದಿ ಅವರು ಬೆಳಗಾವಿ ತಾಲುಕಿನ ಶಿಂದೋಳ್ಳಿ ಗ್ರಾಮದವರು. ಸಂಕೇಶ್ವರದ ಹಿಂದೂಸ್ಥಾನ್‌ ಲೇಟೆಕ್ಸ್‌ ಕಾರ್ಖಾನೆಯಲ್ಲಿ ತಾಂತ್ರಿಕ ವೃತ್ತಿ ನಿರ್ವಹಿಸುತ್ತಿದ್ದಾರೆ. ಕನ್ನಡ ಹೋರಾಟಗಾರರು.  ಕೃತಿಗಳು: ನಮ್ಮ ದೇಶ ಭಾರತ, ಗಿಲ್‌ ಗಿಲ್‌ ಗೆಜ್ಜೆ, ಕರುನಾಡ ಸಿರಿ, ಹಾಗೂ ಚೆಲುವ ಕನ್ನಡ ನಾಡು (ಮಕ್ಕಳ ಕವನ ಸಂಕಲನಗಳು) ನನ್ನವಳಿಗಾಗಿ (ಪ್ರೇಮದ ಮುಕ್ತಕಗಳ ಸಂಕಲನ) ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕವಿಗೋಷ್ಠಿಗಳಲ್ಲಿ ಕವನ ವಾಚಿಸಿದ್ದು,  ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ...

READ MORE

Related Books